ಗುರುಪ್ರಸಾದ್ ಆಚಾರ್ಯ ಕುಂಜೂರು WhatsApp Channel

ಗುರುಪ್ರಸಾದ್ ಆಚಾರ್ಯ ಕುಂಜೂರು

206 subscribers

About ಗುರುಪ್ರಸಾದ್ ಆಚಾರ್ಯ ಕುಂಜೂರು

ಓದಲು ಸಿಕ್ಕ ವಿಷಯಗಳು, ಕೇಳಲು ಸಿಕ್ಕ ವಿಷಯಗಳು ಮತ್ತು ಯಾವುದೇ ವಿಚಾರದ ಬಗೆಗಿನ ನನ್ನನಿಸಿಕೆಗಳು..

Similar Channels

Swipe to see more

Posts

ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/25/2025, 3:05:35 AM

ಪ್ರತಿಯೊಂದು ಕ್ರಿಯೆಯ ಹಿಂದೆ ಆಲೋಚನೆಯಿರುತ್ತದೆ ಮತ್ತು ಪ್ರತಿಯೊಂದು ಆಲೋಚನೆಯ ಹಿಂದೆ ಆಸೆ ಅಥವಾ ಇಚ್ಛೆ ಇರುವುದು. “ಆಸೆ-ಆಲೋಚನೆ-ಕ್ರಿಯೆ' ಈ ಮೂರು ಎಳೆಗಳು ಹೊಸೆದುಕೊಂಡು ಕರ್ಮದ ಹಗ್ಗವಾಗಿದೆ. ನಮ್ಮ ಕ್ರಿಯೆಗಳು ನಮ್ಮ ಸುತ್ತಲಿನ ಜನರಿಗೆ ಸಂತೋಷವನ್ನೂ ಅಥವಾ ದುಃಖವನ್ನೂ ಕೊಡಬಹುದು. ಅವರಿಗೆ ಸಂತೋಷವನ್ನು ಕೊಟ್ಟರೆ, ನಾವು ಸಂತೋಷದ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೆ ಸಂತೋಷವನ್ನೇ ಕೊಡುವುದು. ಇಲ್ಲವೆ, ಅವರಿಗೆ ದುಃಖವನ್ನು ಕೊಟ್ಟರೆ, ನಾವು ದುಃಖದ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೆ ದುಃಖವನ್ನೇ ಕೊಡುವುದು. ಅಂತೆಯೇ ನಾವು ಕ್ರೂರಿಗಳಾಗಿದ್ದರೆ, ನಮಗೂ ಕ್ರೂರಫಲವೇ ದೊರಕುವುದು. ನಾವು ದಯಾಪರರಾಗಿ ದ್ದರೆ, ದಯೆಯ ಬೀಜವನ್ನು ಬಿತ್ತಿದಂತೆ: ಅದು ಬೆಳೆದು ನಮಗೂ ದಯೆಯೇ ದೊರಕುವುದು. ನಾವು ಕ್ರಿಯೆಯಿಂದ ಏನನ್ನು ಬಿತ್ತುತ್ತೇವೆಯೊ ಅದು ನಮಗೆ ಹಿಂದಿರುಗಿಬರುವುದು. ಇದು ಕರ್ಮ. ಕೃತಿ : ಸನಾತನ ಧರ್ಮ

🙏 2
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/25/2025, 7:30:37 AM

ನೆಚ್ಚಿಕೊಳ್ಳುವ ಪರಿ.. ಆಧುನಿಕತೆಗೆ ತೆರೆದುಕೊಂಡಂತೆಲ್ಲಾ ನಮ್ಮ ಭಾಂಧವ್ಯದ ಸರ್ಕಲ್ ಸಣ್ಣಸಣ್ಣದಾಗುತ್ತಲೇ ಇದೆ.. ನಾವು ತೀರಾ ಆತ್ಮೀಯರನ್ನಾಗಿಸುವುದು ಕೆಲವೇ ಕೆಲವು ಜನರನ್ನು ಮಾತ್ರ.. ಹಿಂದಿನ ಕಾಲದ ಬಾಂಧವ್ಯ ಸಂಬಂಧಿಗಳಲ್ಲೂ ವ್ಯಾಪಕವಾಗಿ ಹರಡಿತ್ತು.. ಈ ಕಾಲದಲ್ಲಿ ಎಲ್ಲರನ್ನೂ ನಾವು ಅನುಮಾನದ ದೃಷ್ಟಿಯಿಂದಲೇ ನೋಡುವುದು. " ಮೇಯಳಗನ್ " ಸಿನಿಮಾದಲ್ಲೊಂದು ಸನ್ನಿವೇಶವಿದೆ ನನ್ನನ್ನ ಬಹುವಾಗಿ ಕಾಡಿದ ಸನ್ನಿವೇಶ.. ಇಪ್ಪತ್ತು ವರುಷಗಳ ನಂತರ ಊರಿಗೆ ಬರುವ ನಾಯಕನಿಗೆ ಇನ್ನೊಬ್ಬ ನಾಯಕನ ( ಸಂಬಂಧಿ ) ಸರಿಯಾದ ಪರಿಚಯವಾಗದೇ ಆತನೊಂದಿಗೆ ಒಡನಾಟ ಏರ್ಪಡುತ್ತದೆ. ಅದೆಷ್ಟು ಬಾರಿ ಬೇರೆ ಬೇರೆ ಜನರ ಬಳಿ ಆತ ಯಾರು..? ಅಂತ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾನಾದರೂ ಆತನ ಪ್ರಯತ್ನ ಫಲ ನೀಡುವುದಿಲ್ಲ. ಕೊನೆಗೆ ತನ್ನ ಹೆಸರನ್ನ ಕೂಗಿ ಕರೆಯಬೇಕು ಅನ್ನುವ ದ್ವೀತಿಯ ನಾಯಕನ ಮಾತು ಕೇಳಿ ಒಳಗೊಳಗೆ ತೀರಾ ಹಿಂಸೆ ಅನುಭವಿಸುವ ನಾಯಕ ದ್ವಿತೀಯ ನಾಯಕನ ಮನೆಯಿಂದ ಹೇಳದೆ ಕೇಳದೆ ಓಡಿ ತನ್ನೂರಿಗೆ ಹೋಗಿ ಬಿಡುತ್ತಾನೆ... ಕಾಲ ಕಳೆಯುತ್ತದೆ ನಗರಕ್ಕೆ ಬಂದ ನಾಯಕ ದ್ವಿತೀಯ ನಾಯಕನ ಜತೆ ಮಾತೇ ಆಡುವುದಿಲ್ಲ.. ಹಾಗೆ ಕಾಲ ಸಾಗಿ ನಾಯಕ ನಗರದಲ್ಲಿ ತಾನಿರುವ ಮನೆಯನ್ನ ಖರೀಸಲು ಪ್ರಯತ್ನ ಪಡುತ್ತಾ ತನ್ನ ಮನೆ ಕೊಳ್ಳಲು ಬೇಕಾದಷ್ಟು ಹಣದ ಅರೇಂಜ್ ಮಾಡಿಕೊಂಡಿರುವ ಹೊತ್ತಲ್ಲೇ ಮಗಳ ಕಾರಣದಿಂದ ದ್ವಿತೀಯ ನಾಯಕನಿಗೆ ಕಾಲ್ ಮಾಡಿದಾಗ ಆತ ಮಾತನಾಡುತ್ತಾ ಮಾತನಾಡುತ್ತಾ.. " ನಿಮಗೆ ಅದೇನೋ ಮನೆ ಖರೀದಿಗೆ ಹಣ ಬೇಕಂತಲ್ವಾ.. ನನ್ನ ಬಳಿ ಹದಿನೈದು ಲಕ್ಷ ಇದೆ.. ನನ್ನ ಹೆಂಡತಿ ಒಡವೆ ಅಡವಿಟ್ಟರೆ.. ಇಂತಿಷ್ಟು ಸಿಗುತ್ತದೆ.. " ಅಂತೆಲ್ಲಾ ತನ್ನದೇ ಸಮಸ್ಯೆ ಎನ್ನುವಂತೆ ಮಾತನಾಡುತ್ತಾನೆ... ಅತ್ತ ನಾಯಕ ನನಗೆ ಹಣದ ಆವಶ್ಯಕತೆ ಇಲ್ಲ ಅಂದರೂ ಈತ ತನ್ನಿಂದ ಹಣ ತೆಗೆದುಕೊಳ್ಳಲೇಬೇಕು ಅಂತೆಲ್ಲಾ ಮಾತನಾಡುವ ಸನ್ನಿವೇಶ.. ನಿಜಕ್ಕೂ ನನ್ನನ್ನ ಕಾಡಿತ್ತು.. ಸಾಮಾನ್ಯವಾಗಿ ಯಾವುದೋ ದೂರದ ಸಂಬಂಧಿ ನಮಗೆ ಕಾಲ್ ಮಾಡಿದ ಕೂಡಲೇ ನಮ್ಮ ತಲೆಯೊಳಗೆ ಓಡುವುದೇ... " ಇವನ್ಯಾಕೆ ಕಾಲ್ ಮಾಡಿದ..? ಹಣ ಏನಾದರೂ ಬೇಕಾಗಿತ್ತಾ..? ಹೇಗಪ್ಪಾ ಇವನನ್ನ ಸಾಗಹಾಕೋದು " ಅಂತ ಒದ್ದಾಡುತ್ತೇವೆ.. ಆದರೆ ಸನ್ನಿವೇಶದಲ್ಲಿ ನಾಯಕನಿಗೊದಗಿದ ಪರಿಸ್ಥಿತಿ ನೋಡಿ... ಮೊದಲೇ ಆತನ ಪರಿಚಯ ತನಗೆ ಸರಿಯಾಗಿ ಆಗಿಲ್ಲ ಅನ್ನುವ ಭಾವದ ಜತೆಗೇ.. ದ್ವಿತೀಯ ನಾಯಕನಿಗೆ ಹೇಳದೆ ಕೇಳದೆ ವಾಪಾಸು ಬಂದು.. ಕಾಲ್ ಮಾಡಿ ಮಾತನಾಡುವುದಾದರೂ ಯಾವಾಗ ಹಣ ಅರೇಂಜ್ಮೆಂಟ್ ನಡೆಯುತ್ತಿರುವಾಗ... ಆತ ಏನೆಂದು ಕೊಂಡಾನೋ ಅನ್ನುವ ಭಾವ ಒಂದೆಡೆಯಾದರೆ ಇಂತಹಾ ಸಮಯದಲ್ಲಿ ಕಾಲ್ ಮಾಡಿದ್ದರ ಕುರಿತಾಗಿ ಆತ ಏನೆಂದುಕೊಳ್ಳುತ್ತಾನೋ ಅನ್ನುವ ಭಾವ ಇನ್ನೊಂದು ಕಡೆ... ಆದರೆ ಅದಕ್ಕೆ ತದ್ವಿರುದ್ಧವಾಗಿ ದ್ವಿತೀಯ ನಾಯಕ ಹಣಕ್ಕಾಗುವಾಗ ಕಾಲ್ ಮಾಡಿದ ಎನ್ನುವ ದೃಷ್ಟಿಯಿಂದ ಯೋಚಿಸದೆ ತನ್ನ ಉಳಿಕೆಯ ಹಣವನ್ನೂ, ಹೆಂಡತಿಯ ಒಡವೆಯನ್ನೂ ಅಡವಿಡಲು ತಯಾರಾಗುತ್ತಾನೆಂದರೆ ಆತನ ವ್ಯಕ್ತಿತ್ವ ಎಂತಹಾ ಶ್ರೇಷ್ಠ ಮಟ್ಟದ್ದು..? ನಿಜವೇ ಈ ಕಾಲಕ್ಕೆ ಅಂತಹಾ ಬಾಂಧ್ಯವ್ಯ ಕಂಡು ಬರುವುದು ಕಷ್ಟವೇ ಹೌದಾದರೂ ಅದೆಂತಹಾ ಭಾವ ಅಲ್ವಾ.. ಒಬ್ಬ ವ್ಯಕ್ತಿಯನ್ನ ಅಷ್ಟು ಉನ್ನತ ಸ್ಥರದಲ್ಲಿ ಇರಿಸಿ ಗೌರವಿಸುತ್ತಾ ಅಥವಾ ಪ್ರೀತಿಸದ ಹೊರತು ನಮ್ಮೊಳಗೆ ಈ ರೀತಿಯ ತ್ಯಾಗ ಮನೋಭಾವ ಬಾರದು ಅಲ್ವೇ..???

👍 ❤️ 😢 5
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/30/2025, 11:19:56 AM

ಅಂತರಾಳದಿಂದ ಈ ತಿಂಗಳ ವಿಕ್ರಮ ವಾರಪತ್ರಿಕೆಯಲ್ಲೊಂದು ಲೇಖನವಿದೆ. " ಸುಳ್ಳು ಸುದ್ದಿಗಳು ಮತ್ತು ಸಮಾಜ " ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಸ್ತುತ ಮಾಧ್ಯಮದಲ್ಲಿ ಬರುವ ಸುಳ್ಳು ಸುದ್ದಿಗಳ ಕುರಿತಾದ ಲೇಖನ. ಇಂಚರ ಜಿ.ಜಿ ಅನ್ನುವವರು ಬರೆದದ್ದು. ಒಳ್ಳೆಯ ಲೇಖನವೇ ಹೌದು. ಆ ಲೇಖನದ ಆರಂಭದ ಪ್ಯಾರಾದಲ್ಲಿ ಸುಳ್ಳು ಮತ್ತು ಸತ್ಯಕ್ಕಿರುವ ಬೆಲೆಯ ಬಗ್ಗೆ ವಿವರಿಸುತ್ತಾ ಅವರು ಹೀಗೆ ಬರೆಯುತ್ತಾರೆ.. " ' ಅಶ್ವತ್ಥಾಮ ಹತಃ ಕುಂಜರಃ ' ಎಂಬ ಯುಧಿಷ್ಠಿರನ ಒಂದು ಮಾತು ಕುರುಕ್ಷೇತ್ರ ಯುದ್ಧದ ರೂಪುರೇಷೆಯನ್ನೇ ಬದಲಾಯಿಸಿತು. ಆಚಾರ್ಯ ದ್ರೋಣರು ಯುದ್ಧದಿಂದ ಕೈಚೆಲ್ಲಿದರೇನೋ ಸರಿ, ಆದರೆ ಇದೇ ಒಂದು ಸುಳ್ಳಿಗೆ ಯುಧಿಷ್ಠಿರನ ರಥ ನೆಲಕ್ಕೆ ತಗ್ಗಿತು ಎಂದು ಕೇಳಿದ್ದೇವೆ. ಕೊನೆಗೆ ಆತನಿಗೆ ನರಕ ದರ್ಶನವೂ ಆಯಿತು. ಸತ್ಯಕ್ಕೆ ಸಾವಿಲ್ಲ ಎಂಬುದು ಕಾಲಕಾಲದಲ್ಲೂ ಎಷ್ಟೇ ನಿಜವಾದರೂ ಸುಳ್ಳಿನ ವೇಗೋತ್ಕರ್ಷದ ಮುಂದೆ ಸತ್ಯ ಕುಂಟುತ್ತಲೇ ಸಾಗಿದೆ. " ' ಅಶ್ವತ್ಥಾಮ ಹತಃ ಕುಂಜರಃ ' ಅನ್ನುವ ಘಟನೆಯನ್ನ ಅನೇಕರು ಉದಾಹರಿಸುತ್ತಾ ಯುಧಿಷ್ಠಿರನ ರಥ ಕೆಳಕ್ಕೆ ಜಗ್ಗಿತು.. ಅಂತ ಹೇಳುತ್ತಾರೆ.. ವಾಸ್ತವದಲ್ಲಿ ಭೀಮ ಆ ಹೊತ್ತಿಗೆ ಅಶ್ವತ್ಥಾಮ ಎನ್ನುವ ಆನೆಯನ್ನ ಕೊಂದಿರುತ್ತಾನೆ. ಆ ದೃಷ್ಠಿಯಲ್ಲಿ ನೋಡುವುದಾದರೆ ಯುಧಿಷ್ಠಿರ ಸುಳ್ಳನ್ನೇನೂ ಹೇಳಲಿಲ್ಲ. ಕೆಲವೊಂದು ಆವೃತ್ತಿಯಲ್ಲಿ ಕುಂಜರಃ ಅನ್ನುವುದನ್ನು ಮೆಲ್ಲನೆ ಹೇಳಿದ ಅಂತಿದೆ. ಕೆಲವೆಡೆ ಕುಂಜರಃ ಅನ್ನುವ ಶಬ್ದ ಉಚ್ಚರಿಸುವಾಗ ಕೃಷ್ಣ ಪಾಂಚಜನ್ಯ ಊದಿದ ಅಂತಿದೆ... ಅದೇನಿದ್ದರೂ ಉಚ್ಚರಿಸಿದ ಶಬ್ದಗಳ ಸಮೂಹ ಸುಳ್ಳಲ್ಲ... ಕೇಳುಗನಿಗೆ ಯಾವ ರೀತಿಯಲ್ಲಿ ಕೇಳಿಸಿತು ಅನ್ನುವುದರ ಮೇಲೆ ನನ್ನ ಸತ್ಯಸಂಧತೆ ನಿರೂಪಿತವಾಗುವುದಲ್ಲವಲ್ಲ.. ಧರ್ಮರಾಯ ತಪ್ಪು ಮಾಡಿದ ಅನ್ನುವುದಕ್ಕೆ ಪ್ರಮಾಣವಾಗಿ ಜನರು ಸ್ವೀಕರಿಸುವುದು ಆತನ ರಥ ನೆಲಕ್ಕೆ ತಾಗಿತು ಅನ್ನುವ ವಿಚಾರವನ್ನ... ಆದರೆ ಸತ್ಯವಾಕ್ಯವನ್ನ ಉಚ್ಚರಿಸಿಯೂ ನೆಲಕ್ಕೆ ಕುಸಿಯುವ ಕ್ರಿಯೆಯನ್ನ ಹೇಗೆ ಸಮನ್ವಯ ಮಾಡುವುದು..? ಅದಕ್ಕೆ ಕೆಲವೊಂದು ವಿದ್ವಾಂಸರ ವಿವರಣೆ ಸೊಗಸಾಗಿದೆ.. ಏನೆಂದರೆ... ಧರ್ಮಜ 'ಅಶ್ವತ್ಥಾಮ ಹತಃ ಕುಂಜರಃ' ಅಂತ ಸುಳ್ಳು ಹೇಳಿದುದಕ್ಕಾಗಿ ಆತನ ರಥ ನೆಲಕ್ಕೆ ಕುಸಿಯಲ್ಪಟ್ಟದ್ದಲ್ಲ... ಬದಲಿಗೆ ಕೃಷ್ಣನ ಮಾತನ್ನು ಕೇಳದೆ ಇದ್ದ ಕಾರಣಕ್ಕೆ ಅಂತ... ಅಂದರೆ ಕೃಷ್ಣ ಯಾವುದರಿಂದ ಲೋಕ ಹಿತವೆಂದು ತಿಳಿದುಕೊಂಡು ಧರ್ಮಜನ ಜತೆ ಈ ರೀತಿ ಮಾಡು ಅಂದನೋ ಅದನ್ನ ನೆರವೇರಿಸುವಲ್ಲಿ ಹಿಂಜರಿದ ಅನ್ನುವ ಕಾರಣಕ್ಕೆ.. ನರಕ ದರ್ಶನವೂ ಕೃಷ್ಣನನ್ನ ಅನುಮಾನಿಸಿದ ಕಾರಣಕ್ಕಾಗಿ ಆಯಿತು ಅಂತ.. ಇದು ವೈಯಕ್ತಿಕವಾಗಿ ನನಗೂ ಹಿಡಿಸಿತ್ತು.. ಯಾಕೆಂದರೆ ಯಾವುದೋ ಒಬ್ಬಾತ ನಿರಪರಾಧಿಯನ್ನ ಕಳ್ಳರು ದರೋಡೆ ಮಾಡುವ ಸಲುವಾಗಿ ಹುಡುಕುತ್ತಾ ಬಂದಾಗ ನಾನು ಸತ್ಯವನ್ನೇ ಹೇಳುತ್ತೇನೆ ಎಂದು ಆತ ಹೋದ ದಾರಿಯನ್ನ ತೋರಿಸುವುದರಿಂದ ಉಂಟಾಗುವ ಪುಣ್ಯಸಂಪಾದನೆಗಿಂತ ಆ ಕಾಲಕ್ಕೆ ಸುಳ್ಳನ್ನಾಡಿದರೇನೇ ಅಧಿಕ ಪುಣ್ಯ ಪ್ರಾಪ್ತಿ.. ಹಾಗಿರುವಾಗ ಧರ್ಮಜನ ರಥ ನೆಲಕ್ಕೆ ಕುಸಿಯಲೂ ಕೂಡಾ ಕೃಷ್ಣ ನಿರ್ಣಯದ ಮೇಲಿನ ಅನುಮಾನವೇ ಕಾರಣ ಹೊರತು ಆಡಿದ ಮಾತು ಕಾರಣವಾಗಿರಲಿಕ್ಕಿಲ್ಲ ಅಲ್ವೇ... ಜನರೂ ಅ ನೆಲೆಯಲ್ಲೇ ಈ ಪ್ರಕರಣವನ್ನ ನೋಡಲು ಆರಂಭಿಸಿದರೆ ಪ್ರಕರಣವೊಂದರ ನಿಜವಾದ ಆಯಾಮ ತಿಳಿದು ಪ್ರಚಾರದಲ್ಲಿರುವ ದೃಷ್ಟಿಕೋನದಿಂದ ವಿಭಿನ್ನವಾಗಿ ನೋಡುವುದು ಸಾಧ್ಯ..ಬಹುಷಃ ಅದೇ ನಿಜವಾದ ಸತ್ಯದರ್ಶನವಾದೀತು ಅಲ್ವೇ.

