ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 17, 2025 at 11:33 AM
ಹೀಗೊಂದು ಯೋಚಿಸಬೇಕಾದ ವಿಚಾರ.. ಸರ್ಕಾರದ ಪ್ರಕಾರ 18 (ಸ್ತ್ರೀ) ಹಾಗೂ 21 (ಪುರುಷ) ಆದ ತಕ್ಷಣ ಮದುವೆ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವಲ್ಲ? ಹಿಂದೂಗಳಲ್ಲಿ ಹೆಚ್ಚಾಗಿ ವೈಯಕ್ತಿಕ ಕೆರಿಯರ್, ಇಲ್ಲಸಲ್ಲದ ಸಿದ್ಧಾಂತಗಳು, ವೋಕಿಸಂ... ಮುಂತಾದ ಕಾರಣಗಳಿಂದಾಗಿ ಯುವತಿಯರ ಮದುವೆ ವಯಸ್ಸು 30 ವರ್ಷದ ಆಸುಪಾಸಿಗೆ ತಲುಪಿರುವಂತೆ ಕಾಣುತ್ತಿದೆ. ಹಾಗೆಯೇ ಯುವಕರ ಮದುವೆ ವಯಸ್ಸು 35ಕ್ಕಿಂತ ಹೆಚ್ಚಾಗಿದೆ ಎನ್ನುವುದು ಇತ್ತೀಚಿನ ಮದುವೆಗಳನ್ನು ನೋಡಿದಾಗ ತಿಳಿಯುತ್ತದೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಬಹುತೇಕ, ಕಾನೂನು ಪ್ರಕಾರ ಅರ್ಹ ವಯಸ್ಸಿಗೆ ಬಂದಕೂಡಲೇ ಮದುವೆ ಮಾಡಿಬಿಡುತ್ತಾರೆ. ಒಂದೇ ವಯಸ್ಸಿನ ಮುಸ್ಲಿಂ ಹಾಗೂ ಹಿಂದೂ ಸ್ನೇಹಿತರು ಇದ್ದರಂದುಕೊಳ್ಳೋಣ. ಮುಸ್ಲಿಂ ಯುವಕ 21ಕ್ಕೆ ಮದುವೆ ಆಗುತ್ತಾನೆ, ಹಿಂದೂ ಯುವಕ 35ಕ್ಕೆ ಮದುವೆ ಆಗುತ್ತಾನೆ. ಹಿಂದೂ ಯುವಕ ಮದುವೆ ಆಗುವ ಹೊತ್ತಿಗೆ ಮುಸ್ಲಿಂ ಯುವಕನ ಮಗ ಹೈಸ್ಕೂಲಿನಲ್ಲಿ ಓದುತಿರುತ್ತಾನೆ. ಹಿಂದೂ ಸ್ನೇಹಿತನ ಮಗ ಹೈಸ್ಕೂಲಿಗೆ ಬರುವ ಹೊತ್ತಿಗೆ ಮುಸ್ಲಿಂ ಸ್ನೇಹಿತ ತಾತನಾಗಿರುತ್ತಾನೆ. ಹೀಗೆ ಹಿಂದೂ ಹುಡುಗನ ಎರಡು ಪೀಳಿಗೆಯ ಹೊತ್ತಿನಲ್ಲಿ ಮುಸ್ಲಿಂ ಹುಡುಗನ ಮೂರು ಪೀಳಿಗೆಗಳು ಆಗಿರುತ್ತವೆ. ಇದನ್ನು ಕಾನೂನಿನಿಂದ ತಡೆಯಲು ಸಾಧ್ಯವಿಲ್ಲವಲ್ಲ? ಹಾಗಾಗಿ ಏಕರೂಪ ನಾಗರಿಕ ಸಂಹಿತೆಯಿಂದಲೇ ಎಲ್ಲವೂ ಸರಿಯಾಗುತ್ತದೆ ಎಂದು ಹೇಗೆ ಹೇಳುವುದು? ವಿಕ್ರಮ ವಾರಪತ್ರಿಕೆಯಲ್ಲಿ ಟಿ.ಎಂ. ರಮೇಶ್ ಅವರ ಲೇಖನದ ಒಂದು ಅಂಶ ಇದು... ಇದು ಯೋಚಿಸಲೇಬೇಕಾದ ವಿಚಾರ... ಸರಿಯಾದ ಪ್ರಾಯಕ್ಕೆ ಮದುವೆಯಾಗುವುದು ಮತ್ತು ಮಕ್ಕಳನ್ನ ಪಡೆಯುವುದು ಹಿಂದೂ ಸಮಾಜದ ಈಗಿನ ಅಗತ್ಯತೆ...
👍 8

Comments