ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
                                
                            
                            
                    
                                
                                
                                January 31, 2025 at 12:37 AM
                               
                            
                        
                            *ಕನ್ನಡ ನಾಡು* 
ನನ್ನ ಹೆಮ್ಮೆಯ ಕನ್ನಡ ನಾಡು 
ಪುರಾತನ ದೇವಾಲಯಗಳ ನೆಲೆಬೀಡು 
ವಿಹಂಗಮ ನಗರಗಳ ತವರೂರು 
ಹಿರಿಯ ಶ್ರೀಮಂತ ನಾಗರಿಕತೆಯ ನೋಡು 
ಪಶ್ಚಿಮ ಘಟ್ಟಗಳ ಹಾವಿನ ನಡೆ 
ಕರಾವಳಿ ಮೈದಾನಗಳ ಹಾಸಿಗೆಯ ಕಡೆ 
ವಿವಿಧ ಭೂಭಾಗಗಳ ಮುಖಜದ ಬೆಲೆ 
ಪ್ರತಿ ಮೂಲೆಯೂ ಹೊಂದಿರುವುದು ವಿಶೇಷ ಕಲೆ 
ರಾಜ ಮಹಾರಾಜರ ಆಳ್ವಿಕೆಯ ಸೊಗಸು 
ಹೊಯ್ಸಳ ಚಾಲುಕ್ಯರ ಹೆಮ್ಮೆಯ ಬದುಕು 
ಬೇಲೂರು ಹಳೇಬೀಡಿನ ಕಲೆಯ ನಾಜೂಕು 
ಹಂಪಿಯ ಕಲ್ಲಿನ ರಥದ ಹೆಮ್ಮೆಯ ಬದುಕು 
ಕಾಫಿಯ ಘಮಿಸುವ ಕೊಡಗು
ಚಿತ್ತಾರದ ರಸ್ತೆಗಳ ಬೆಂಗಳೂರು 
ಹುಬ್ಬಳ್ಳಿ ಧಾರವಾಡದ ಸಂತೆಯ ಬೀಡು 
ಬಂಗಾರದ ಕಡಲ ತೀರದ ನೆಲೆ ಸೊಗಡು 
ಗೋಕರ್ಣದ ಸೂರ್ಯಾಸ್ತದ ಬೀಡು 
ಕಲೆ ಸಾಹಿತ್ಯದ ನಿರಂತರ ಕೂಡು
ಪರ್ವತಗಳ ಅನುರಣನದ ಗಾನದ ಕೋನು 
ಗಂಧದ ಬೆಲೆ ಕಟ್ಟಲಾರದ ಕಾಡಿನ ಮೇಡು 
ಕಲಬುರ್ಗಿಯ ಬಿಸಿಲಿನ ಕಂಪು 
ಶರಣರ ವಚನಗಳ ಇಂಪು 
ಸೂಫಿಗಳ ಆಧ್ಯಾತ್ಮದ ತವರೂರು 
-ಶಹಾಬುದ್ದೀನ್ ಕೆ
                        
                    
                    
                    
                    
                    
                                    
                                        
                                            👍
                                        
                                    
                                    
                                        1