ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 20, 2025 at 12:08 PM
#ಅಂತರಾಳದಿಂದ ಹಿರಿಯರೋರ್ವರ ಲೇಖನ ಓದಲು ಸಿಕ್ಕಿತ್ತು... ಕುಂಭ ಮೇಳದ ಪುಣ್ಯಸ್ನಾನದ ಕುರಿತಾದದ್ದು. ಮತ್ತು ನಮ್ಮ ಹಿಂದೂ ನಂಬಿಕೆಯ ಕುರಿತಾದದ್ದು ಪ್ರಬುದ್ಧತೆ ಹಾಗೂ ವೈಜ್ಞಾನಿಕ ಚಿಂತನೆಯ ಕುರಿತಾದದ್ದು.. ಲೇಖಕರ ಅಭಿಪ್ರಾಯದಂತೆ ಕಾಶಿಯ ಗಂಗೆ ಇಂದು ಸ್ನಾನಯೋಗ್ಯವಾದುದಲ್ಲ.. ಮತ್ತು ಈಗಿನ ಕುಂಭಮೇಳದ ನೀರು ಕೂಡಾ ಸ್ನಾನಯೋಗ್ಯವಾದುದಲ್ಲ.. ( ನೇರವಾಗಿ ಕುಂಭ ಮೇಳದ ನೀರು ಸ್ನಾನ ಯೋಗ್ಯವಲ್ಲ ಅಂತ ಹೇಳಿಲ್ಲವಾದರೂ ಪರೋಕ್ಷವಾಗಿ ಕುಂಭ ಮೇಳದ ನೀರೂ ಸ್ನಾನ ಯೋಗ್ಯವಾದುದಲ್ಲ.. ಅಂತ ಹೇಳಿದಂತಿದೆ ) ಆದರೆ ಸ್ನಾನ ಯೋಗ್ಯವಾದುದಲ್ಲ ಅನ್ನುವುದನ್ನ ಹೇಳುವುದಾದರೂ ಯಾವ ಆಧಾರದ ಮೇಲೆ..?? ವೈಜ್ಞಾನಿಕವಾಗಿ ನೀರಿನಲ್ಲಿ ಈ ರೀತಿಯ ಅಂಶಗಳು ಇದ್ದಾಗ ಅದು ಸ್ನಾನಯೋಗ್ಯವಲ್ಲ ಅನ್ನುತ್ತಾರೆ... ಆದರೆ ವಿಚಿತ್ರವೆಂದರೆ ಸರಿಸುಮಾರು ೫೦ ಕೋಟಿ ಜನರು ಸ್ನಾನ ಮಾಡಿ ಬಂದರೂ ಇದುವರೆಗೂ ಯಾರೊಬ್ಬರಿಗೂ ಯಾವೊಂದು ಅನಾರೋಗ್ಯವೂ ಕಾಡಿಲ್ಲ.. ಅಂದರೆ ನಂಬಿಕೆಯು ದೃಡವಾಗಿದ್ದಾಗ ವೈಜ್ಞಾನಿಕತೆಯೂ ಸಪ್ಪೆ ಮೋರೆ ಹಾಕಿ ಕುಳಿತುಕೊಳ್ಳುತ್ತದೆಯೇನೋ.. ವೈಜ್ಞಾನಿಕ ಸಂಶೋಧನೆಗಳೇ ಹೇಳುವಂತೆ... ಒಬ್ಬಾತನ ಕೈಸೀಳಿ ರಕ್ತ ಬೀಳುವುದನ್ನ ಆತನಿಗೆ ತೋರಿಸಿ ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ ರಕ್ತ ಬೀಳುವ ಸದ್ದನ್ನು ಮಾತ್ರ ಹಾಗೇ ಮುಂದುವರೆಸಿ, ರಕ್ತ ಸೋರುವಿಕೆಯನ್ನ ನಿಲ್ಲಿಸಿದರೂ ಆತ ಮೃತನಾದ ಕತೆಯೊಂದು ಕೇಳಿದ್ದೆ... ಯಾಕೆ ಮುಳ್ಳು ಚುಚ್ಚಿದಾತನಿಗೆ ಪಕ್ಕನೆ ಪಕ್ಕದಲ್ಲಿ ಹಾವೊಂದನ್ನ ಕಾಣಿಸಿದರೆ ತನಗೆ ಹಾವು ಕಚ್ಚಿತು ಎನ್ನುವ ನಂಬಿಕೆಯಿಂದಲೇ ಸಾವಿಗೀಡಾದ ಘಟನೆಯೂ ಕೇಳಿದ್ದಿದೆ.. ತೀರಾ ವೈಜ್ಞಾನಿಕ ಮನೋಭಾವದಲ್ಲೇ ಬದುಕುತ್ತೇವೆ ಅಂದರೆ ಬದುಕು ಕಷ್ಟವೇ... ಕೋಟಿ ಕೋಟಿ ಜನರೂ ಈ ವಿಷಯುಕ್ತ ನೀರಲ್ಲಿ ಮಿಂದೆದ್ದು ಸುಖವಾಗಿದ್ದಾರೆ ಅಂದರೆ ಅರ್ಥವೇನು..? ಒಂದು ನದಿ ವಿಷಮಯವಾಗಿಲ್ಲ ಅಥವಾ ಆ ಹರಿಯುವ ನದಿಯ ಗುಣ ಹೇಗಿದೆಯೆಂದರೆ ಆ ಎಲ್ಲಾ ವಿಷವನ್ನೂ ಅಮೃತವನ್ನಾಗಿಸುತ್ತಿದೆ ಎಂದು ತಾನೇ.. ಬೇರೇನೂ ಬೇಡ.. ಸರಳ ಉದಾಹರಣೆ ಕಟ್ಟಡ ಕಾರ್ಮಿಕರ ಮಕ್ಕಳು ಮರಳಲ್ಲಿ ಆಡುತ್ತಾ ಇರುತ್ತದೆ.. ಯಾವ ಯಾವ ನೀರನ್ನೆಲ್ಲಾ ಕುಡಿಯುತ್ತದೆ ಆದರೆ ಕುದಿಸಿ ತಣಿಸಿದ ಫಿಲ್ಟರ್ ನೀರು ಕುಡಿಯುವ ಪ್ಲ್ಯಾಟಿನ ಮಕ್ಕಳಿಗಿಂತ ಆರೋಗ್ಯವಾಗಿರುತ್ತದೆ..ಹಾಗೆ ನೋಡ ಹೋದರೆ ದೆಹಲಿಯಲ್ಲಿ ಉಸಿರಾಡಿದರೆ ಸಾವು ನಿಶ್ಚಿತವೇ ಏನೋ ಆದರೂ ಅಲ್ಲಿನ ಜನತೆ ಬದುಕುತ್ತಿದ್ದಾರೆ ಅಲ್ವಾ...ಇದನ್ನ ವಿಜ್ಞಾನ ಹೇಗೆ ವಿವರಿಸುತ್ತದೆ..? ಅಲ್ಲಿಗೆ ಹೋಗಬೇಕಾದ ಸಂದರ್ಭ ಬಂದರೆ ಲೇಖಕರು ಹೋಗದೇ ತಮ್ಮೂರಲ್ಲೇ ಉಳಿದುಕೊಳ್ಳುತ್ತಾರಾ...? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ... ಲೇಖಕರ ಇನ್ನೊಂದು ಹೇಳಿಕೆ " ಹಿಂದೂ ಸಮಾಜದ ಒಂದು ಕೊರತೆ ಏನೆಂದರೆ ಅದರಲ್ಲಿ ಆಧುನಿಕತೆ ಹಾಗೂ ವೈಜ್ಞಾನಿಕತೆ ಅಂದರೆ ಅದು ಯುರೋಪಿಯನ್ ಮಾನಸಿಕತೆ ಅಂತಿದೆ " ಈ ಹೇಳಿಕೆಯನ್ನ ಭಾಗಶಃ ಒಪ್ಪಬಹುದಾದರೂ ಪೂರ್ತಿ ಸತ್ಯವಲ್ಲ... ಯಾಕೆಂದರೆ ವಿಜ್ಞಾನವನ್ನೇನೂ ತೀರಾ ತಿರಸ್ಕರಿಸಿದ ಸಮುದಾಯ ಹಿಂದೂ ಸಮುದಾಯವಲ್ಲ... ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಜನ ಕಟುವಾಗಿ ಕಮೆಂಟ್ ಮಾಡಿದ ಕೂಡಲೇ ಅದು ಇಡಿಯ ಹಿಂದೂ ಸಮಾಜದ ಮನಸ್ಥಿತಿ ಅಂತಾಗುವುದಿಲ್ಲ... ( ಈಗ ಅವರ ಪೋಸ್ಟಿಗೆ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಜನರೂ ಇದೇ ಹಿಂದೂ ಸಮುದಾಯದವರೇ ಅಲ್ವಾ ) ಅಂದರೆ ಯಾವುದೋ ಒಂದು ಆಳವಾದ ನಂಬಿಕೆಯನ್ನ ವೈಜ್ಞಾನಿಕ ಆಧಾರದ ಮೇಲೆ ನಿರಾಕರಿಸಿದಾಗ ಜನರು ಭಾವುಕರಾಗೋದು ಸಹಜವೇ.. ಹಾಗೆ ಆಗುವುದಕ್ಕೆ ಕಾರಣ ಯಾವ ವೈಜ್ಞಾನಿಕ ದೃಷ್ಟಿಕೋನದ ಪರಿಣಾಮ ಏನಾಗಬೇಕಿತ್ತೋ ಅದು ಆಗಿಲ್ಲ ಅನ್ನೋದು... ಅಂದರೆ ಅಷ್ಟು ವಿಷಯುಕ್ತ ನದಿ ನೀರಿನಲ್ಲಿ ಸ್ನಾನ ಮಾಡಿದವರಿಗೆ ಆಗಬೇಕಾದ ಕೆಟ್ಟ ಪರಿಣಾಮ ಆಗಿಲ್ಲವಲ್ಲ... ಇದು ನಂಬಿಕೆಯನ್ನ ಗಟ್ಟಿಗೊಳಿಸುತ್ತದೆ... ಕೆಟ್ಟ ಪರಿಣಾಮ ಆಗದೇ ಇರುವುದಕ್ಕೆ ವೈಜ್ಞಾನಿಕ ಸಮರ್ಥನೆ ಏನಿದೆ...ಇವರಲ್ಲಿ ? ಹಾಗೆಂದು ಆ ಇಡಿಯ ಲೇಖನದಲ್ಲಿ ನಾವು ಸ್ವೀಕರಿಸಬೇಕಾದದ್ದು ಏನೂ ಇಲ್ಲ ಅಂತ ನಾನು ಹೇಳಲಾರೆ... ನಮ್ಮ ಪುಣ್ಯಕ್ಷೇತ್ರಗಳು ಸಕಾರಾತ್ಮಕ ಶಕ್ತಿಯನ್ನ ಒಳಗೊಂಡದ್ದು ಸತ್ಯವೇ.. ಅದರಲ್ಲಿ ನನಗಂತೂ ಸಂದೇಹ ಇಲ್ಲ.. ಹಾಗಿದ್ದೂ ಇಂದು ಜನಸಂಖ್ಯೆ ಜಾಸ್ತಿಯಾಗಿದೆ.. ಕ್ಷೇತ್ರದರ್ಶನ ಮಾಡುವವರ ಸಂಖ್ಯೆ ಬೆಳೆದಿದೆ.. ಒಂದು ದೊಡ್ಡ ಬಿಳಿ ಬಣ್ಣದ ಪೈಂಟ್ ಡಬ್ಬಕ್ಕೆ ಒಂದೊಂದೇ ಹನಿ ಕಪ್ಪು ಬಣ್ಣ ಸೇರಿಸುತ್ತಾ ಹೋದಾಗ ಮೊದಲಿಗೆ ಯಾವುದೇ ಬದಲಾವಣೆ ಕಾಣಿಸುವುದೇ ಇಲ್ಲ.. ಅದೇ ದೊಡ್ಡ ಮಟ್ಟದಲ್ಲಿ ಕಪ್ಪು ಬಣ್ಣ ಸೇರಿಸುತ್ತಾ ಹೋದರೆ ಬಿಳಿಯ ಬಣ್ಣ ಕಂದು ಬಣ್ಣವಾಗುತ್ತಾ ಬದಲಾಗುತ್ತದೆ.. ಹಾಗಾದಾಗ ಒಂದೋ ಕಪ್ಪು ಬಣ್ಣವನ್ನ ಸೇರಿಸುವುದನ್ನ ಕಡಿಮೆ ಮಾಡಬೇಕು ಇಲ್ಲವೇ ಬಿಳಿ ಬಣ್ಣವನ್ನ ಸೇರಿಸಬೇಕು.. ಬಿಳಿ ಬಣ್ಣವನ್ನ ಸೇರಿಸುವುದೆಂದರೆ ಸಾನಿಧ್ಯದ ಶಕ್ತಿ ವೃದ್ಧಿ.. ಅದಕ್ಕೆ ಬೇಕಾದಷ್ಟು ನಮ್ಮಲ್ಲಿ ಮಾರ್ಗವಿದೆ.. ನಮ್ಮಲ್ಲಿ ಬ್ರಹ್ಮಕಲಶ ಪರಿಕಲ್ಪನೆಯೆಲ್ಲಾ ಸಾನಿಧ್ಯವೃದ್ಧಿಯೇ ತಾನೇ... ಈ ಚಿಂತನೆ ನಮ್ಮ ಹಿರಿಯರಿಗಿತ್ತು ಎಂದರೆ ಅವರ ವೈಜ್ಞಾನಿಕ ಮನೋಧರ್ಮಕ್ಕೆ ನಾವು ಶಿರಬಾಗಲೇಬೇಕಲ್ವೇ ಜತೆಗೆ ಬರುವ ಜನರೂ ತಮ್ಮೊಳಗಿನ ಋಣಾತ್ಮಕ ಶಕ್ತಿಯನ್ನ ಕಡಿಮೆಗೊಳಿಸುವುದು ಅಂದರೆ ಹೆಚ್ಚೆಚ್ಚು ಧಾರ್ಮಿಕರಾಗಲೂ ಬೇಕು.. ಶುಚಿತ್ವ ಹಿಂದೂ ಧರ್ಮದ ಮೂಲ ನಡವಳಿಕೆಯಲ್ಲೇ ಇದೆ.. ಅದನ್ನ ಪಾಲಿಸುವಲ್ಲಿ ಮತ್ತು ನನ್ನಿಂದ ಪುಣ್ಯನದಿಗಳು ಕೊಳಕಾಗದಿರಲಿ ಎನ್ನುವ ಭಾವವೂ ಬೇಕೇ ಬೇಕು.. ಕನಿಷ್ಠ ಕೊಳಗಾದಂತೆ ನಾವು ನಡೆದುಕೊಳ್ಳುತ್ತೇವೆ ಎನ್ನುವ ಸಂಕಲ್ಪ ಮಾಡಲು ಹೇಳುವುದು ಸೂಕ್ತವೇ ಹೊರತು ವೈಜ್ಞಾನಿಕತೆಯ ಭಾವ ಪ್ರದರ್ಶಿಸಿ ಪುಣ್ಯಸ್ನಾನಕ್ಕೆ ಅರ್ಥವಿಲ್ಲ ಎಂದು ಹೇಳುವುದು ಸಮಂಜಸ ಅಲ್ಲವೇನೋ... ಅಲ್ವೇ
👍 1

Comments