ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
                                
                            
                            
                    
                                
                                
                                May 16, 2025 at 06:32 AM
                               
                            
                        
                            16-5-2025 ರ ಹವಾಮಾನ ಮುನ್ಸೂಚನೆ.
ಕರಾವಳಿ ಜಿಲ್ಲೆಗಳಲ್ಲಿ ಅರಬ್ಬೀಸಮುದ್ರದ ಮೋಡದಿಂದ ನಿನ್ನೆಯಿಂದ  ಅಲ್ಲಲ್ಲಿ ಸಣ್ಣ ಮಳೆ ಬರಲು ಆರಂಭವಾಗಿದೆ.  ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆ ಮುಂದುವರೆದಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು  ದ.ಕ.   ಜಿಲ್ಲೆಗಳಲ್ಲಿ ಮುಂಗಾರು ರೀತಿಯಲ್ಲಿ ಮೋಡ ಬರಲು ಆರಂಭವಾಗಿದ್ದು ಹಗಲು ಅಲ್ಲಲ್ಲಿ ಸಣ್ಣ ಮಳೆ ಮುಂದುವರೆಯಬಹುದು.  ಸುಳ್ಯ ಕಾರ್ಕಳ ಬೆಳ್ತಂಗಡಿ ತಾಲ್ಲೂಕುಗಳ ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ.  ಉಡುಪಿ ಉ.ಕ ಕರಾವಳಿ ತೀರ ಪ್ರದೇಶಗಳಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಮಧ್ಯಾಹ್ನ ಮಳೆ ಮುನ್ಸೂಚನೆ ಇದೆ.  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಮಳೆ ಆಗಲಿದ್ದು  ಮೇ 18-19 ರ ನಂತರ ಎಲ್ಲೆಡೆ ಮಳೆ ಬರಬಹುದು.  ಮೇ 31 ತನಕ ಈ ಸಲ ವಾಡಿಕೆಗಿಂತ ಜಾಸ್ತಿ  ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಕೊಡಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಶಿವಮೊಗ್ಗ ಹಾಸನ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಬಹುದು.  ಮೇ 18 ರಿಂದ ಮಲೆನಾಡಿನಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಬಹುದು.
ದಕ್ಷಿಣ ಒಳನಾಡಿನ ಚಾಮರಾಜನಗರ ರಾಮನಗರ  ಬೆಂಗಳೂರು - ಗ್ರಾಮಾಂತರ ತುಮಕೂರು ಜಿಲ್ಲೆಗಳಾದ್ಯಂತ ಮಳೆ ಮುನ್ಸೂಚನೆ ಇದೆ.  ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳಲ್ಲಿಯೂ ಸಾಮಾನ್ಯ ಮಳೆ ಮುನ್ಸೂಚನೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಹಾವೇರಿ ಗದಗ ಬಾಗಲಕೋಟೆ ಬಿಜಾಪುರ ಕೊಪ್ಪಳ ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಮಳೆ ಮುನ್ಸೂಚನೆ ಇದೆ.
ಮುಂಗಾರು ಆರಂಭವಾಗಿ ಮುಂದುವರೆಯುತ್ತಿದ್ದಂತೆ ಬಂಗಾಳಕೊಲ್ಲಿಯ ಲೋ ಪ್ರೆಷರ್  ಕಾರಣದಿಂದ  ಮೋಡ ವೇಗವಾಗಿ ಬರುತ್ತಿದ್ದು  ತಮಿಳುನಾಡು ಆಂಧ್ರ ರಾಜ್ಯಗಳಲ್ಲಿಯೂ ಮಳೆಯಾಗಬಹುದು. ಎಪ್ರಿಲ್ ಕೊನೆಯ ವಾರ ಅರಬ್ಬೀಸಮುದ್ರದಲ್ಲಿ ವಾಯುಭಾರಕುಸಿತ ಆಗಲಿದ್ದು  ಮಹಾರಾಷ್ಟ್ರ ಗುಜರಾತ್ ರಾಜ್ಯಕ್ಕೂ ಮುಂಚಿತವಾಗಿ ಮಳೆ ಬರಬಹುದು. ಈ ವಾಯುಭಾರಕುಸಿತಗಳ ಕಾರಣದಿಂದ ಮೇ 20 ರ ನಂತರ  ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.
                        
                    
                    
                    
                    
                    
                                    
                                        
                                            👍
                                        
                                    
                                        
                                            🙏
                                        
                                    
                                        
                                            ❤️
                                        
                                    
                                        
                                            😮
                                        
                                    
                                        
                                            🫂
                                        
                                    
                                        
                                            🫡
                                        
                                    
                                    
                                        31