
ಗುರುಪ್ರಸಾದ್ ಆಚಾರ್ಯ ಕುಂಜೂರು
February 12, 2025 at 01:08 PM
#ಅಂತರಾಳದಿಂದ
ಕಾಲ ಎಲ್ಲರ ಕಾಲನ್ನೂ ಎಳೀತದೆ ಅನ್ನುವ ಮಾತು ಸುಳ್ಳಲ್ಲ..ಕಾರಣ ಈಗ ಎಲ್ಲೆಲ್ಲೂ ರನ್ವೀರ್ ಅಲಹಾಬಾದಿಯ ಹಾಗೂ ಸಮಯ್ ರೈನಾ ಅವರ ಕುರಿತಾದ ಚರ್ಚೆಗಳೇ ನಡೀತಾ ಇದೆ.. ಕಾಲನ ಚಮತ್ಕಾರ... ನೋಡಿ.. ಸಮಯ್ ರೈನಾ ಇದುವರೆಗೆ ಅಪ್ಪಟ ಶುದ್ಧ ಮನರಂಜನೆಯ ಕಾರ್ಯಕ್ರಮ ನಡೆಸುತ್ತಿದವನೇನಲ್ಲಾ... ಆತನ ಚಿಕ್ಕ ಪುಟ್ಟ ರೀಲ್ಸ್ ಗಳು ಫೇಸ್ ಬುಕ್ ವಾಲ್ ನಲ್ಲಿ ಕಾಣಿಸಿದಾಗ ಬಹುಶಃ ೭೫% ಭಾಗ ಕೊಳಕು ಭಾಷಾ ಪ್ರಯೋಗ, ಲೈಂಗಿಕತೆಯ ಕುರಿತಾದ ಜೋಕುಗಳೇ ಕಾಣಿಸುತ್ತಿದ್ದುದು... ಅಂತಹಾ ಕಾರ್ಯಕ್ರಮವೊಂದು ನಿರಾತಂಕವಾಗಿ ಸಾಗುತ್ತಲೇ ಇತ್ತು.. ಯಶಸ್ವೀ ಕಾರ್ಯಕ್ರಮವೂ ಅದಾಗಿತ್ತು ಅನ್ನುವುದೇ ನಮ್ಮ ಯುವ ಸಮಾಜ ಯಾವುದನ್ನು ಬಯಸುತ್ತದೆ ಅನ್ನುವುದಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದೇನೋ... ಆದರೆ ಅಂತಹಾ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ಸ್ವೀಕರಿಸಬೇಕೋ ಬೇಡವೋ ಎನ್ನುವ ವಿವೇಚನೆ ಮಾಡಬೇಕಾದದ್ದು ರನ್ವೀರ್ ಕರ್ತವ್ಯವಾಗಿತ್ತು... ಆದರೆ ಪ್ರಸಿದ್ಧಿಯ ಶಿಖರದಲ್ಲಿರುವ ಶೋದಲ್ಲಿ ತಾನೂ ಭಾಗಿಯಾಗಬೇಕೆನ್ನುವ ಮನಸಾಯಿತಲ್ಲ... ಇದು ರನ್ವೀರ್ ನ ಇನ್ನೊಂದು ಮುಖವನ್ನೇ ತೋರಿಸುತ್ತದೆ... ಕೊಳಚೆಗಿಳಿಯುವ ಮುನ್ನವೇ ಆಲೋಚನೆ ಮಾಡಬೇಕಲ್ವೇ... ಅಷ್ಟಕ್ಕೂ ಅಷ್ಟೊಂದು ಸುಪ್ರಸಿದ್ಧರನ್ನ ಸಂದರ್ಶನ ಮಾಡಿ ಅನೇಕ ಆಧ್ಯಾತ್ಮಿಕ ಸಾಧನೆ ಮಾಡಿದ ಜನರ ಸಂಪರ್ಕಕ್ಕೆ ಬಂದು ಅವರ ಮಾತುಗಳನ್ನ ಆಲಿಸಿಯೂ ಇಂತಹಾ ಕೊಳಕಿಗೆ ಇಳಿಯುವ ಮನಸಾಗಿದೆ ಎಂದರೆ ಆತ ಇದುವರೆಗೆ ಮಾಡಿದ ಸಂದರ್ಶನಗಳಿಂದ ಗಳಿಸಿಕೊಂಡದ್ದೇನು...? ಈ ಘಟನೆ ಸಮಯ್ ರೈನಾ ನ ಶೋವಿನ ಕೊಳಕನ್ನಷ್ತೇ ಜಗಜ್ಜಾಹೀರು ಮಾಡಿದ್ದಲ್ಲ ಬದಲಿಗೆ ರನ್ವೀರ್ ಕೂಡಾ ತೋರಿಕೆಯ ಕೇಳುಗ ( ಆತನ ಸಂದರ್ಶನಗಳಲ್ಲಿ ಭಾರೀ ತನ್ಮಯತೆಯಿಂದ ಅತಿಥಿಗಳ ಮಾತನ್ನ ಕೇಳುವಂತೆ ಅಭಿನಯಿಸುತ್ತಾನೆ.. ) ಎನ್ನುವುದನ್ನೂ ಜಗಜ್ಜಾಹೀರು ಮಾಡಿತು.. ಅಷ್ಟೇ
👍
3