
Dr. Dhananjaya Sarji
February 13, 2025 at 04:19 PM
ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೆಬಲ್ ಟ್ರಸ್ಟ್ ಮುಂಬಯಿ, ಒನ್ ಗುಡ್ ಸ್ಟೆಪ್ ಬೆಂಗಳೂರು, ರೋಟರಿ ಕ್ಲಬ್ ಮಣಿಪಾಲ ಯಕ್ಷಗಾನ ಕಲಾ ರಂಗ (ರಿ) ಉಡುಪಿ ಇವರ ಸಹಯೋಗದಲ್ಲಿ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಮದ್ಯವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ಮಕ್ಕಳು ಬೆಳೆಯುತ್ತಿದ್ದಾರೆ.. ಜಾಗ್ರತೆ..! ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಲಾಯಿತು.
ಈ ವೇಳೆ ಉಡುಪಿ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ.ಪಿ.ವಿ ಭಂಡಾರಿ, ಶಿಕ್ಷಣ ತಜ್ಞರು ಹಾಗೂ ಚಾಮರಾಜನಗರದ ದೀನಬಂಧು ಮಕ್ಕಳ ಮನೆ ಸಂಸ್ಥಾಪಕರಾದ ಪ್ರೊ. ಜಯದೇವ್ ಜಿ.ಎಸ್, ಬೆಂಗಳೂರು ಭಾರತೀಯ ಮಕ್ಕಳ ವೈದ್ಯರ ಸಂಘದ ಉಪಾಧ್ಯಕ್ಷರಾದ ಡಾ.ಪ್ರೀತಿ ಗಲಗಲಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೆಕಾರ್, ಬೆಂಗಳೂರು ಒನ್ ಗುಡ್ ಸ್ಟೆಪ್ ಸಂಸ್ಥಾಪಕರಾದ ಶ್ರೀಮತಿ ಅಮಿತಾ ಪೈ, ಉಡುಪಿ ರೋಟರಿ ಜಿಲ್ಲಾ ಗವರ್ನರ್ ಆದ ಶ್ರೀ ರೋ. MPHF. C.A. ದೇವಾನಂದ್, ಮಣಿಪಾಲ ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಗಿರಿಜಾ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
https://www.facebook.com/share/p/1LCBUtd54c/
🙏
1