ಗುರುಪ್ರಸಾದ್ ಆಚಾರ್ಯ ಕುಂಜೂರು
February 20, 2025 at 12:08 PM
#ಅಂತರಾಳದಿಂದ
ಈಗಿನ ರಾಜಕೀಯದಾಟದಲ್ಲಿ ಫ್ಲೆಕ್ಸ್ / ಬ್ಯಾನರ್ ಗಳದ್ದು ಪ್ರಧಾನ ಪಾತ್ರವಿದೆ ಅಂತ ಹೇಳಿದರೆ ಸುಳ್ಳಾಗಲಿಕ್ಕಿಲ್ಲ. ತಮ್ಮ ಪಕ್ಷದ ನಾಯಕರಿಗೆ ಅಭಿನಂದನೆ ಕೋರುವುದೋ, ತಮ್ಮ ಊರಿನ ದಾರಿಗೆ ಇಷ್ಟು ಕೋಟಿ ಹಣ ಬಿಡುಗಡೆ ಮಾಡಿದ್ದಕ್ಕೆ ಕೃತಜ್ಞತೆ ಅರ್ಪಿಸುವುದೋ ಅಥವಾ ವಿಶೇಷ ಹಬ್ಬಗಳಿಗೆ ಶುಭಾಶಯ ಕೋರುವುದೋ ಇಲ್ಲೆಲ್ಲಾ ಒಂದು ಸ್ಪರ್ಧಾತ್ಮಕ ಮನೋಭಾವ ಕಾಣಿಸಿಯೇ ಕಾಣಿಸುತ್ತದೆ... ನಾನಿರುವ ಪ್ರದೇಶ ಉಡುಪಿ ಜಿಲ್ಲೆಯ ಕಾಪು ತಾಲೂಕು... ಕಾಪು ತಾಲೂಕಿನ ಪ್ರಸಿದ್ಧ ದೇವಾಲಯ ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವ ನಡೆಯಲಿಕ್ಕಿದೆ.. ಕಳೆದ ವಾರ ಹೆಜಮಾಡಿಯಿಂದ ಹಿಡಿದು ಉಡುಪಿಯವರೆಗೆ ಕಾಪು ಶಾಸಕರ ಹೆಸರಿನ ಅನೇಕ ಬ್ಯಾನರ್ ( ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರುವ ಬ್ಯಾನರ್ ) ಕಾಣಸಿಕ್ಕಿತ್ತು... ಅದೇ ನಿನ್ನೆಯ ದಿನ ಕಾಪು ಪರಿಸರದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರ ಹೆಸರಿನ ಅನೇಕ ಬ್ಯಾನರ್ ಗಳು ತಲೆ ಎತ್ತಿ ನಿಂತಿದೆ... ಅವರದ್ದಕ್ಕಿಂತ ನನ್ನದು ಜಾಸ್ತಿ ಇರಬೇಕು ಅನ್ನುವ ಹಠಕ್ಕೆ ಬಿದ್ದ ಹಾಗೆ ತೋರುವ ಫ್ಲೆಕ್ಸ್ ಗಳು... ಇದೇ ಸ್ಪರ್ಧಾತಕ ಮನೋಭಾವ ... ಕೇವಲ ಫೆಕ್ಸ್ ಹಾಕುವುದರಲ್ಲಿ ಕಾಣಿಸುವುದಕ್ಕಿಂತಲೂ ತಮ್ಮ ಕ್ಷೇತ್ರದ ಜನರಿಗೆ ಉಪಯೋಗವಾಗುವ ಕೆಲಸ ಮಾಡುವಲ್ಲಿ ಕಾಣಿಸಿಕೊಂಡಿದ್ದಿದ್ದರೆ ಕ್ಶೇತ್ರಗಳು ಅದೆಷ್ಟು ಅಭಿವೃದ್ಧಿಯಾಗಿರುತ್ತಿತ್ತೋ ಏನೋ ಅಲ್ವೇ...??
👍
2