👌 1
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/29/2025, 12:52:40 PM

ಸಿನಿಮಾ ನಾ ಕಂಡಂತೆ - ದ ಡಿಪ್ಲೋಮ್ಯಾಟ್ ನೈಜ ಘಟನೆಯಾಧಾರಿತ ಸಿನಿಮಾ.. ಉಜ್ಮಾ ಅಹ್ಮದ್ ಎನ್ನುವ ಮಹಿಳೆ, ಪಾಕಿಸ್ತಾನಿ ವ್ಯಕ್ತಿಯ ಮೋಹ ಪಾಶಕ್ಕೆ ಬಲಿಯಾಗಿ ಪಾಕಿಸ್ತಾನವೆಂಬ ನರಕದಲ್ಲಿ ಯಮಯಾತನೆ ಪಟ್ಟು ಅಲ್ಲಿಂದ ಮರಳಿ ಭಾರತಕ್ಕೆ ಬರಲು ಪ್ರಯತ್ನ ಪಡುವ ಕತೆ.. ಈ ಪ್ರಯತ್ನದಲ್ಲಿ ಆಕೆ ಸಫಲಳಾಗುತ್ತಾಳೆ ಅನ್ನುವುದು ಘಟನೆಯ ಕುರಿತು ಓದಿ ತಿಳಿದುಕೊಂಡಿರುವ ಅನೇಕರಿಗೆ ಗೊತ್ತಿರಬಹುದಾದರೂ ಆ ಪಯಣ ಹೇಗಿತ್ತು ಅನ್ನುವುದನ್ನ ರೋಚಕವಾಗಿ ತೋರಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಇಂಡಿಯನ್ ಹೈಕಮಿಷನ್ ನ ಸಿಬ್ಬಂದಿಗಳು ಒಬ್ಬ ಭಾರತೀಯ ಹೆಣ್ಣು ಮಗಳನ್ನ ಮರಳಿ ತಾಯ್ನಾಡಿಗೆ ಸೇರಿಸುವಲ್ಲಿ ಮಾಡುವ ಪ್ರಯತ್ನ ನಿಜಕ್ಕೂ ಮೆಚ್ಚುಗೆಗೆ ಪಾತ್ರವನ್ನಾಗಿಸುತ್ತದೆ. ಜತೆಗೆ ಅಂದಿನ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರ ಮುತುವರ್ಜಿ.. ಅಬ್ಬಾ... ಕೇವಲ ಒಬ್ಬ ಭಾರತೀಯ ಹೆಣ್ಣು ಮಗಳ ರಕ್ಷಣೆಗಾಗಿ ಭಾರತೀಯ ಹೈಕಮಿಷನ್ ಭಾರತದ ವಿದೇಶ ಮಂತ್ರಾಲಯ ಪಟ್ಟ ಪರಿಶ್ರಮ ನಿಜಕ್ಕೂ ಗೌರವದ ಭಾವ ಮೂಡಿಸುತ್ತದೆ... ಸಿನಿಮಾ ನೋಡಿದಾಗ ಅನಿಸಿದ್ದು.. ಭಾರತೀಯ ಮುಸ್ಲಿ ಮಹಿಳೆಯರಿಗೆ ಪಾಕಿಸ್ತಾನದ ವ್ಯಕ್ತಿಗಳನ್ನ ವರಿಸುವಾಗ ಅಥವಾ ಪ್ರೀತಿಸುವಾಗ ಎಳ್ಳಷ್ಟೂ ಹಿಂಜರಿಕೆ ಇಲ್ಲವೇನೋ ಅಂತ. ಸಹಜವಾಗಿ ಅಲ್ಲಿನ ವ್ಯಕ್ತಿಯ ಮೋಸಕ್ಕೆ ಬಲಿಯಾಗಿ ಬಿಡುತ್ತಾಳೆ ಚಿತ್ರದ ನಾಯಕಿ... ಆಕೆ ಪಡುವ ಕಷ್ಟವನ್ನ ಬಹುಷಃ ಭಾರತದ ಪ್ರತಿಯೊಬ್ಬ ಮುಸ್ಲಿಮ್ ಜನರೂ ನೋಡಬೇಕು.. ಮುಸ್ಲಿಮರಾಗಿದ್ದರೂ ಅಲ್ಲಿ ಅವರಿಗೆ ಸಿಗುವ ಬೆಲೆ ಏನು ಅನ್ನುವ ಅರಿವು ಇಲ್ಲಿನ ಜನರಿಗೆ ಆಗುವುದು ನಿಜಕ್ಕೂ ಈ ಕಾಲದ ಅಗತ್ಯತೆ.. ಆಕೆ ಅನುಭವಿಸಿದ ಕಷ್ಟದ ಸರಮಾಲೆಯಿಂದಲೇ ಆಕೆ ಭಾರತಕ್ಕೆ ಮರಳುವಾಗ ಮೊದಲು ಇಲ್ಲಿನ ಮಣ್ಣಿಗೆ ನಮಸ್ಕಾರ ಮಾಡುತ್ತಾಳೆ.. ಆ ಕಾಲಕ್ಕೆ ಆಕೆ ಹಿಂದೂ ಆಗಿಯೇ ಪರಿವರ್ತಿತಳಾದಳೋ ಎನ್ನುವಂತೆ ಈ ಭೂಮಿಯನ್ನ ತಾಯಿಯಂತೆ ಕಂಡು ಈ ಮಣ್ಣಿಗೆ ನಮಸ್ಕರಿಸುವ ದೃಶ್ಯ ನಮ್ಮನ್ನ ಭಾವುಕರನ್ನಾಗಿಸುತ್ತದೆ. ಸಿನಿಮಾ ಅಲ್ಲಿನ ಮುಸ್ಲಿಂ ಧರ್ಮಾಂದರು ಹೇಗೆ ನಡೆದುಕೊಳ್ಳುತ್ತಾರೆ ಅನ್ನುವುದನ್ನ ತೋರಿಸುವುದಲ್ಲದೆ ಅಲ್ಲಿನ ಐ.ಎಸ್.ಐ ಎಷ್ಟೆಲ್ಲಾ ಮಸಲತ್ತು ಮಾಡುತ್ತದೆ ಅನ್ನುವುದನ್ನೂ ತೋರಿಸುತ್ತದೆ.. ಜತೆಗೆ ಆಕೆಯ ಪರವಾಗಿ ವಾದಿಸುವಂತಹಾ ಲಾಯರ್ ಪಾತ್ರಧಾರಿಯಂತಹ ಸಜ್ಜನರೂ ಆ ದೇಶದಲ್ಲಿ ಇದ್ದಾರೆ ಎನ್ನುವುದನ್ನೂ ಚಿತ್ರ ಮುಚ್ಚುಮರೆಯಿಲ್ಲದೆ ಇದ್ದದ್ದನ್ನ ಇದ್ದಂತೆ ತೋರಿಸುತ್ತದೆ... ಸಿನಿಮಾ ಶೀರ್ಷಿಕೆಯಂತೆ ಪಾಕಿಸ್ತಾನದ ಹೈಕಮಿಶನ್ ಅಧಿಕಾರಿ ಜೆ.ಪಿ.ಸಿಂಗ್ ತೋರುವ ಜಾಣ್ಮೆ ಅದ್ಭುತ.. ಸಿನಿಮಾದ ಚಿತ್ರಕತೆ ಸೊಗಸಾಗಿದೆ, ನಟನೆ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ ನಿರ್ದೇಶನವೂ ಉತ್ತಮವಾಗಿದೆ.. ಒಟ್ಟಿನಲ್ಲಿ ಭಾರತೀಯರು ನೋಡಲೇಬೇಕಾದ ಸಿನಿಮಾ ಕಾರಣ ಪಾಕಿಸ್ತಾನದ ಅಧಿಕಾರಿಗಳ ಮತ್ತು ಅಲ್ಲಿನ ಮತಾಂಧರ ಮನಸ್ಥಿತಿಯ ಅನಾವರಣ ಈ ಸಿನಿಮಾದಲ್ಲಾಗಿದೆ.. ಒಮ್ಮೆ ನೋಡಿ ಬಿಡಿ..

