
ಗುರುಪ್ರಸಾದ್ ಆಚಾರ್ಯ ಕುಂಜೂರು
February 1, 2025 at 01:42 PM
#ಅಂತರಾಳದಿಂದ
ವಿಕ್ರಮ ವಾರಪತ್ರಿಕೆಯಲ್ಲಿ " ಭಾರತೀಯ ಸಂಸ್ಕೃತಿ ಉತ್ಸವ " ದ ಬಗೆಗಿನ ಲೇಖನ ಓದಿ ಬೆರಗುಗೊಂಡಿದ್ದೆ.. ಅದರ ಆಯೋಜಕರಾದ ಬಸವರಾಜ ಪಾಟೀಲ ಸೇಡಮ್ ಅವರ ಸಂದರ್ಶನ ಓದುತ್ತಿದ್ದಾಗ... ಅವರು ಹೇಳಿದ ಘಟನೆಯೊಂದು ಮನಸೆಳೆಯಿತು.. ಅವರು ಹೇಳುತ್ತಾರೆ...
" ಕಲಬುರಗಿ ಕಂಪು ಕಾರ್ಯಕ್ರಮಕ್ಕೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಂದಿದ್ದರು. ಅನೇಕ ವಿದ್ಯಾರ್ಥಿಗಳು ಕಲಾಂ ಅವರನ್ನು ಪ್ರಶ್ನೆ ಕೇಳುತ್ತಿದ್ದರು. ಕೊನೆಯ ಪ್ರಶ್ನೆಯನ್ನು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಕೇಳಿದಳು. 'ಎಷ್ಟು ಜನ ಮಕ್ಕಳು ಮುಂದೆ ಐಎಎಸ್, ಐಪಿಎಸ್, ಇಂಜಿನಿಯರ್, ಡಾಕ್ಟರ್ ಆಗುತ್ತೀರಿ ಎಂದು ಕೇಳಿದಿರಿ. ಆದರೆ ಎಷ್ಟು ಜನ ರೈತರಾಗುತ್ತೀರಿ ಎಂದು ನೀವು ಏಕೆ ಕೇಳಲಿಲ್ಲ?' ಎಂದು ಕಲಾಂ ಅವರನ್ನು ವಿದ್ಯಾರ್ಥಿನಿ ಕೇಳಿದಳು. ಅಂದು ಸಭಾಮಂಟಪದಲ್ಲಿ ಕೇಳಿದ ಚಪ್ಪಾಳೆಯನ್ನು ನನ್ನ ಜೀವನದಲ್ಲಿ ಇಲ್ಲಿವರೆಗೆ ಕೇಳಿಲ್ಲ. ನಾನು ಕಲಾಂ ಅವರ ಪಕ್ಕದಲ್ಲಿದ್ದೆ, ಒಂದು ಇಪ್ಪತ್ತು ಸೆಕೆಂಡುಗಳ ನಂತರ ಕಲಾಂ ಅವರು ತಮ್ಮಷ್ಟಕ್ಕೆ ತಾವೇ 'ಐ ನೆವರ್ ಥಾಟ್ ಆಫ್ ಇಟ್ (ನಾನು ಇದರ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ) ಎಂದರು. ಮುಂದೆ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತ, ನಾನು ವಿದ್ಯಾರ್ಥಿನಿಯಿಂದ ಪಾಠ ಕಲಿತೆ. ಇನ್ನುಮುಂದೆ ಎಲ್ಲಿಗೇ ಹೋದರೂ, ಎಷ್ಟು ಜನ ರೈತರಾಗುತ್ತೀರಿ ಎಂದು ಕೇಳುವುದಾಗಿ ತಿಳಿಸಿದರು. ಆ ಮಾತು ದೇಶಾದ್ಯಂತ ದೊಡ್ಡ ಸುದ್ದಿಯಾಯಿತು."
ನಿಜ ಅಲ್ವಾ.. ನಾವಾದರೂ ಅಷ್ಟೇ ಏನಾಗ ಬಯಸುತ್ತಿ..? ಅಂತ ಮಕ್ಕಳಲ್ಲಿ ಕೇಳುವಾಗ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬಯಸುತ್ತಾರೆ ಅಂತಲೇ ಅನುಮಾನಿಸುತ್ತೇವೆ... ಯಾಕೆ ಮಕ್ಕಳು ರೈತರಾಗಬಾರದು..ರೈತನಾಗಬಯಸುವುದೂ ಕೂಡಾ ನಮ್ಮ ಮಕ್ಕಳ ಬಯಕೆಗಳಲ್ಲಿ ಒಂದಾಗಲಿ ಎನ್ನೋಣ..
👍
2