
K SHIVANAGOUDA NAYAKA
February 13, 2025 at 03:43 AM
ಜನಪದ ಕೋಗಿಲೆ ಎಂದೇ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ನಾಡೋಜಾ ಸುಕ್ರಿ ಬೊಮ್ಮಗೌಡ (91) ವಯೋ ಸಹಜ ಕಾಯಿಲೆಯಿಂದಾಗಿ ಇಂದು ಸ್ವ ಗೃಹದಲ್ಲಿ ನಿಧನ ಹೊಂದಿದ್ದ ಸುದ್ದಿ ಬಹಳ ದುಃಖ ತರಿಸಿದೆ.
2017 ರಲ್ಲಿ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ರಾಜ್ಯ, ರಾಷ್ಟ್ರದ ಹಲವು ಪ್ರಶಸ್ತಿ ಪಡೆದಿದ್ದ ಇವರು ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ. ಅನೇಕ ಹೋರಾಟಗಳ ಮುಂಚೂಣಿ ಯಲ್ಲಿ ಇರುತ್ತಿದ್ದರು.
ಸುಕ್ರಜ್ಜಿ ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
ಓಂ ಶಾಂತಿ 🙏
ಕೆ ಶಿ ನಾ 🙏
🙏
😢
7