ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 27, 2025 at 08:14 AM
ಕೇಳಿದ್ದು ಪ್ರಸಂಗ : ಸುಗ್ರೀವ ಸಖ್ಯ.. ಸುಗ್ರೀವನ ಜತೆ ಮೈತ್ರಿ ಏರ್ಪಡುವ ಹೊತ್ತಿಗೆ ವಾಲಿಯ ಧನುರ್ವಿದ್ಯೆಯ ಬಗೆಗೆ ವಿವರಿಸುತ್ತಾ ಸುಗ್ರೀವನು ರಾಮನಿಗೆ ಹೇಳುವ ಮಾತು ಸುಗ್ರೀವ : ರಾಮ, ಅಗೋ ಎದುರಲ್ಲಿ ಕಾಣುತ್ತಿದೆಯಲ್ಲಾ ಅರ್ಧ ‌ವರ್ತುಲಾಕಾರದಲ್ಲಿರುವ ಸಪ್ತ ತಾಲ ವೃಕ್ಷಗಳು.. ಅದರ ಒಂದೊಂದು ರೆಂಬೆಯನ್ನ ವಾಲಿಯು ಒಂದೇ ಬಾಣದಿಂದ ಕಡಿದು ಹಾಕುತ್ತಿದ್ದು ಅವು ಮತ್ತೆ ಚಿಗುರುತ್ತಿತ್ತು ಮತ್ತೆ ಆತ ಅದನ್ನು ಕಡಿಯುತ್ತಿದ್ದನು.. ಇದು ಆತನ ಧನುರ್ ಕೌಶಲ. ರಾಮ : ಕೋದಂಡವನ್ನು ಎತ್ತಿ ಬಾಣ ಪ್ರಯೋಗಿಸಲೋಸುಗ ಪಾದವನ್ನು ಒತ್ತಿದಾಗ ವರ್ತುಲಾಕಾರದಲ್ಲಿದ್ದ ಸಪ್ತ ತಾಲ ವೃಕ್ಷಗಳು ಸರಳ ರೇಖೆಗೆ ಬಂದವು.. ಕಾರಣ ಏನು ಗೊತ್ತ..? ಈ ಸಪ್ತತಾಲ ವೃಕ್ಷ ಬೆಳೆದಿದ್ದ ಭೂಭಾಗದ ಕೆಳಗೆ ರಾಕ್ಷಸನೋರ್ವನಿದ್ದ ಅಹಿದಾನವ ಅಂತ. ಅಹಿರೂಪದಲ್ಲಿದ್ದ ಅವನ ಬಾಲವನ್ನು ನಾನು ಮೆಟ್ಟಿದ್ದು.. ನಾನು ಆ ರೀತಿ ಮಾಡಿದಾಗ ಅವನು ಸಟೆದು ನಿಂತ ಆಗ ಈ ಸಪ್ತ ತಾಲ ವೃಕ್ಷಗಳು ಸರಳರೇಖೆಗೆ ಬಂದವು ಆಗ ನನ್ನ ಬಾಣ ಪ್ರಯೋಗದಿಂದ ಬರಿಯ ರೆಂಬೆಯಲ್ಲ ಸಪ್ತ ತಾಳ ವೃಕ್ಷಗಳೇ ಬುಡ ಸಮೇತ ನಾಶವಾಗುವ ಮೂಲಕ ರಾಕ್ಷಸನ ನಾಶವಾಗಿ ಹೋಯಿತು.. ಈ ಮಾತನ್ನು ಹೇಳಿದ ಬಳಿ ರಾಮ ಪಾತ್ರಧಾರಿಯಾದ ಪವನ್ ಕಿರಣ್ಕೆರೆಯವರು ಬಲು ಸೊಗಸಾದ ಅಂಶವನ್ನು ಹೇಳುತ್ತಾರೆ.. " ಯಾಕೆಂದರೆ ರಾಮನ ಬಾಣ ಪ್ರಯೋಗವಾಗುವುದು ರಾಕ್ಷಸರ ನಾಶಕ್ಕಾಗಿ ಮಾತ್ರವೇ ಹೊರತು ಪ್ರಕೃತಿನಾಶಕ್ಕಲ್ಲ.. " ಎಂತಹ ಸೊಗಸಾದ ವಿವರಣೆ ಅಲ್ವಾ.. #ತಾಳಮದ್ದಳೆ
👍 🙏 2

Comments