ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ WhatsApp Channel

ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ

35 subscribers

About ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ

A cool kannada poetry.....and motivation ಹೀಗೊಂದು ನೂತನ ಶುದ್ಧ ಕಾವ್ಯ ಪ್ರಪಂಚಕ್ಕೆ ತಮ್ಮೆಲ್ಲರಿಗೂ ಸ್ವಾಗತ.....

Similar Channels

Swipe to see more

Posts

ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
2/4/2025, 3:57:18 PM

ಕ್ಯಾನ್ಸರ್ ದಿನದ ನಿಮಿತ್ತ ಈ ಕವನ

👍 1
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
2/5/2025, 2:18:37 PM
Post image
Image
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
2/5/2025, 3:02:52 PM

ಹೀಗೊಂದು ಪಕ್ಕ ಉತ್ತರ ಕನ್ನಡ ಗೀತೆ: ನಾನ್ಯಾರೋ ನೀನ್ಯಾರೋ ಜಗಕೆ ಬಂದೀವಿ ತಿಳಿಲಾರ್ದ ಕೂಡಿ ಬಾಳ್ಬೇಕ ಮರಿಲಾರ್ದ ||೧|| ನನ ರುಚಿ ಬೇರೆ ನಿನ ರುಚಿ ಬೇರೆ ಕೂಡಿ ತಿನ್ಬಕ್ ಬಿಡಲಾರ್ದೆ ನಾನ್ಯಾರೋ. ||೨|| ನನ ದಾರಿ ಬೇರೆ ನಿನ ದಾರಿ ಬೇರೆ ಕೂಡಿ ನಡಿಬೇಕ್ ಸೇರ್ಕೊಂಡ ನಾನ್ಯಾರೋ. ||೩|| ನನ ಮನಸು ಬೇರೆ ನಿನ ಮನಸು ಬೇರೆ ಸೇರಿ ಮಾಡ್ಬೇಕ್ ವಿಚಾರ ನಾನ್ಯಾರೋ. | ೪| ನನ ಕಣ್ಣು ಬೇರೆ ನಿನ ಕಣ್ಣು ಬೇರೆ ಸೇರಿ ಕಾಣಬೇಕ್ ಒಂದೆ ಕನಸು ನಾನ್ಯಾರೋ ||೫|| ನನ ಹಠ ಬೇರೆ ನಿನ ಹಠ ಬೇರೆ ಸೇರಿ ಬಿಡ್ಬೇಕು ಹಠವನ್ನು ನಾನ್ಯಾರೋ. ||೬|| ನನ ಊರ್ ಬೇರೆ ನಿನ ಊರ್ ಬೇರೆ ಸೇರಿ ಬಾಳ್ಬೇಕ್ ಜೊತೆಯಾಗಿ ನಾನ್ಯಾರೋ ||೭|| ನನ ಕನಸು ಬೇರೆ ನಿನ ಕನಸು ಬೇರೆ ಸೇರಿ ನೋಡ್ಬೇಕು ಒಂದು ಮನಸು ನಾನ್ಯಾರೋ. ||೮|| ನನ ಬಂಡಿ ಬೇರೆ ನಿನ ಬಂಡಿ ಬೇರೆ ಸೇರಿ ಮುಟ್ಬೇಕ್ ದಡವನ್ನು ನಾನ್ಯಾರೋ ||೯|| ರಚನೆ :ಶಹಾಬುದ್ದೀನ್

