ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
May 14, 2025 at 06:13 AM
14-5-2025 ರ ಹವಾಮಾನ ಮುನ್ಸೂಚನೆ.
*ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಒಂದು ವಾರ ಮುಂಚಿತವಾಗಿ ಮುಂಗಾರು ಆರಂಭ*
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಿಡಿಲು ಮಳೆಯಾಗಿದ್ದು ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ಹಗಲು ಕರಾವಳಿ ತೀರಪ್ರದೇಶಗಳ ಕೆಲವೆಡೆ ತುಂತುರು ಮಳೆ ಸಾಧ್ಯತೆ ಇದೆ. ಸಂಜೆ ಸುಳ್ಯ ಬೆಳ್ತಂಗಡಿ ಕಾರ್ಕಳ ತಾಲ್ಲೂಕುಗಳ ಘಟ್ಟಪ್ರದೇಶಗಳಲ್ಲಿ ಮಳೆ ಮುನ್ಸೂಚನೆ ಇದೆ. ರಾತ್ರಿ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳ ತೀರಪ್ರದೇಶಗಳಲ್ಲಿ ಗುಡುಗು ಮಳೆ ಮುನ್ಸೂಚನೆ ಇದೆ. ಬಂಟ್ವಾಳ ಪುತ್ತೂರು ತಾಲ್ಲೂಕುಗಳ ಅಲ್ಲಲ್ಲಿ ರಾತ್ರಿ ಮಳೆ ಸಾಧ್ಯತೆ ಇದೆ. ಉ.ಕ ದ ಕರಾವಳಿ ತೀರದ ಕೆಲವೆಡೆ ಬೆಳಿಗ್ಗೆ ತುಂತುರು ಮಳೆಯಾಗಿದ್ದು ಶಿರಸಿ ಸಿದ್ದಾಪುರ ಹೊನ್ನಾವರ ತಾಲ್ಲೂಕುಗಳ ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ. ಮೇ 20 ರಿಂದ ಮಳೆ ಜಾಸ್ತಿ ಆಗಲಿದ್ದು ಮೇ 25 ಕ್ಕೆ ಆರಂಭಿಕ ಮುಂಗಾರು ಮೋಡ ಬರುವ ಸಾಧ್ಯತೆ ಇದೆ.
ಕೊಡಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.ಶಿವಮೊಗ್ಗ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.
ದಕ್ಷಿಣ ಒಳನಾಡಿನ ಮೈಸೂರು ಮಂಡ್ಯ ತುಮಕೂರು ಬೆಂಗಳೂರು - ಗ್ರಾಮಾಂತರ ಜಿಲ್ಲೆಗಳಲ್ಲಿ ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮಳೆ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದ್ದು ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಕೊಪ್ಪಳ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆಯ ನಂತರ ಸಿಡಿಲು ಮಳೆ ಮುನ್ಸೂಚನೆ ಇದೆ.
ರಾಜ್ಯದಲ್ಲಿ ಪೂರ್ವಮುಂಗಾರು ಮಳೆ ಇನ್ನೂ 10 ದಿನ ಮುಂದುವರಿಯಲಿದ್ದು ಮೇ 25-27 ರ ಮಧ್ಯ ಮುಂಗಾರು ಆಗಮದ ನಿರೀಕ್ಷೆ ಇದೆ. 16 ವರ್ಷಗಳ ನಂತರ ಈ ಸಲ ಬೇಗನೆ ಮೇ ತಿಂಗಳಿನಲ್ಲಿ ಕೇರಳ, ಕರ್ನಾಟಕಕ್ಕೆ ಆಗಮಿಸಲಿದೆ.
👍
🙏
❤️
😂
36