ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
February 4, 2025 at 03:56 PM
೩೧. ಕ್ಯಾನ್ಸರ್ ಕ್ಯಾನ್ಸರ್ ಒಬ್ಬ ನಿರ್ದಯಿ ಕಳ್ಳನಾಗಿದ್ದಾನೆ ನಮ್ಮ ಪ್ರೀತಿ ಪಾತ್ರರನ್ನು ನಮಗರಿವೆಲ್ಲದಂತೆ ದೂರ ಮಾಡುತ್ತಾನೆ ನಮ್ಮ ನಂಬಿಕೆಯ ಆಚೆ ನಮ್ಮ ಕುಟುಂಬಗಳನ್ನು ಒಡೆಯುತ್ತಾನೆ ನಮ್ಮನ್ನು ಕೇವಲ ನೆನಪಾಗಿ ಉಳಿಸುತ್ತಾನೆ ಶಾಂತವಾಗಿಯೇ ಸದ್ದಿಲ್ಲದೆ ಯಾವುದೇ ಮುನ್ಸೂಚನೆ ಕೊಡದೆ ನಮ್ಮ ಕೋಶಗಳನ್ನು ನಾಶಪಡಿಸುತ್ತಾನೆ ನಮ್ಮ ಜೀವನವನ್ನೇ ತಿಂದು ಹಾಕುತ್ತಾನೆ ನಮ್ಮ ಹೃದಯದಲ್ಲಿ ಇನ್ನಿಲ್ಲದಂತೆ ಭಯ ಹುಟ್ಟಿಸುತ್ತಾನೆ ನಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತಾನೆ ಇದೆಲ್ಲದರ ನಡುವೆಯೂ ನಾವು ಅಪ್ರತಿಮ ಹೋರಾಟಗಾರರನ್ನು ಹೊಂದಿದ್ದೇವೆ ಅಂತಹ ಹಲವು ಯುದ್ಧಗಳನ್ನು ಗೆದ್ದಿದ್ದೇವೆ ಕೀಮೊ ಮತ್ತು ರೇಡಿಯೇಶನ್ ಗಳಿಂದ ಆಶಾವಾದಗಳನ್ನು ಹೊಂದಿದ್ದೇವೆ ದೃಢ ನಿರ್ಧಾರ ಎಂದಿಗೂ ಸೋಲೊಪ್ಪದ ಮನಸ್ಥಿತಿಯಿಂದ ಗೆದ್ದಿದ್ದೇವೆ ಈ ಮಹಾಮಾರಿಯ ವಿರುದ್ಧ ಧ್ವನಿ ಎತ್ತೋಣ ದೃಢ ನಿರ್ಧಾರದಿಂದ ಇದನ್ನು ಗೆಲ್ಲೋಣ ಹೋರಾಡುವವರ ಜೊತೆಯಲ್ಲಿ ನಿಲ್ಲೋಣ ಪ್ರೀತಿ ಮತ್ತು ಅಕ್ಕರೆಯಿಂದ ಅವರಿಗೆ ಮನೋಸ್ಥೈರ್ಯ ತುಂಬೋಣ ಎಲ್ಲರೂ ಒಂದಾಗಿ ವಿಜಯ ಸಾಧಿಸೋಣ ಈ ರಾಕ್ಷಸನ ವಿರುದ್ಧ ಅಂತಿಮ ಯುದ್ಧ ಗೆಲ್ಲುವವರೆಗೆ ಹೋರಾಡೋಣ ಆಶೀರ್ವಾದ ಮತ್ತು ನಂಬಿಕೆಯೊಂದಿಗೆ ಹೋರಾಡೋಣ ತನ್ಮೂಲಕ ಕ್ಯಾನ್ಸರ್ ಮುಕ್ತ ದೇಶ ಮತ್ತು ಪ್ರಪಂಚವಾಗಿ ಸೋಣ
🙏 1

Comments