👍 1
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
1/31/2025, 12:37:18 AM

*ಕನ್ನಡ ನಾಡು* ನನ್ನ ಹೆಮ್ಮೆಯ ಕನ್ನಡ ನಾಡು ಪುರಾತನ ದೇವಾಲಯಗಳ ನೆಲೆಬೀಡು ವಿಹಂಗಮ ನಗರಗಳ ತವರೂರು ಹಿರಿಯ ಶ್ರೀಮಂತ ನಾಗರಿಕತೆಯ ನೋಡು ಪಶ್ಚಿಮ ಘಟ್ಟಗಳ ಹಾವಿನ ನಡೆ ಕರಾವಳಿ ಮೈದಾನಗಳ ಹಾಸಿಗೆಯ ಕಡೆ ವಿವಿಧ ಭೂಭಾಗಗಳ ಮುಖಜದ ಬೆಲೆ ಪ್ರತಿ ಮೂಲೆಯೂ ಹೊಂದಿರುವುದು ವಿಶೇಷ ಕಲೆ ರಾಜ ಮಹಾರಾಜರ ಆಳ್ವಿಕೆಯ ಸೊಗಸು ಹೊಯ್ಸಳ ಚಾಲುಕ್ಯರ ಹೆಮ್ಮೆಯ ಬದುಕು ಬೇಲೂರು ಹಳೇಬೀಡಿನ ಕಲೆಯ ನಾಜೂಕು ಹಂಪಿಯ ಕಲ್ಲಿನ ರಥದ ಹೆಮ್ಮೆಯ ಬದುಕು ಕಾಫಿಯ ಘಮಿಸುವ ಕೊಡಗು ಚಿತ್ತಾರದ ರಸ್ತೆಗಳ ಬೆಂಗಳೂರು ಹುಬ್ಬಳ್ಳಿ ಧಾರವಾಡದ ಸಂತೆಯ ಬೀಡು ಬಂಗಾರದ ಕಡಲ ತೀರದ ನೆಲೆ ಸೊಗಡು ಗೋಕರ್ಣದ ಸೂರ್ಯಾಸ್ತದ ಬೀಡು ಕಲೆ ಸಾಹಿತ್ಯದ ನಿರಂತರ ಕೂಡು ಪರ್ವತಗಳ ಅನುರಣನದ ಗಾನದ ಕೋನು ಗಂಧದ ಬೆಲೆ ಕಟ್ಟಲಾರದ ಕಾಡಿನ ಮೇಡು ಕಲಬುರ್ಗಿಯ ಬಿಸಿಲಿನ ಕಂಪು ಶರಣರ ವಚನಗಳ ಇಂಪು ಸೂಫಿಗಳ ಆಧ್ಯಾತ್ಮದ ತವರೂರು -ಶಹಾಬುದ್ದೀನ್ ಕೆ

👍 1
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
1/31/2025, 4:53:39 PM

*29. ನಿಲ್ಲಬೇಡ* ನಿಲ್ಲಬೇಡ ನಡೆಯುತ್ತಿರು ತಿರುವುಗಳಿಗೆ ಎದುರಾಗಿ ಕೊನೆ ಮುಟ್ಟುವವರೆಗೆ ನಡೆಯುತ್ತಿರು ನಿಲ್ಲಬೇಡ ನಡೆಯುತ್ತಿರು ಅಡೆತಡೆಗಳನ್ನು ದಾಟಿ ಗಮ್ಯ ಸೇರುವವರಿಗೆ ವಿರಮಿಸದಿರು ನಿಲ್ಲಬೇಡ ನಡೆಯುತ್ತಿರು ಟೀಕೆ ಟಿಪ್ಪಣಿಗಳಿಗೆ ಎದೆಯೊಡ್ಡಿ ಯಶಸ್ಸಿನಡಿಗೆ ಹೋರಾಡುತ್ತಿರು ನಿಲ್ಲಬೇಡ ನಡೆಯುತ್ತಿರು ನಿರಾಶೆಗಳಿಗೆ ತಡೆಯೋಡ್ಡಿ ಆಶಾವಾದೊಂದಿಗೆ ಮುನ್ನಡೆಯುತ್ತಿರು ನಿಲ್ಲಬೇಡ ನಡೆಯುತ್ತಿರು ದಾರಿ ಯಾವುದೇ ಇರಲಿ ದೃಷ್ಟಿಯನ್ನು ಗುರಿಯಡೆಗೆ ಇಟ್ಟು ನಡೆಯುತ್ತಿರು ನಿಲ್ಲಬೇಡ ನಡೆಯುತ್ತಿರು ವಿಫಲತೆಯನ್ನು ದಾಟಿ ಸಫಲತೆಡೆಗೆ ಹೆಜ್ಜೆಯನ್ನಿಡುತ್ತಿರು ನಿಲ್ಲಬೇಡ ನಡೆಯುತ್ತಿರು ವಿರಮಿಸುವುದನ್ನು ಬಿಟ್ಟು ಗುರಿಯಡಗೆ ನಡೆಯುತ್ತಿರು

ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
2/2/2025, 5:07:18 PM

ನಗುತಾ ನಡೆ ನೀನು ಯಾರು ಏನೇ ಹೇಳಲಿ ಪ್ರತಿ ಹೆಜ್ಜೆಯಲ್ಲೂ ನೀನು ಅಳುಕದೇ ನಡೆಯುತ್ತಿರು ಯಾರು ಏನೇ ತೆಗಳಲಿ ||೧|| ನಗುತಾ ನಡೆ ನೀನು ಯಾರು ಏನೇ ಹೇಳಲಿ ನಿನ್ನ ಪ್ರತಿ ನುಡಿಯಲ್ಲಿ ನಮ್ರತೆ ಇರಲಿ ಯಾರು ಏನೇ ಟೀಕಿಸಲಿ. ||೨|| ನಗುತಾ ನಡೆ ನೀನು ಯಾರು ಏನೇ ಹೇಳಲಿ ನಿನ್ನ ಪ್ರತಿ ಕೆಲಸದಲ್ಲಿ ಶ್ರದ್ಧೆ ಇರಲಿ ಯಾರು ಏನೇ ಕಲ್ಪಿಸಲಿ ||೩|| ನಗುತಾ ನಡೆ ನೀನು ಯಾರು ಏನೇ ಹೇಳಲಿ ನಿನ್ನ ಪ್ರತಿ ಸಂಬಂಧದಲ್ಲಿ ಗಾಢತೆ ಇರಲಿ ಯಾರು ಏನು ಬೆಲೆ ಕೊಡದಿರಲಿ. ||೪|| ನಗುತಾ ನಡೆ ನೀನು ಯಾರು ಏನೇ ಹೇಳಲಿ ನಿನ್ನ ಸ್ನೇಹದಲ್ಲಿ ನಂಬಿಕೆ ಇರಲಿ ಯಾರು ಏನೇ ನಂಬದಿರಲಿ ||೫|| ನಗುತಾ ನಡೆ ನೀನು ಯಾರು ಏನೇ ಹೇಳಲಿ ಗೆಳೆಯರೊಂದಿಗೆ ನಿನ್ನ ನಡೆ ಮೃದುವಾಗಿರಲಿ ಯಾರು ಏನೇ ನಂಬಲಿ ||೬|| ನಗುತಾ ನಡೆ ನೀನು ಯಾರು ಏನೇ ಹೇಳಲಿ ಹಿರಿಯರೊಂದಿಗೆ ನಿನ್ನ ಸಹಾನುಭೂತಿ ಇರಲಿ ಯಾರು ಏನೇ ವಿಚಾರಿಸಲಿ ||೭|| ನಗುತಾ ನಡೆ ನೀನು ಯಾರು ಏನೇ ಹೇಳಲಿ ಪರಿಸರ ಕುರಿತು ನಿನ್ನ ಜಾಗೃತೆ ಇರಲಿ ಯಾರು ಏನೇ ಆಮಿಷ ತೋರಿಸಲಿ ||೮|| ನಗುತಾ ನಡೆ ನೀನು ಯಾರು ಏನೇ ಹೇಳಲಿ ದೀನರ ಬಗ್ಗೆ ನಿನ್ನ ದಯೆ ಇರಲಿ ಯಾರು ಏನೇ ಹೇಳಲಿ ||೯|| ನಗುತಾ ನಡೆ ನೀನು ಯಾರು ಏನೇ ಹೇಳಲಿ ದುರ್ಬಲರ ಬಗ್ಗೆ ನಿನ್ನ ಸಹಾಯವಿರಲಿ ಯಾರು ಏನೇ ಬಣ್ಣಿಸಲಿ ||೧೦|| ನಗುತಾ ನಡೆ ನೀನು ಯಾರು ಏನೇ ಹೇಳಲಿ ಪ್ರಪಂಚದ ಬಗ್ಗೆ ಆಶಾವಾದವಿರಲಿ ಯಾರು ಏನೇ ಕಲ್ಪಿಸಲಿ ||೧೧||

ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
2/4/2025, 3:56:39 PM

೩೧. ಕ್ಯಾನ್ಸರ್ ಕ್ಯಾನ್ಸರ್ ಒಬ್ಬ ನಿರ್ದಯಿ ಕಳ್ಳನಾಗಿದ್ದಾನೆ ನಮ್ಮ ಪ್ರೀತಿ ಪಾತ್ರರನ್ನು ನಮಗರಿವೆಲ್ಲದಂತೆ ದೂರ ಮಾಡುತ್ತಾನೆ ನಮ್ಮ ನಂಬಿಕೆಯ ಆಚೆ ನಮ್ಮ ಕುಟುಂಬಗಳನ್ನು ಒಡೆಯುತ್ತಾನೆ ನಮ್ಮನ್ನು ಕೇವಲ ನೆನಪಾಗಿ ಉಳಿಸುತ್ತಾನೆ ಶಾಂತವಾಗಿಯೇ ಸದ್ದಿಲ್ಲದೆ ಯಾವುದೇ ಮುನ್ಸೂಚನೆ ಕೊಡದೆ ನಮ್ಮ ಕೋಶಗಳನ್ನು ನಾಶಪಡಿಸುತ್ತಾನೆ ನಮ್ಮ ಜೀವನವನ್ನೇ ತಿಂದು ಹಾಕುತ್ತಾನೆ ನಮ್ಮ ಹೃದಯದಲ್ಲಿ ಇನ್ನಿಲ್ಲದಂತೆ ಭಯ ಹುಟ್ಟಿಸುತ್ತಾನೆ ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತಾನೆ ಇದೆಲ್ಲದರ ನಡುವೆಯೂ ನಾವು ಅಪ್ರತಿಮ ಹೋರಾಟಗಾರರನ್ನು ಹೊಂದಿದ್ದೇವೆ ಅಂತಹ ಹಲವು ಯುದ್ಧಗಳನ್ನು ಗೆದ್ದಿದ್ದೇವೆ ಕೀಮೊ ಮತ್ತು ರೇಡಿಯೇಶನ್ ಗಳಿಂದ ಆಶಾವಾದಗಳನ್ನು ಹೊಂದಿದ್ದೇವೆ ದೃಢ ನಿರ್ಧಾರ ಎಂದಿಗೂ ಸೋಲೊಪ್ಪದ ಮನಸ್ಥಿತಿಯಿಂದ ಗೆದ್ದಿದ್ದೇವೆ ಈ ಮಹಾಮಾರಿಯ ವಿರುದ್ಧ ಧ್ವನಿ ಎತ್ತೋಣ ದೃಢ ನಿರ್ಧಾರದಿಂದ ಇದನ್ನು ಗೆಲ್ಲೋಣ ಹೋರಾಡುವವರ ಜೊತೆಯಲ್ಲಿ ನಿಲ್ಲೋಣ ಪ್ರೀತಿ ಮತ್ತು ಅಕ್ಕರೆಯಿಂದ ಅವರಿಗೆ ಮನೋಸ್ಥೈರ್ಯ ತುಂಬೋಣ ಎಲ್ಲರೂ ಒಂದಾಗಿ ವಿಜಯ ಸಾಧಿಸೋಣ ಈ ರಾಕ್ಷಸನ ವಿರುದ್ಧ ಅಂತಿಮ ಯುದ್ಧ ಗೆಲ್ಲುವವರೆಗೆ ಹೋರಾಡೋಣ ಆಶೀರ್ವಾದ ಮತ್ತು ನಂಬಿಕೆಯೊಂದಿಗೆ ಹೋರಾಡೋಣ ತನ್ಮೂಲಕ ಕ್ಯಾನ್ಸರ್ ಮುಕ್ತ ದೇಶ ಮತ್ತು ಪ್ರಪಂಚವಾಗಿ ಸೋಣ

🙏 1
Link copied to clipboard!