Post image
👍 🙏 3
Image
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/28/2025, 12:14:07 PM

ಪ್ರವಚನಾಮೃತ... ಈ ದೇಹ ಪಂಚಭೂತಗಳಿಂದಾದದ್ದು.. ಈ ದೇಹಕ್ಕೆ ಅದರದ್ದೇ ಆದ ಒಂದು ಪರಿಮಿತಿ ಇದ್ದೇ ಇರುತ್ತೆ... ಯಾವ ರೀತಿಯಲ್ಲಿ ಒಂದು ಮಡಕೆಯಲ್ಲಿ ಇಂತಿಷ್ಟೇ ನೀರು ಹಿಡಿಯಲು ಸಾಧ್ಯವೋ ಅಂತೆಯೇ ಒಂದು ದೇಹದಲ್ಲೂ ಇಂತಿಷ್ಟೇ ಪುಣ್ಯದ ಶಕ್ತಿಯನ್ನ ಹಿಡಿದಿಟ್ಟುಕೊಳ್ಳಲು ಸಾಧ್ಯ... ಅದಕ್ಕಿಂತಲೂ ಜಾಸ್ತಿ ಹಾಕಿದಾಗ ಒಂದೋ ಅದು ಹೊರಚೆಲ್ಲುತ್ತದೆ... ಅಥವಾ ಅದು ಆ ದೇಹಕ್ಕೆ ಮಾರಕವಾಗಬಹುದು, ಯಾವ ರೀತಿ ಅಂದರೆ ಇಂತಿಷ್ಟೇ ವ್ಯಾಟಿನ ಬಲ್ಬಿನಲ್ಲಿ ಅದಕ್ಕಿಂತಲೂ ಜಾಸ್ತಿ ವ್ಯಾಟ್ ವಿದ್ಯುತ್ ಹರಿಸಿದರೆ ಏನಾದೀತು ಹೇಳಿ... ಒಡೆದುಹೋಗುವುದು ತಾನೆ. ಹಾಗೆಯೇ ಮನುಷ್ಯನೂ ತನ್ನ ಜನ್ಮಜನ್ಮಾಂತರಗಳ ಈ ಚಕ್ರದಲ್ಲಿ ಒಟ್ಟಾರೆಯಾಗಿ ಇಂತಿಷ್ಟೇ ಶಕ್ತಿ ಸಂಪಾದನೆ ಮಾಡಬಲ್ಲ... ಒಂದು ಜನ್ಮದಲ್ಲಿ ಪುಣ್ಯ ಅತಿಯಾದರೆ ಇನ್ನೊಂದು ಜನ್ಮದಲ್ಲಿ ಪುಣ್ಯ ಕಡಿಮೆಯಾಗಬಹುದು... ಇದಕ್ಕೆ ಉದಾಹರಣೆಯಾಗಿ ನೋಡೋದಾದರೆ ತ್ರೇತಾಯುಗದಲ್ಲಿ ವಾಲಿಯಾಗಿ ಶ್ರೀರಾಮನ ವಿರೋಧ ಕಟ್ಟಿಕೊಂಡಾತ ದ್ವಾಪರಯುಗದಲ್ಲಿ ಅರ್ಜುನನಾಗಿ ಪುಣ್ಯ ಸಂಪಾದನೆ ಮಾಡಿದ. ಅದೇ ಸುಗ್ರೀವನಾಗಿ ತ್ರೇತಾಯುಗದಲ್ಲಿ ಪುಣ್ಯ ಸಂಪಾದಿಸಿದಾತ ದ್ವಾಪರಯುಗದಲ್ಲಿ ಕರ್ಣನಾಗಿ ಪಾಪ ಕಟ್ಟಿಕೊಳ್ಳುತ್ತಾನೆ... ಒಟ್ಟಾರೆಯಾಗಿ ನಿಮ್ಮ ಪಾಪ ಪುಣ್ಯವು ಯಾವಾಗ ಸಮವಾಗುವುದೋ ಆವಾಗ ಆ ಜೀವಕ್ಕೆ ಮುಕ್ತಿ ಹೊಂದುವ ಭಾಗ್ಯವಂತೆ... ಸ್ವಲ್ಪ ಪುಣ್ಯ ಮಾಡಿದ್ದರೂ ಅದರ ಫಲಾನುಭವ ಅನುಭವಿಸಲು ನಾವು ಹುಟ್ಟಬೇಕು ಮತ್ತು ಪಾಪ ಮಾಡಿದ್ದರೂ ಅದರ ಶಿಕ್ಷೆ ಅನುಭವಿಸಲು ಈ ಭೂಮಿಗೆ ಬರಲೇ ಬೇಕು. ---ಕೆ.ಗುರುಪ್ರಸಾದ್ ಬನ್ನಂಜೆಯವರ ಪ್ರವಚನ ಮಾಲಿಕೆಯಿಂದ ಮತ್ತು ಒಂದಷ್ಟು ಓದಿದ ಸಾಲುಗಳಿಂದ

🙏 1
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/30/2025, 9:14:20 AM

ಬುದ್ಧಿವಂತೆ... ಅದ್ಯಾವುದೋ ಕಾರಣಕ್ಕಾಗಿ ಕಾರನ್ನ ವೇಗವಾಗಿ ಚಲಾಯಿಸುತ್ತಿದ್ದಳು.. ವೇಗ ಎಷ್ಟಿತ್ತೆಂದರೆ ಆ ಹಾದಿಯಲ್ಲಿ ಚಲಾಯಿಸಬಹುದಾದ ವೇಗದ ಮಿತಿಯನ್ನು ಮೀರಿಸಿತ್ತು... ಆಕೆಯ ಕಾರಿನ ವೇಗವನ್ನ ನೋಡಿದ ಟ್ರಾಫಿಕ್ ಪೋಲೀಸ್ ಆಕೆಯ ಕಾರ್ ನಿಲ್ಲಿಸುವಂತೆ ದೂರದಿಂದ ಕೈಸನ್ನೆ ಮಾಡಿದ... ಆದರೆ ಆಕೆಗೆ ಗೊತ್ತಾಗುವಷ್ಟರಲ್ಲಿ ಪೋಲೀಸ್ ನನ್ನ ದಾಟಿ ಹೋಗಿದ್ದಳು... ಪೋಲೀಸ್ ಗೆ ಕೋಪ ಬಂದು ಆಕೆಯನ್ನ ಹಿಂಬಾಲಿಸತೊಡಗಿದ... ಆಕೆ ಗಾಬರಿಗೊಂಡು ಸ್ವಲ್ಪ ದೂರ ವೇಗವಾಗಿಯೇ ಕಾರು ಚಲಾಯಿಸತೊಡಗಿದಳು.. ಪೋಲೀಸ್ ಕಾರ್ ವೇಗವಾಗಿ ಸಾಗಿ ಆಕೆಯ ಕಾರನ್ನ ತಡೆದು ನಿಲ್ಲಿಸುವಲ್ಲಿ ಸಫಲವಾಯ್ತು.. ಪೋಲೀಸ್ ಕೆಳಗಿಳಿದು ಬಂದವನೇ... ಆ‌ ಮಹಿಳೆಯ ಜತೆ ಮಾತಿಗಿಳಿದ... ಪೋಲೀಸ್ : ಏನ್ರೀ ಮೇಡಮ್ ಕಾರ್ ಬಹಳ ವೇಗವಾಗಿ ಚಲಾಯಿಸ್ತಾ ಇದೀರಿ...? ಮಹಿಳೆ : ಏನ್ ಮಾಡೋದು ಸಾರ್... ಸ್ವಲ್ಪ ಅರ್ಜೆಂಟ್ ಕೆಲಸ ಇತ್ತು... ನೆರೆಮಾನೆಕೆಯೊಂದಿಗೆ ಜಗಳ ಆಗಿತ್ತು ಹಾಗಾಗಿ... ಪೋ : ಜಗಳ ಆದ್ರೆ ಇಷ್ಟು ವೇಗವಾಗಿ ಹೋಗಬೇಕಾ..? ಮ : ಹೌದು ಸಾರ್ ಜಗಳ ಸ್ವಲ್ಪ ಜಾಸ್ತಿನೇ ಆಗಿ ರಿವಾಲ್ವರ್ ತೆಗೊಂಡು ಸುಟ್ಟುಬಿಟ್ಟೆನಲ್ಲಾ... ಪೋ : ಏನು..? ಶೂಟ್ ಮಾಡಿ ಕೊಂದು ಬಿಟ್ರಾ..? ಈಗ ಓಡಿ ಹೋಗೋಕೆ ಟ್ರೈ ಮಾಡ್ತಾ ಇದೀರಾ..? ಮ : ಅಯ್ಯೋ ಓಡಿ ಹೋಗ್ತಾ ಇಲ್ಲಾ ಸಾರ್ ಡೆಡ್ ಬಾಡಿಗೆ ವ್ಯವಸ್ಥೆ ಮಾಡೋಣಾಂತ.. ಪೋ : ಡೆಡ್ ಬಾಡಿ ಎಲ್ಲಿದೆ...? ಮ : ಕಾರ್ ಡಿಕ್ಕಿಯಲ್ಲಿದೆ..? ಪೋ : ( ಗಾಬರಿಗೊಂಡು ) ಏನು ಕಾರ್ ಡಿಕ್ಕಿಯಲ್ಲಿ ಡೆಡ್ ಬಾಡಿ ಇದೆಯಾ...? ಮ : ಹೌದು ಸಾರ್... ಗನ್ ಬೇರೆ ಇದೆ.. ಅದಕ್ಕೆ ಬೇರೆ ಲೈಸೆನ್ಸ್ ಮಾಡಿಲ್ಲ ಅದನ್ನೂ ಬಿಸಾಕೋದಿತ್ತು.. ಪೋ : ಏನು.. ಲೈಸೆನ್ಸೇ ಇಲ್ಲದ ಗನ್ನಾ... ಇನ್ನು ಏನೇನು ಅಪರಾಧ ಮಾಡಿದ್ದೀರ್ರೀ... ಮ : ಮತ್ತೇನಿಲ್ಲ ಸಾರ್.. ಕಾರ್ ನೆರೆಮನೆಯಾಕೆಯದ್ದೇ.. ಕಾರ್ ಡಾಕ್ಯುಮೆಂಟ್ ಇದೆಯೋ ಇಲ್ವೋ ಗೊತ್ತಿಲ್ಲ ನನ್ನತ್ರ ಡ್ರೈವಿಂಗ್ ಲೈಸೆನ್ಸ್ ಇಲ್ಲ ಸಾರ್... ಹೀಗಿರುವಾಗ ಸ್ವಲ್ಪ ಫಾಸ್ಟಾಗೇ ಓಡಿಸಬೇಕಲ್ವಾ..?? ಪೋ : ಅಯ್ಯೋ ಅಯ್ಯೋ ನಿನ್ನನ್ನ ನಾನಲ್ಲ ನನ್ನ ಇನ್ಸ್‌ಪೆಕ್ಟರ್ರೇ ವಿಚಾರಿಸೋ ಬೇಕು... ಅಂತ ಹಿರಿಯ ಅಧಿಕಾರಿಗೆ ಕಾಲ್ ಮಾಡಿ ಎಲ್ಲವನ್ನೂ ಹೇಳಿ ಬೇಗನೇ ಬರೋಕೆ ಹೇಳಿ.. ಹಿರಿಯ ಅಧಿಕಾರಿ : ಏನ್ರೀ ಮೇಡಮ್ ನೋಡೋಕೆ ಪಾಪದ ಹೆಂಗಸಿನ ತರ ಕಾಣಿಸ್ತೀರಾ.. ಎಷ್ಟೊಂದು ಅಪರಾಧ ಮಾಡಿದ್ದೀರ್ರೀ... ಎಲ್ಲಿ ಡಿಕ್ಕಿ ಓಪನ್ ಮಾಡಿ.. ಮ : ಏನಾಯ್ತು ಸಾರ್.. ಅಂತ ಡಿಕ್ಕಿ ಓಪನ್ ಮಾಡಿದಳು.. ಹಿ.ಅ : ( ಪೋಲೀಸ್ ನ ಕರೆದು ) ಏನ್ರೀ ಡೆಡ್ ಬಾಡಿ ಅಂದ್ರಿ.. ಎಲ್ರೀ..? ಪೋ : ಸಾರ್ ಕಾರಲ್ಲಿ ಗನ್ ಇದೆ ಅಂದಿದ್ರು.. ಮ : ಅಯ್ಯೋ ಗನ್ನಾ..? ಹಿ.ಅ : ನಿಮ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಕಾರ್ ಡಾಕ್ಯುಮೆಂಟ್ ಕೊಡಿ ಪೋ : ಅದೆಲ್ಲಾ ಏನೂ ಇಲ್ಲ ಸಾರ್... ಮ : ತೆಕೊಳಿ ಸಾರ್ ಡ್ರೈವಿಂಗ್ ಲೈಸೆನ್ಸ್ ಮತ್ತು ಕಾರ್ ಡಾಕ್ಯುಮೆಂಟ್... ಯಾಕೋ‌ ಏನೋ ಸಾರ್ ಇವರು ನನ್ನ ಕಾರ್ ನಿಲ್ಲಿಸಿದಾಗಿಂದ ತುಂಬಾ ಅನುಮಾನ ಪಡ್ತಾ ಇದಾರೆ.. ಬಹುಶಃ ನಿಮ್ಮ ಹತ್ರ ನಾನು ಓವರ್ ಸ್ಪೀಡಲ್ಲಿ ಡ್ರೈವಿಂಗ್ ಮಾಡ್ತಾ ಇದ್ದೆ ಅಂತ ಹೇಳಿರ್ಬೇಕಲ್ಲಾ... ಹಿ.ಅ : ಹೌದು ಮೇಡಮ್ ನೀವ್ ಹೊರಡಿ ಆತನನ್ನ ನಾನು ತರಾಟೆ ತೆಗೊಳ್ತೇನೆ... ಮ : ತುಂಬಾ ಧನ್ಯವಾದ ಸಾರ್... ಆದ್ರೂ ಒಮ್ಮೆ ಕ್ಷಮಿಸಿ ಬಿಡಿ ಸಾರ್ ಅವರನ್ನ... ( ಡಾ.ಗುರುರಾಜ ಕರ್ಜಗಿಯವರ ಕರುಣಾಳು ಬಾ ಬೆಳಕೆ ಭಾಷಣ ಮಾಲಿಕೆಯಲ್ಲಿ ಕೇಳಿದ ಕತೆ )

