
ಕಾವ್ಯ ಸ್ಫೂರ್ತಿ-ಸಾಹಿತ್ಯ ವೇದಿಕೆ
February 5, 2025 at 03:02 PM
ಹೀಗೊಂದು ಪಕ್ಕ ಉತ್ತರ ಕನ್ನಡ ಗೀತೆ:
ನಾನ್ಯಾರೋ
ನೀನ್ಯಾರೋ
ಜಗಕೆ ಬಂದೀವಿ ತಿಳಿಲಾರ್ದ
ಕೂಡಿ ಬಾಳ್ಬೇಕ ಮರಿಲಾರ್ದ ||೧||
ನನ ರುಚಿ ಬೇರೆ
ನಿನ ರುಚಿ ಬೇರೆ
ಕೂಡಿ ತಿನ್ಬಕ್ ಬಿಡಲಾರ್ದೆ
ನಾನ್ಯಾರೋ. ||೨||
ನನ ದಾರಿ ಬೇರೆ
ನಿನ ದಾರಿ ಬೇರೆ
ಕೂಡಿ ನಡಿಬೇಕ್
ಸೇರ್ಕೊಂಡ
ನಾನ್ಯಾರೋ. ||೩||
ನನ ಮನಸು ಬೇರೆ
ನಿನ ಮನಸು ಬೇರೆ
ಸೇರಿ ಮಾಡ್ಬೇಕ್ ವಿಚಾರ
ನಾನ್ಯಾರೋ. | ೪|
ನನ ಕಣ್ಣು ಬೇರೆ
ನಿನ ಕಣ್ಣು ಬೇರೆ
ಸೇರಿ ಕಾಣಬೇಕ್
ಒಂದೆ ಕನಸು
ನಾನ್ಯಾರೋ ||೫||
ನನ ಹಠ ಬೇರೆ
ನಿನ ಹಠ ಬೇರೆ
ಸೇರಿ ಬಿಡ್ಬೇಕು ಹಠವನ್ನು
ನಾನ್ಯಾರೋ. ||೬||
ನನ ಊರ್ ಬೇರೆ
ನಿನ ಊರ್ ಬೇರೆ
ಸೇರಿ ಬಾಳ್ಬೇಕ್
ಜೊತೆಯಾಗಿ
ನಾನ್ಯಾರೋ ||೭||
ನನ ಕನಸು ಬೇರೆ
ನಿನ ಕನಸು ಬೇರೆ
ಸೇರಿ ನೋಡ್ಬೇಕು
ಒಂದು ಮನಸು
ನಾನ್ಯಾರೋ. ||೮||
ನನ ಬಂಡಿ ಬೇರೆ
ನಿನ ಬಂಡಿ ಬೇರೆ
ಸೇರಿ ಮುಟ್ಬೇಕ್
ದಡವನ್ನು
ನಾನ್ಯಾರೋ ||೯||
ರಚನೆ :ಶಹಾಬುದ್ದೀನ್
👍
1