Panchajanya IAS UPSC - IAS in Kannada
Panchajanya IAS UPSC - IAS in Kannada
February 25, 2025 at 04:02 PM
Plato claims that democracy is a danger due to excessive freedom. He also argues that, in a system in which everyone has a right to rule, all sorts of selfish people who care nothing for the people but are only motivated by their own personal desires are able to attain power. - Source. "ಅತಿಯಾದ ಸ್ವಾತಂತ್ರ್ಯ, ದೊರೆಯುವುದರಿಂದ ಪ್ರಜಾಪ್ರಭುತ್ವವು ಅತ್ಯಂತ ಅಪಾಯಕಾರಿ ಎಂದು ಪ್ಲೇಟೋ ಹೇಳುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನಿಗೂ ಆಡಳಿತ ನಡೆಸುವ ಹಕ್ಕು ದೊರೆಯುತ್ತದೆ. ಹಾಗಾಗಿ, ಇಲ್ಲಿ, ಜನರ ಬಗ್ಗೆ ಕನಿಷ್ಠ ಕಾಳಜಿ - ಕನಿಕರ - ಕರುಣೆಯಿಲ್ಲದ, ಕೇವಲ ತಮ್ಮ ವೈಯಕ್ತಿಕ ಬಯಕೆಗಳನ್ನು ತೀರಿಸಿಕೊಳ್ಳುವ ಕಡು ಸ್ವಾರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗುತ್ತಾರೆಂದು ಆತ ವಾದಿಸುತ್ತಾನೆ." ಈಗಿನ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇದೇ ಕಂಡುಬರುತ್ತಿದೆ! ಇದಕ್ಕೆ ಅರಿಸ್ಟಾಟಲ್ ಒಂದು ಪರಿಹಾರ ಕೂಡ ಕೊಟ್ಟಿದ್ದ, ಅದನ್ನು Ethics ಪುಸ್ತಕಗಳಲ್ಲಿ ಓದುತ್ತೀರಿ. ಅರಿಸ್ಟಾಟಲ್ ಹೇಳುತ್ತಾನೆ, 1. ರಾಜ ಸಂಸಾರಿಯಾಗಿರಬೇಕು. (ಅಂದಾಗ ಮಾತ್ರ ಜನರ ಕಷ್ಟ ಅವನಿಗೆ ಅರಿವಾಗುತ್ತದೆ) 2. ಮಂತ್ರಿಗಳು ಆಯಾ ವಿಷಯಗಳ ಪಂಡಿತರಾಗಿರಬೇಕು, ಮತ್ತು ಕಡ್ಡಾಯವಾಗಿ ಬ್ರಹ್ಮಚಾರಿಗಳಾಗಿರಬೇಕು/ವಿರಕ್ತರಾಗಿರಬೇಕು! ನಮಗೆ, ಪ್ರಜಾಪ್ರಭುತ್ವ ವರವಾಗುವ ಬದಲು ಶಾಪವಾಗಿದೆ! ಶೂರರು ಗದ್ದುಗೆ ಹಿಡಿಯುವ ಬದಲು ಶಕುನಿಗಳದ್ದೇ ಕಾರುಬಾರಾಗಿದೆ! ಪ್ರಜೆಗಳಿಗೆ ಅನ್ನ - ಶಿಕ್ಷಣದ ಕೊರತೆ ಮಾಡಿ, ರಾಜಕಾರಣಿಗಳು ಮೆರೆಯುತ್ತಿದ್ದಾರೆ. ಮೆರೆಯಲಿ. ಕಾಲ ಹಣ್ಣಾದಾಗ ಪ್ರಜೆಗಳು ಬೀಸುವ ಕಲ್ಲುಗಳು ರಪಾ ರಪ್ಪನೆ ರಪಾ ರಪ್ಪನೆ ಮೂಗಿಗೊಂದು ಗೋಣಿಗೊಂದು ಎದೆಗೊಂದು ಹೊಟ್ಟೆಗೊಂದು ಕೈಗೊಂದು ಕಾಲಿಗೊಂದು ಕೊನೆಗೆ ತಲೆಗೊಂದು. - ಪ್ರವೀಣ ಮ ಮಗದುಮ್ಮ

Comments