
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
February 2, 2025 at 05:07 PM
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ಪ್ರತಿ ಹೆಜ್ಜೆಯಲ್ಲೂ ನೀನು ಅಳುಕದೇ ನಡೆಯುತ್ತಿರು
ಯಾರು ಏನೇ ತೆಗಳಲಿ ||೧||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ನಿನ್ನ ಪ್ರತಿ ನುಡಿಯಲ್ಲಿ
ನಮ್ರತೆ ಇರಲಿ
ಯಾರು ಏನೇ ಟೀಕಿಸಲಿ. ||೨||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ನಿನ್ನ ಪ್ರತಿ ಕೆಲಸದಲ್ಲಿ ಶ್ರದ್ಧೆ ಇರಲಿ ಯಾರು ಏನೇ ಕಲ್ಪಿಸಲಿ ||೩||
ನಗುತಾ ನಡೆ ನೀನು ಯಾರು ಏನೇ ಹೇಳಲಿ
ನಿನ್ನ ಪ್ರತಿ ಸಂಬಂಧದಲ್ಲಿ ಗಾಢತೆ ಇರಲಿ
ಯಾರು ಏನು ಬೆಲೆ ಕೊಡದಿರಲಿ. ||೪||
ನಗುತಾ ನಡೆ ನೀನು ಯಾರು ಏನೇ ಹೇಳಲಿ
ನಿನ್ನ ಸ್ನೇಹದಲ್ಲಿ ನಂಬಿಕೆ ಇರಲಿ
ಯಾರು ಏನೇ ನಂಬದಿರಲಿ ||೫||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ಗೆಳೆಯರೊಂದಿಗೆ ನಿನ್ನ ನಡೆ ಮೃದುವಾಗಿರಲಿ
ಯಾರು ಏನೇ ನಂಬಲಿ ||೬||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ಹಿರಿಯರೊಂದಿಗೆ ನಿನ್ನ ಸಹಾನುಭೂತಿ ಇರಲಿ
ಯಾರು ಏನೇ ವಿಚಾರಿಸಲಿ ||೭||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ಪರಿಸರ ಕುರಿತು ನಿನ್ನ ಜಾಗೃತೆ ಇರಲಿ
ಯಾರು ಏನೇ ಆಮಿಷ ತೋರಿಸಲಿ ||೮||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ದೀನರ ಬಗ್ಗೆ ನಿನ್ನ ದಯೆ ಇರಲಿ ಯಾರು ಏನೇ ಹೇಳಲಿ ||೯||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ದುರ್ಬಲರ ಬಗ್ಗೆ ನಿನ್ನ ಸಹಾಯವಿರಲಿ
ಯಾರು ಏನೇ ಬಣ್ಣಿಸಲಿ ||೧೦||
ನಗುತಾ ನಡೆ ನೀನು
ಯಾರು ಏನೇ ಹೇಳಲಿ
ಪ್ರಪಂಚದ ಬಗ್ಗೆ ಆಶಾವಾದವಿರಲಿ
ಯಾರು ಏನೇ ಕಲ್ಪಿಸಲಿ ||೧೧||