ಗುರುಪ್ರಸಾದ್ ಆಚಾರ್ಯ ಕುಂಜೂರು
February 9, 2025 at 06:16 AM
ನಿನ್ನೆಯ ದಿನ ಮುಲ್ಕಿ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವಿತ್ತು... Shreedhara Ds ಅವರು ಸಮ್ಮೇಳನಾಧ್ಯಕ್ಷರಾಗಿದ್ದ ಕಾರ್ಯಕ್ರಮದಲ್ಲಿ ಒಂದಷ್ಟು ಹೊತ್ತು ಭಾಗವಹಿಸಿದ್ದೆ... ಆಯೋಜನೆಯ ದೃಷ್ಟಿಯಿಂದ ಒಂದೊಳ್ಳೆಯ ಕಾರ್ಯಕ್ರಮ.. ಅದರಲ್ಲಿ ಖುಷಿ ಕೊಟ್ಟದ್ದು... ಕಟೀಲು ಕಾಲೇಜಿನ ವಿದ್ಯಾರ್ಥಿಗಳ .. " ಗಜವದನ ಹೇರಂಭ.. " ಮತ್ತು " ಶ್ರಾವಣ ಬಂತು ನಾಡಿಗೆ.. " ಅನ್ನುವ ಭಾವಪೂರ್ಣ ಸಾಮೂಹಿಕ ಹಾಡು..
ಆ ತಾಲೂಕಿನ ವ್ಯಾಪ್ತಿಯೊಳಗೆ ಬರುವ ಗ್ರಂಥಾಲಯಗಳ ಗ್ರಂಥ ಪಾಲಕ/ಕಿಯರನ್ನ ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿದ್ದು... ಅಷ್ಟು ಮಾತ್ರವಲ್ಲದೇ ಆ ಗ್ರಂಥಾಲಯದ ಓದುಗರನ್ನೂ ಕರೆಸಿ ಸನ್ಮಾನಿಸಿದ್ದು... ನಿಜಕ್ಕೂ ಜನರಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ಇದೊಂದು ಅತ್ಯುತ್ತಮ ಹೆಜ್ಜೆ.. ಈ ಚಿಂತನೆ ಮಾಡಿದವರಿಗೆ ಮತ್ತು ಅದನ್ನ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಿದ ಆಯೋಜಕರ ತಂಡಕ್ಕೆ ಅಭಿನಂದನೆ...