😂 😇 7
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
6/1/2025, 7:35:54 AM

ವಿಶ್ವಾವಸು ನಾಮ ಸಂವತ್ಸರದ ಓದು - ೬ ಕೃತಿ : ಜಲಪಾತ ಲೇಖಕರು : ಡಾ. ಎಸ್.ಎಲ್.ಭೈರಪ್ಪ ಪ್ರಕಾಶನ : ಸಾಹಿತ್ಯ ಭಂಡಾರ ಬಹುಶಃ ಭೈರಪ್ಪನವರ ಸಣ್ಣ ಕಾದಂಬರಿಗಳಲ್ಲಿ ಇದೂ ಒಂದು.. ಭೌಗೋಳಿಕ ಹಿನ್ನೆಲೆಯಲ್ಲೂ ವಿಸ್ತಾರವಿಲ್ಲ.. ಅಗ್ರಹಾರದಿಂದ ಮುಂಬಯಿ ಮತ್ತೊಂದೆರಡು ಊರುಗಳ ನಡುವಲ್ಲಿ ಓಡಾಡುವ ಕತೆ.. ಸರಳವಾಗಿ ಆರಂಭವಾಗಿ ಕತೆಯಾದರೂ ಮುಂದೆ ಪ್ರಮುಖ ಪಾತ್ರಗಳ ಜೀವನದಲ್ಲಿ ಬರುವ ಪರಿಸ್ಥಿತಿ ಆ ಪರಿಸ್ಥಿತಿಯನ್ನ ಆ ಪಾತ್ರಗಳು ಕಾಣುವ ರೀತಿ ಆ ಪಾತ್ರಗಳ ಮನೋಧರ್ಮಗಳನ್ನ ಚಿತ್ರಿಸಿರುವ ರೀತಿ ನಿಜಕ್ಕೂ ಅದ್ಭುತ.. ಜೀವಸೃಷ್ಠಿ, ರತಿಕ್ರಿಯೆ ಇವುಗಳನ್ನ ಇಲ್ಲಿ ಕೊಟ್ಟಿರುವ ದೃಷ್ಟಿಕೋನದಲ್ಲಿ ನಾನು ಯಾವತ್ತೂ ಊಹಿಸಿರಲಿಲ್ಲ. ಅದರಲ್ಲೂ ಅದೇ ವಿಚಾರ ವ್ಯಕ್ತಿ ವ್ಯಕ್ತಿಗಳ ನೋಟದಲ್ಲಿ ಹೇಗೆಲ್ಲಾ ವಿಭಿನ್ನವಾಗಿರುತ್ತದೆ ಅನ್ನುವುದನ್ನೂ ಪಾತ್ರಗಳ ಮನೋಧರ್ಮದ ಮೂಲಕ ಚಿತ್ರಿಸಿರುವ ಬಗೆ ಅದ್ಭುತ.. ಪಾತ್ರಗಳ ಜೀವನದ ಏರಿಳಿತ.. ಕಲೆ ಮತ್ತು ಸಂಗೀತದ ಬಗೆಗಿನ ವಿಚಾರಗಳನ್ನ ಚೆನ್ನಾಗಿ ಚಿತ್ರಿಸಿದ್ದಾರೆ.. ಕತೆಯ ನಾಯಕಿ ವಸುವಿನ ಪ್ರಸವ ವೇದನೆಯ ವಿವರಣೆ.. ಅಬ್ಬಾ ಇದುವರೆಗೆ ಅಂತಹಾ ವಿವರಣೆ ಮತ್ತೆಲ್ಲೂ ಓದಿಲ್ಲ.. ಕೇವಲ ಮುಂಬಯಿ ಮಾತ್ರ ಬದಲಾಗದೆ ಹಳ್ಳಿಯೂ ನಗರದಂತಾದ ಚಿತ್ರಣ ಆಹಾ..ಒಟ್ಟಿನಲ್ಲಿ ಕಲೆಯಾಗಲಿ , ಬದುಕಾಗಲಿ ಹರಿಯುವ ನದಿಯಂತೆ..ಅ ನದಿಯ ಒಂದು ಭಾಗ ಜಲಪಾತ.. ಅದನ್ನೇ ಉಪಮೆಯಾಗಿಸಿ ಈ ಹೆಸರಿಟ್ಟರೋ ಗೊತ್ತಿಲ್ಲ.. ನನ್ನ ಮತಿಗೆ ತೋಚಿದ್ದು ಹಾಗೆ.. ಅಂತೂ ಸೊಗಸಾದ ಓದು.. ಹಿಡಿಸಿದ ಸಾಲುಗಳು * ಹೊಸ ಆತಂಕ ಬಂದರೆ ಹಳೆಯ ತೊಂದರೆ ಸಹ್ಯವಾಗಿ ಕಾಣುತ್ತದೆ. * ಪೂರ್ತಿ ಅರ್ಥವಾದ ಮೇಲೆ ಮನುಷ್ಯನಿಗೆ ಒಂದು ವಸ್ತುವಿನಲ್ಲಿ ಆಕರ್ಷಣೆ ಉಳಿಯುವುದಿಲ್ಲ. * ಜೀವನವು ನಷ್ಟವಾಗುವಾಗ ಆಗುವ ಸಂಕಟಕ್ಕಿಂತ ಹೆಚ್ಚಿನ ಸಂಕಟವಿಲ್ಲ. ಮರಣ ಕಾಲದಲ್ಲಿ ಆಗುವ ಸಂಕಟ ಅದೇ. ಜೀವನವು ಸೃಷ್ಟಿಯಾಗುವ ಕ್ರಿಯೆಯಲ್ಲಿ ಲಬಿಸುವ ಸಂತೋಷಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ರತಿಯಲ್ಲಿ ಆಗುವ ಅಮಿತ, ಅದಮ್ಯ, ಉತ್ಸಾಹಪೂರ್ಣ ಸಂತೋಷದ ಕಾರಣವು ಇದೇ. * ಜೀವನ ವಿಜೃಂಭಣೆಯೇ ಸಂತೋಷದ ಮೂಲ ಶೃತಿ.

Post image
❤️ 👍 🙏 3
Image
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
6/1/2025, 3:41:37 AM

ಅಂತರಾಳದಿಂದ ಕಳೆದ ವಾರದ ವಿಕ್ರಮ ಸಂಚಿಕೆಯಲ್ಲಿ ವೃಷಾಂಕ್ ಭಟ್ವರ ಅಂಕಣದಲ್ಲಿ ಸೊಗಸಾದ ಘಟನೆಯನ್ನ ವಿವರಿಸಿದ್ದರು.. ಕಾಲೇಜಿನಲ್ಲಿ ಒಮ್ಮೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಬಳಿ.. " ನೀವು ಎಲ್ಲವನ್ನೂ ಹೇಳಿಕೊಳ್ಳುವ ವ್ಯಕ್ತಿ ಯಾರು..? ಯಾರ ಬಳಿ ನೀವು ಏನೂ ಮುಜುಗರವಿಲ್ಲದೆ ಮಾತನಾಡುತ್ತೀರಿ. ನಿಮ್ಮ ದೈನಂದಿನ ಎಲ್ಲಾ ಘಟನೆಗಳನ್ನು ಚಾಚೂ ತಪ್ಪದೆ ಹೇಳಬಹುದು ಎಂದರೆ ಯಾರಿಗೆ ಹೇಳುತ್ತೀರಿ..? " ಎಂದು ಕೇಳಿದರಂತೆ.. ಹೆಚ್ಚಿನ ವಿದ್ಯಾರ್ಥಿಗಳೆಲ್ಲರೂ ತಮ್ಮ ಆಪ್ತ ಸ್ನೇಹಿತರ ಹೆಸರನ್ನ ಹೇಳಿದರೆ ಒಬ್ಬಾಕೆ ಮಾತ್ರ ತನ್ನ ಅಮ್ಮನ ಹೆಸರನ್ನ ಹೇಳಿದಳಂತೆ.. ಆಗ ಶಿಕ್ಷಕಿ ಅನುಮಾನದ ಧ್ವನಿಯಲ್ಲೇ " ಎಲ್ಲಾ ಎಂದರೆ ಎಲ್ಲವನ್ನೂ ಹೇಳುತ್ತೀಯಾ..? " ಎಂದು ಕೇಳಿದಾಗ ನಗುವ ವಿದ್ಯಾರ್ಥಿ ವೃಂದದ ನಡುವೆ ಆಕೆ ಧೈರ್ಯದಿಂದ " ಹೌದು, ಎಲ್ಲವನ್ನೂ ಅಮ್ಮನಿಗೆ ಹೇಳುತ್ತೇನೆ. ಅಮ್ಮನಿಗೆ ಏನನ್ನ ಹೇಳಬಹುದೋ ಅದನ್ನು ಮಾತ್ರ ಮಾಡುತ್ತೇನೆ. ಅಮ್ಮನಿಗೆ ಯಾವುದನ್ನು ಹೇಳಲು ಸಾಧ್ಯವಿಲ್ಲವೋ ಅದ್ಯಾವುದನ್ನೂ ಮಾಡುವುದಿಲ್ಲ. " ಎಂದಳಂತೆ.. ಈ ಘಟನೆಯನ್ನೋದಿದಾಗ ಆ ವಿದ್ಯಾರ್ಥಿನಿಯ ಬಗೆಗೆ ಅಭಿಮಾನ ಮೂಡುವುದರಲ್ಲಿ ಸಂಶಯವೇ ಇಲ್ಲ. ಮೂರು ವಿಚಾರಗಳಿಗಾಗಿ ಆಕೆಯ ವ್ಯಕ್ತಿತ್ವ ಮನಸ್ಸಿಗೆ ಅಪ್ಯಾಯಮಾನವಾಗುತ್ತದೆ... ಮೊದಲನೆಯದಾಗಿ ಆಕೆ ಸತ್ಯವನ್ನ ನಿರ್ಭಯದಿಂದ ಹೇಳುವ ಗುಣ.. ಎಲ್ಲರೂ ಆಪ್ತರ ಹೆಸರನ್ನೇ ಹೇಳುವಾಗ ತನ್ನ ಉತ್ತರ ಬೇರೆಯದಾಗಿದ್ದರೂ ಅದನ್ನೇ ಹೇಳುವ ದೈರ್ಯ ತೋರಿದಳಲ್ಲ.. ಅಂದರೆ ತಾಯಿಯ ಹೆಸರನ್ನ ಹೇಳಿದಾಗ ಇಂತಹಾ ಪೂರಕ ಪ್ರಶ್ನೆಯೊಂದು ಬಂದೀತು ಎನ್ನುವ ಅನುಮಾನ ಇದ್ದಿರಬಹುದು.. ಆದರೆ ಆಕೆ ಅದಕ್ಕೆ ಅಂಜಿ ಸುಳ್ಳುನ್ನ ಹೇಳಲಿಲ್ಲ.. ಎರಡನೆಯದಾಗಿ ಪೂರಕ ಪ್ರಶ್ನೆಗೆ ಆಕೆ ಸಮರ್ಥವಾಗಿ ಉತ್ತರಿಸಿದಳು.. ಅಂದರೆ ಸತ್ಯವಾದ ವಿಚಾರ ಕೇವಲ ಹಾರಿಕೆಯ ಉತ್ತರವಾಗಿರಲಿಲ್ಲ ಅಂದರೆ ತಾನು ಎಲ್ಲವನ್ನೂ ತಾಯಿಯ ಜತೆ ಹಂಚಿಕೊಳ್ಳುತ್ತೇನೆ ಅನ್ನುವುದು ಉಳಿದವರ ಉತ್ತರಕ್ಕಿಂತ ವಿಭಿನ್ನವಾಗಿರಲಿ ಎಂದು ಕೊಟ್ಟ ಉತ್ತರವಲ್ಲ... ಆ ಉತ್ತರಕ್ಕೆ ಸರಿಯಾದ ಕಾರಣ ಆಕೆಯ ಬಳಿ ಇದೆ.. ಮೂರನೆಯದು... ಪೂರಕ ಪ್ರಶ್ನೆಗೆ ಕೊಟ್ಟ ಉತ್ತರ... ಹೇಳಿಕೊಳ್ಳಬಹುದಾದನ್ನೇ ಮಾಡುತ್ತೇನೆ.. ಹೇಳಲಾಗದೇ ಇರುವುದನ್ನ ಮಾಡುವುದೇ ಇಲ್ಲ.. ಈ ಸ್ಪಷ್ಟತೆ ಬಹುಶಃ ಅತಿ ದೊಡ್ಡ ಮೌಲ್ಯವೇ ಸರಿ.. ಇಂತಹಾ ಸಂಸ್ಕಾರವನ್ನ ಬೆಳಿಸಿಕೊಳ್ಳುವ ಮಕ್ಕಳನ್ನ ಪಡೆಯುವುದು ನಿಜಕ್ಕೂ ಭಾಗ್ಯವೇ ಸರಿ.. ಇಂತಹಾ ವಿದ್ಯಾರ್ಥಿಗಳು ಇತರರಿಗೆ ಆದರ್ಶವಾಗಬೇಕಲ್ವೇ..?

