
Dr. Dhananjaya Sarji
February 4, 2025 at 09:12 AM
ದೇಶದ ಪ್ರತಿಷ್ಠಿತ ಸುದ್ದಿ ಮಾಧ್ಯಮವಾದ ಇಂಡಿಯಾ ಟುಡೇ ವತಿಯಿಂದ ಇಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ಎನ್ವಿರಾನ್ಮೆಂಟ್ ಕಾನ್ ಕ್ಲೇವ್" ಎಂಬ ವಿಶೇಷ ಪರಿಸರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ ಸಂಭವಿಸುತ್ತಿರುವ ಮಾನವ ಮತ್ತು ವನ್ಯಜೀವಿ ಸಂಘರ್ಷಗಳು, ಅರಣ್ಯ ನಾಶ, ಕಾಡ್ಗಿಚ್ಚು, ಕಾಡು ಪ್ರಾಣಿಗಳಿಂದ ಮಾನವರ ಮೇಲೆ ದಾಳಿ, ಇವುಗಳ ನಿಯಂತ್ರಣಕ್ಕೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವಾರದ ಶ್ರೀ ಈಶ್ವರ್ ಖಂಡ್ರೆ, ಇಂಡಿಯಾ ಟುಡೇ ಗ್ರೂಪ್ ನ ಎಡಿಟೋರಿಯಲ್ ಡೈರೆಕ್ಟರ್ ಶ್ರೀ ರಾಜ್ ಚೆಂಗಪ್ಪ , ಇಂಡಿಯಾ ಟುಡೇಯ ಎಡಿಟರ್ ಜರ್ನಲಿಸ್ಟ್ ಆದ ಶ್ರೀ ನಾಗಾರ್ಜುನ್ ದ್ವಾರಕಾನಾಥ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶ್ರೀ ಮಂತರ್ ಗೌಡ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದರ್ಶನ್ ದ್ರುವನಾರಾಯಣ್ ಸೇರಿದಂತೆ ಹಲವು ಪರಿಸರ ತಜ್ಞರು ಉಪಸ್ಥಿತರಿದ್ದರು.
https://www.facebook.com/share/p/1A6XovDeCh/
🙏
1