ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 17, 2025 at 10:32 AM
#ಅಂತರಾಳದಿಂದ ನ್ಯೂಸ್ ಚಾನಲ್ ಒಂದರ ಪೇಜಲ್ಲಿ ಡಾಲಿ ಧನಂಜಯ್ ಅವರ ಮದುವೆಯ ಕುರಿತಾಗಿ ವೀರಕಪುತ್ರ ಶ್ರೀನಿವಾಸ ಅವರು ಬರೆದದ್ದು ಎನ್ನಲಾದ ಪೋಸ್ಟ್ ಒಂದು ಕಾಣಿಸಿತು.. ಆ ಪೋಸ್ಟಿನಲ್ಲಿ... ಬಡವರ ಮಕ್ಕಳು ಬೆಳೀಬೇಕು, ಅಂತ ಹೇಳಿಕೆ ನೀಡಿದ್ದ ಡಾಲಿ ಧನಂಜಯ್ ಅವರ ಅದ್ಧೂರಿ ಮದುವೆಯನ್ನ ಸಮರ್ಥಿಸಿಕೊಂಡಿದ್ದರು.. ಅವರು ಹೇಳ್ತಾರೆ..." ಬಡವರ ಮಕ್ಕಳು ಬೆಳೀಬೇಕು.. ಅಂತ ಹೇಳಿದ್ದು ನಿಜ ಹಾಗಂತ ಬೆಳೆದ ಮೇಲೆ ಬಡವರಂತೆ ಬದುಕಬೇಕು ಅಂತ ಹೇಳಿದ್ರಾ...? ಬಡವನ ಮಗ ಶ್ರೀಮಂತರನ್ನ ನಾಚಿಸುವಂತೆ ಮದುವೆಯಾದ ಅನ್ನೋದು ಸ್ಪೂರ್ತಿಯಾಗಬೇಕಿತ್ತು.. ನಾವೂ ಹಾಗೆ ಆಗಬೇಕು ಅನ್ನುವ ಹಠ ಹುಟ್ಟಬೇಕಿತ್ತು... " ಅಂತ ವಾಸ್ತವದಲ್ಲಿ ನನಗೆ ಕಂಡಂತೆ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಅವರು ಅದ್ಧೂರಿ ಮದುವೆಯಾಗಿದ್ದಕ್ಕಿಂತಲೂ ಹಿಂದೂ ಧರ್ಮದ ಆಚರಣೆಗಳನ್ನ ಮೂಢನಂಬಿಕೆ ಅಂತ ಕೊಂಕು ನುಡಿದಿದ್ದ ಡಾಲಿ ಈಗ ತನ್ನ ಕುಟುಂಬದವರಿಗೋಸ್ಕರ ತಮ್ಮ ಕುಲದ ಸಂಪ್ರದಾಯಗಳನ್ನ ಆಚರಿಸುತ್ತಿದ್ದೇನೆ ಅಂತ ಹೇಳಿಕೊಂಡರಲ್ಲ ಆ ಕಾರಣಕ್ಕೆ ಜನರು ಡಾಲಿ ಅವರ ಕಾಲೆಳೆದಿದ್ದು.. ಎಡಪಂಥೀಯ ಚಿಂತನೆಯವರೊಂದಿಗೆ ಗುರುತಿಸಿಕೊಂಡಾಗ ಇವರೆಲ್ಲಾ ಅಂಬಾನಿಯವರ ಮಗನ ಮದುವೆಯನ್ನ ಟೀಕಿಸಿದ್ದರಲ್ಲಾ... ವೀರಕಪುತ್ರ ಶ್ರೀನಿವಾಸ್ ಅವರು ಆಗಲೂ ಇಂತಹಾ ಹೇಳಿಕೆಯನ್ನ ಕೊಡಬಹುದಿತ್ತಲ್ಲಾ... ಆ ಮದುವೆಯೂ, ನಾವು ಆ ರೀತಿ ಬೆಳೆಯಬೇಕು ಅನ್ನುವುದಕ್ಕೆ ಪ್ರೇರಣೆಯಾಗಬಹುದಿತ್ತಲ್ವೇ..? ಯಾಕೆ ಡಾಲಿ ಧನಂಜಯ್ ಮಾತ್ರ ಪ್ರೇರಣೆಯಾಗಬೇಕು...? ಅಂಬಾನಿ ಪ್ರೇರಣೆ ಯಾಕಾಗಬಾರದು...? ಇದೇ ವೀರಕಪುತ್ರ ಶ್ರೀನಿವಾಸ ಅವರು ಹೇಳುವಂತೆ ಡಾಲಿ ಅದ್ಧೂರಿ ಮದುವೆಯಿಂದ ಪೆಂಡಾಲ್ ಹಾಕೋರಿಗೆ, ಕಸ ಗುಡಿಸೋರಿಗೆ, ಹೂ ಮಾರೋರಿಗೆ, ತರಕಾರಿ ಮಾರೋರಿಗೆ.. ಹೀಗೆ ಅನೇಕರಿಗೆ ವ್ಯಾಪಾರವಾಯ್ತು ಅನ್ನೋದು ಅಂಬಾನಿಯ ವಿಚಾರದಲ್ಲೂ ಅನ್ವಯಿಸಬೇಕಲ್ಲಾ... ಅಂಬಾನಿಯ ಮಗನ ಮದುವೆಯನ್ನ ದೂರಿದವರು ಡಾಲಿ ಮದುವೆಯನ್ನೂ ದೂರಬೇಕಿತ್ತು... ತಮ್ಮ ಸಿದ್ಧಾಂತದವನಾದರೆ ಮಾಡಿದ್ದು ಸರಿ.. ಇನ್ಯಾರೋ ಆದರೆ ಟೀಕೆ ಇದು ಹೇಗೆ ಸರಿ...? ನನ್ನ ವೈಯಕ್ತಿಕ ಅಭಿಪ್ರಾಯದಂತೆ... ಡಾಲಿಯಾದರೂ ಸರಿಯೇ ಅಂಬಾನಿಯಾದರೂ ಸರಿಯೇ...ಒಳ್ಳೆಯ ಗಳಿಕೆ ಉಳ್ಳವರು ಅದ್ಧೂರಿಯಾಗಿಯೇ ಮದುವೆಯಾಗಲಿ ಅದರಿಂದ ಬೇಕಾದಷ್ಟು ಜನರ ಬದುಕಿಗೆ ಲಾಭವೇ ಸರಿ... ಹಾಗಂತ ಇನ್ನೊಬ್ಬರ ಅದ್ಧೂರಿತನವನ್ನೂ ಹೀಯಾಳಿಸಲು ಹೋಗಬಾರದು... ಹೀಯಾಳಿಸಿದಿರೋ ಸರಳ ಜೀವನ ಪಾಲಿಸುತ್ತಾ ಆ ಬಳಿಕ ಇನ್ನೊಬ್ಬರನ್ನ ಹೀಯಾಳಿಸಬೇಕಷ್ತೇ.. ಇದು ಅದ್ಧೂರಿ ತನಕ್ಕೂ ಅಷ್ಟೇ ನಮ್ಮ ಸಂಪ್ರದಾಯ ಆಚರಣೆಗಳ ವಿಚಾರಕ್ಕೂ ಅಷ್ಟೇ... ಇವರಿಗೆ ಮೊದಲು ಮೂಢನಂಬಿಕೆ ಅಂತಾಗಿದ್ದು ಜನರು ತಮ್ಮ ಹಿರಿಯರಿಗೆ ಕೊಡುವ ಗೌರವವಾಗಿ ಆಚರಣೆಯಾಗಿರಬಹುದಲ್ವಾ... ಮೂಢನಂಬಿಕೆ ಅಂತ ಇಡಿಯ ಹಿಂದೂ ಸಮಾಜಕ್ಕೆ ಸಂದೇಶ ಕೊಟ್ಟವರು ಅದು ಯಾವ ರೀತಿಯಲ್ಲಿ ಮೂಢನಂಬಿಕೆ ಎನ್ನುವದನ್ನ ಮನೆಯವರಿಗೆ ಮನವರಿಕೆ ಮಾಡಿಕೊಡಬಹುದಿತ್ತಲ್ಲಾ... ಹಾಗಾಗಿ ಯಾವುದೋ ಸೈದ್ಧಾಂತಿಕ ನಾಯಕರ ಮನವೊಲಿಸುವ ಕಾರಣಕ್ಕಾಗಿ ಏನೇನೋ ಹೇಳಿಕೆ ಕೊಡುವ ಬದಲು ನಮ್ಮತನವನ್ನ ನಮ್ಮ ಸಂಪ್ರದಾಯ ಸಂಸ್ಕೃತಿಯನ್ನ ಅರಿತು ಅದರಂತೆ ಜೀವಿಸುವುದು ಲೇಸಲ್ಲವೇ...???
👍 ❤️ 3

Comments