❤️ 1
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/28/2025, 1:25:35 PM

ವೀರ ಸಾವರ್ಕರರ ಜೀವನಗಾಥೆಯ ಪುಸ್ತಕವಾದ " ಆತ್ಮಾಹುತಿ " ಕೃತಿಯನ್ನು ಓದಿದ್ದೆನಾದರೂ ಸಾವರ್ಕರರ ಬಗೆಗಿನ ಅಭಿಮಾನ ನನ್ನೊಳಗೆ ಪ್ರಬಲವಾದದ್ದು Ajakkala Girisha Bhat ಅವರ " ಬಹುವಚನಕ್ಕೊಂದೇ ತತ್ತ್ವ ಏಕತ್ವ ಅನೇಕತ್ವಗಳ ಹಿಂದುತ್ವ " ಅನ್ನುವ ಕೃತಿಯನ್ನ ಓದಿದ ಬಳಿಕವೇ.. ಅಲ್ಲಿ ಅವರು ಚರ್ಚಿಸುವ ಸಾವರ್ಕರ ವಿಚಾರಧಾರೆಯನ್ನ ಓದಿದಾಗಲೇ ವೀರ ಸಾವರ್ಕರರ ವ್ಯಕ್ತಿತ್ವ ಎಂತಾದ್ದು..? ಅನ್ನುವುದು ಗೊತ್ತಾದದ್ದು.. ಅವರ ದೂರದೃಷ್ಟಿ ಎಂತಾದ್ದು..? ಅನ್ನುವುದು ಗೊತ್ತಾದದ್ದು.. ಸಾವರ್ಕರರ ವ್ಯಕ್ತಿತ್ವ ಸ್ಪಷ್ಟವಾಗಿ ಅರಿವಾಗುವಲ್ಲಿ ಅಜಕ್ಕಳ ಗಿರೀಶ್ ಭಟ್ರ ಕೃತಿ ಪ್ರಧಾನ ಪಾತ್ರ ವಹಿಸಿತು.. ಬಹುಶಃ ಅದನ್ನ ಪ್ರಸ್ತುತ ಪಡಿಸಿದ ರೀತಿಯಿಂದಾಗಿ ಸಾವರ್ಕರರ ವಿಚಾರಧಾರೆ ಸ್ಪಷ್ಟವಾಗಿ ಅರ್ಥವಾಯಿತು ಅಂತಲೇ ಹೇಳಬಹುದು ಆ ಕೃತಿಯಲ್ಲಿ ಬರುವ ಒಂದಷ್ಟು ಪ್ರಮುಖ ಸಾಲುಗಳು ಹೀಗಿವೆ... ( ಇದು ಬೆರಳೆಣಿಕೆಯಷ್ಟು ಮಾತ್ರ ಇನ್ನಷ್ಟು ವಿಚಾರ ಗೊತ್ತಾಗಬೇಕಾದಲ್ಲಿ ಕೃತಿಯನ್ನೇ ಓದುವುದೊಳಿತು ) ೧. ನೀವು ಸಾವರ್ಕರರನ್ನು ಒಪ್ಪಬಹುದು ಅಥವಾ ವಿರೋಧಿಸಬಹುದು ಆದರೆ ಅಲಕ್ಷಿಸಲು ಸಾಧ್ಯವಿಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಚರಿತ್ರೆಯಲ್ಲಿ ಅವರ ಪಾತ್ರ ಬಹಳ ಮಹತ್ತ್ವದ್ದು. ಅದರಲ್ಲೂ ಹಿಂದುತ್ವದ ಕುರಿತು ಯಾವುದೇ ಜಿಜ್ಞಾಸೆಯೂ ಅವರನ್ನು ಗಣನೆಗೆ ತೆಗೆದುಕೊಳ್ಳದೆ ಮುಂದೆ ಹೋಗದು. ೨. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕಿರಬೇಕು ಎಂದು ವಾದಿಸಿದ್ದ ಸಾವರ್ಕರ್ ಕುರಿತಾಗಿ ' ಮುಸ್ಲಿಮರಿಗೆ ಸಮಾನ ಹಕ್ಕನ್ನು ನಿರಾಕರಿಸಿದವರು ' ಎಂಬ ಸುಳ್ಳನ್ನು ಅಂದಿನಂತೆ ಇಂದೂ ಪುನರುಚ್ಚರಿಸಲಾಗುತ್ತಿದೆ. ೩. ಹಿಂದುಗಳ ಅನನ್ಯತೆಯನ್ನು ಹಾಗೂ ಒಗ್ಗಟ್ಟಾಗುವ ಅಗತ್ಯವನ್ನು ಒಂದು ನಿರ್ದಿಷ್ಟ ಸನ್ನಿವೇಶದ ಅನಿವಾರ್ಯ ಸಂಗತಿಗಳಾಗಿ ಸಾವರ್ಕರ್ ಕಾಣುತ್ತಾರೆ ಹೊರತು ಅದು ಅವರ ಆದರ್ಶ ಅಲ್ಲವೇ ಅಲ್ಲ. ಅಲ್ಲದೆ ಅವರು ಹಿಂದುಗಳ ಒಗ್ಗಟ್ಟಿನ ಅಗತ್ಯವನ್ನು ಹೇಳಿದರಾದರೂ ಹಿಂದುಗಳೊಳಗಿನ ಬಹುತ್ವವನ್ನ ಬಿಟ್ಟುಬಿಡಲು ಹೇಳಲಿಲ್ಲ. ೪. ಧಾರ್ಮಿಕರಾಗಿರದೆ ಇದ್ದವರಿಗೂ ಯಾವುದು ಬಹುತ್ವವನ್ನು ಉಳಿಸುತ್ತದೆ; ಯಾವುದು ಅಳಿಸುತ್ತದೆ ಎಂದು ಗೊತ್ತಿರಬೇಕು. ಸಾವರ್ಕರರಿಗೆ ಅದು ಗೊತ್ತಿತ್ತು. ೫. ಸಾವರ್ಕರರು ಪ್ರತಿಪಾದಿಸಿದ್ದು ಹಿಂದುತ್ವದ ಬಹುತ್ವವನ್ನು ಉಳಿಸಿಕೊಳ್ಳಲು ಬೇಕಾದ ಜಾಗೃತಿಯನ್ನು ಮತ್ತು ರಕ್ಷಣಾತ್ಮಕ ಕಾರ್ಯತಂತ್ರವನ್ನು. ೬. ತೀಕ್ಷ್ಣಮತಿಗಳಾದವರು ಮುಂದೆ ಆಗಬಹುದಾದ ಆಕ್ರಮಣದ ಅಪಾಯವನ್ನು ಇತರರಿಗಿಂತ ಮೊದಲೇ ಮನಗಾಣುತ್ತಾರೆ. ಅದಕ್ಕೆ ಬೇಕಾದ ರಕ್ಷಣಾತಂತ್ರಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಆಕ್ರಮಣಕಾರರ ಪರವಾಗಿರುವವರಿಗೆ ಅಥವಾ ಅಂತಹ ಆಕ್ರಮಣದ ಅಪಾಯವನ್ನೇನೂ ಗ್ರಹಿಸಲಾರದವರಿಗೆ ರಕ್ಷಣಾತ್ಮಕ ತಂತ್ರಗಳನ್ನು ಹೇಳುವವರ ಬಗ್ಗೆ ಸಿಟ್ಟು ಬೇಸರ ಸಹಜ. ರಕ್ಷಣೆಯ ಬಗ್ಗೆ ಚಿಂತಿಸುವವರು ಅಸಹಿಷ್ಣುಗಳಾಗಿ ಅಥವಾ ಜಗಳಗಂಟರಾಗಿ ಕಾಣುವುದೂ ಸಹಜ. ವಾಸ್ತವವಾಗಿ ಸಾವರ್ಕರರದು ಆಕ್ರಮಣವಲ್ಲ, ಅವರದು ಆಕ್ರಮಣವನ್ನು ಎದುರಿಸಬೇಕಾದ ರಕ್ಷಣಾತ್ಮಕ ಯತ್ನಗಳ ಬಗ್ಗೆ ಚಿಂತನೆ. ೭. ಒಂದು ಸಮುದಾಯವಾಗಿ ಹಿಂದುಗಳಿಗಿಂತ ಹೆಚ್ಚಿನ ಹಕ್ಕು ಮುಸ್ಲಿಮರಿಗಿರಬಾರದು ಎಂದು ಸಾವರ್ಕರ್ ಹೇಳಿದ್ದರೇ ಹೊರತು ಮುಸ್ಲಿಂ ವ್ಯಕ್ತಿಗಳಿಗೆ ಹಿಂದೂಗಳಿಗೆ ಇರುವಷ್ಟೇ ಹಕ್ಕು ಸಮಾನವಾಗಿ ಇರಬಾರದು ಅಂತ ಹೇಳಿರಲಿಲ್ಲ. ೮. ವ್ಯಕ್ತಿಗಳ ನಡುವೆ ಸಮಾನತೆಯನ್ನು ಪ್ರತಿಪಾದಿಸಿದ ಸಾವರ್ಕರರ ಮೇಲೆ 'ಮುಸ್ಲಿಂ ದ್ವೇಷಿ' ಎನ್ನುವ ಆರೋಪ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ. ಅವರು ಮುಸ್ಲಿಮರಿಗೆ ಸಮಾನ ಅಧಿಕಾರವನ್ನು ನಿರಾಕರಿಸಿದವರು ಎಂದು ಅನೇಕ ಮಂದಿ ಈಗಲೂ ವ್ಯಾಖ್ಯಾನಿಸುತ್ತಲೇ ಇದಾರೆ ಅದು ಗಣಿತ ಗೊತ್ತಿಲ್ಲದವರ ಸಮಸ್ಯೆ. ೭೫ ಮಂದಿಯ ಗುಂಪಿಗೆ ಕೊಡುವಷ್ಟನ್ನೇ ಸಮವಾಗಿ ೨೫ ಮಂದಿಯ ಗುಂಪಿಗೂ ಕೊಡಬೇಕೆನ್ನುವ ತರ್ಕವನ್ನು ಸಾವರ್ಕರ್ ಒಪ್ಪಲಿಲ್ಲ. ಇದನ್ನೇ ಸಮಾನತೆಯ ನಿರಾಕರಣೆ ಎಂದು ಆರೋಪಿಸುವುದು. ಅವರು ನೂರು ಮಂದಿಗೂ ಸಮನಾಗಿ ಹಂಚಿ ಎಂದರು ಅಷ್ಟೇ. ಅಂತಹಾ ವೀರ ಸ್ವಾತಂತ್ರ್ಯ ಯೋಧನ ಜನ್ಮದಿನವಿಂದು.. ಅವರಿಂದ ನಾವು ಪ್ರಧಾನವಾಗಿ ಕಲಿಯಬೇಕಾದುದು ರಕ್ಷಣಾತ್ಮಕ ನಡೆ.. ಪ್ರತಿಯೊಬ್ಬ ಹಿಂದೂವಿಗೂ ಅವರ ವಿಚಾರಧಾರೆ ಅರಿವಿಗೆ ಬರಲಿ.. ಎನ್ನುವುದೇ ಈ ಹೊತ್ತಿನ ನನ್ನ ಹಾರೈಕೆ..

