
Dr. Dhananjaya Sarji
269 subscribers
About Dr. Dhananjaya Sarji
ಜನಪರ - ಜೀವಪರ MLC for South West Graduates Constituency Karnataka | Vice President BJP Shivamogga | Chairman, Sarji Group of Hospitals |
Similar Channels
Swipe to see more
Posts

ಪ್ರಖರ ರಾಷ್ಟ್ರೀಯವಾದಿ, ಸಶಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಧೀಮಂತ ನಾಯಕರು, ಮಹಾನ್ ಕ್ರಾಂತಿಕಾರರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು ಹಾಗೂ ಮೊದಲ ಸರಸಂಘಚಾಲಕರಾದ ಪರಮಪೂಜ್ಯ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಜೀ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.


“ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಹಾಗೂ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವಗಂಗಾ ಯೋಗ ಕೇಂದ್ರ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಾಯಿತು.

*“ಜಗತ್ತಿಗೆ ಭಾರತ ಕೊಟ್ಟ ಮಹಾವಿದ್ಯೆ ಯೋಗ”* ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಜಿಲ್ಲಾ ಆಯುಷ್ ಇಲಾಖೆ ಶಿವಮೊಗ್ಗ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಜಗತ್ತಿಗೆ ಭಾರತ ಕೊಟ್ಟ ಮಹಾವಿದ್ಯೆ ಯೋಗವನ್ನ ಯೋಗದ ಇತಿಹಾಸವನ್ನು ಮೆಲುಕು ಹಾಕಲಾಯಿತು. ಈ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ ವೈ ರಾಘವೇಂದ್ರ ಅವರು, ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಅವರು, ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ನಟರಾಜ್ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ಅವರು, ಪ್ರಮುಖರಾದ ಶ್ರೀ ರವಿಕುಮಾರ್ ಅವರು ಸೇರಿದಂತೆ ಮತ್ತಿತರ ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. https://www.facebook.com/share/p/1StWYy2Gw2/

https://www.facebook.com/share/p/1CMAqYY5TP/?mibextid=wwXIfr

ಅಭಿನಂದನೆಗಳು ಆರ್.ಸಿ.ಬಿ ಇಂದು ನಡೆದ ಬೆಂಗಳೂರು ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ನಮ್ಮ ಹೆಮ್ಮೆಯ ಆರ್.ಸಿ.ಬಿ ಕ್ರಿಕೆಟ್ ತಂಡ ಪ್ರಚಂಡ ವಿಜಯವನ್ನ ಸಾಧಿಸಿ ಫೈನಲ್ ಪ್ರವೇಶಿಸಿದೆ ಈ ಸಂದರ್ಭದಲ್ಲಿ ಎಲ್ಲಾ ಆಟಗಾರರಿಗೂ ಹಾಗೂ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಅಭಿನಂದನೆಗಳನ್ನ ತಿಳಿಸುತ್ತಾ, ಮುಂದೆ ನಡೆಯುವಂತಹ ಫೈನಲ್ ಪಂದ್ಯವನ್ನ ಗೆದ್ದು ಐಪಿಎಲ್ ನ 18ರ ಸೀಸನ್ನ ಚಾಂಪಿಯನ್ ಕಿರೀಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತೇನೆ.


ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಖ್ಯಾತ ಸಾಹಿತಿ ಶ್ರೀ ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಗಲಿಕೆಯ ಸುದ್ಧಿ ತಿಳಿದು ಅತ್ಯಂತ ದುಃಖವಾಗಿದೆ. 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿ, ಕನ್ನಡಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮನ್ನು ತಪಸ್ವಿಯಂತೆ ಸಮರ್ಪಿಸಿಕೊಂಡಿದ್ದರ ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಗಲಿಕೆಯ ನೋವಿನಲ್ಲಿರುವ ಅವರ ಕುಟುಂಬ ವರ್ಗದವರು ಹಾಗೂ ಅವರ ಸಾಹಿತ್ಯಾಭಿಮಾನಿಗಳಿಗೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಎಚ್ಎಸ್‌ವಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಓಂ ಶಾಂತಿ https://m.facebook.com/story.php?story_fbid=pfbid023BVKmTD3f1ADvLuoSAQ8SLFig1RT5ByxxCGe3bQ6Cz5X32hhdU6SMBbHKLCLd8m4l&id=100086028907535