Post image
🙏 ❤️ 4
Image
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
5/28/2025, 9:44:55 AM

ಅಂತರಾಳದಿಂದ ವಿಕ್ರಮ ಪತ್ರಿಕೆಯ ಅಂಕಣಕಾರರಾದ Ramesha Doddapura ಅವರೊಂದು ಪೋಸ್ಟ್ ಶೇರ್ ಮಾಡಿದ್ದರು... ಶನೇಶ್ವರ ದೇವಸ್ಥಾನದಲ್ಲಿ ಭಕ್ತರು ಹ್ಯಾಪಿ ಬರ್ತ್ ಡೇ ಶನೀಶ್ವರ ಅಂತ ಘೋಷಣೆ ಕೂಗುತ್ತಾ ಶನಿಜಯಂತಿ ಆಚರಿಸಿದ ಬಗೆಗಿನ ಪೋಸ್ಟ್.. . ಓದಿದ ಹಾಗೆ ಅನಿಸಿದ್ದು .. ಜನರ ಭಾವನೆಯನ್ನೇ ಪ್ರಧಾನವಾಗಿ ನೋಡಿದರೆ ಶನಿಜಯಂತಿಯನ್ನ ಯಾವ ಭಾಷೆಯಲ್ಲಾದರೂ ಆಚರಿಸಲಿ.. ಜನರ ಭಾವ ಮುಖ್ಯ ಅಂತಂದುಕೊಂಡು ಸುಮ್ಮನಿದ್ದು ಬಿಡಬಹುದು.. ಆದರೆ ಇನ್ನೊಂದು ಆಯಾಮದಲ್ಲಿ ನೋಡಿದರೆ... ಇದೇ ಹವ್ಯಾಸ ಮುಂದುವರಿದು ಅಲ್ಲೊಂದು ಕಡೆ ಮಾಡಿದ್ದಾರೆ.. ನಾವೂ ಮಾಡಬಹುದು ಎನ್ನುವ ಧೈರ್ಯ ಮೂಡಿದಲ್ಲಿ... ಮುಂದಿನ ದಿನಗಳು ಹೇಗಾದೀತು..? ಈಗಲೇ ಮನೆಯಲ್ಲಿ ಜ್ಮದಿನವೆಂದರೆ " ಹ್ಯಾಪಿ ಬರ್ತ್ ಡೇ ಟೂ ಯೂ ಎಂದು ಹಾಡುತ್ತಾ ಕೇಕ್ ಕಟ್ " ಮಾಡುವುದು ನಮ್ಮ ಹಿಂದೂ ಸಂಪ್ರದಾಯದ್ದೇ ಅವಿಭಾಜ್ಯ ಅಂಗ ಎನ್ನುವ ಭಾವನೆ ಇದೆ.. ಇದು ಮಂದಿರಕ್ಕೂ ಆವರಿಸಲ್ಪಟ್ಟರೆ ನಮ್ಮ ನೈಜ ಸಂಪ್ರದಾಯಗಳು ಉಳಿದು ಬೆಳೆಯುವುದಾದರೂ ಎಲ್ಲಿ...? ಅದಲ್ಲದೆ ಅವರು ಶೇರ್ ಮಾಡಿದ ಚಿತ್ರದಲ್ಲಿ ಕನಿಷ್ಠ ಮೂವತ್ತು ನಲುವತ್ತು ಜನಗಳಿದ್ದರೂ.. ಅವರಲ್ಲಿ ಯಾರೊಬ್ಬರೂ ಇದನ್ನ ತಡೆಯದೆ ಇರುವುದು ಮತ್ತೊಂದು ಸೋಜಿಗ.. ಅಂದರೆ ಅಷ್ಟೂ ಜನಕ್ಕೆ ಇದು ಉಚಿತವಲ್ಲ ಎನ್ನುವ ಭಾವ ಮೂಡಿಲ್ಲ ಅನ್ನುವುದೂ ಸ್ಪಷ್ಟ.. ಅಲ್ವೇ ಹಿಂದೂಗಳಿಗೆ ಭಾರತ ದೇಶ ಹೇಗೆ ಒಂದೇ ಒಂದು ಆಶ್ರಯತಾಣವೋ... ಹಾಗೇ ಹಿಂದೂ ಸಂಪ್ರದಾಯಗಳಿಗೆ ಹಿಂದೂ ಮನೆಗಳೇ ಆಶ್ರಯತಾಣ ನಮ್ಮ ಮನೆ ಮಂದಿರಗಳಲ್ಲಿ ನಮ್ಮ ಸಂಪ್ರದಾಯಗಳು ಉಳಿಯದೇ ಹೋದರೆ ಅವುಗಳು ಮುಂದಿನ ಪೀಳಿಗೆಗೆ ಮುಂದುವರಿಯುವುದಾದರೂ ಹೇಗೆ...??

👍 🙏 2
Link copied to clipboard!