ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
May 18, 2025 at 06:00 AM
18-5-2025 ರ ಹವಾಮಾನ ಮುನ್ಸೂಚನೆ. ರಾಜ್ಯದ ಒಳನಾಡು ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಗಾಳಿಯ ತಿರುಗುವಿಕೆಯ ಕಾರಣದಿಂದ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲಿ ಹಗಲು ಪಶ್ಚಿಮದ ಮೋಡದಿಂದ ಸಂಜೆ ಪೂರ್ವದ ಮೋಡದಿಂದ ಅಲ್ಲಲ್ಲಿ ಸಣ್ಣ ಮಳೆಯಾಗಿತ್ತು. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇವತ್ತಿನಿಂದ ಮಳೆ ಜಾಸ್ತಿ ಆಗಲು ಆರಂಭವಾಗಬಹುದು. ಉ.ಕ. ದಲ್ಲಿ ಬೆಳಿಗ್ಗೆ ಮೋಡದ ವಾತಾವರಣ ಮುಂದುವರೆದಿದ್ದು ಜಿಲ್ಲೆಯ ಹಲವೆಡೆ ನಿರಂತರ ಸಣ್ಣ ಮಳೆಯಾಗುತ್ತಿದೆ. ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ಪಶ್ಚಿಮದ ಮೋಡದಿಂದ ಹಾಗೂ ಸಂಜೆಯ ನಂತರ ಪೂರ್ವದ ಮೋಡದಿಂದ ಅಲ್ಲಲ್ಲಿ ಮಳೆ ಬರುವ ಸಾಧ್ಯತೆ ಇದೆ. ನಾಳೆ ಮುಂಜಾನೆಯಿಂದ ಕರಾವಳಿ ತೀರಪ್ರದೇಶಗಳಲ್ಲಿ ಉತ್ತಮ ಮಳೆ ಆರಂಭವಾಗುವ ಮುನ್ಸೂಚನೆಗಳಿವೆ. ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಮುನ್ಸೂಚನೆ ಇದೆ ಇವತ್ತಿನಿಂದ ಸಂಜೆ - ರಾತ್ರಿ ಮಳೆಗಾಲದಂತೆ ನಿರಂತರ ತುಂತುರು ಮಳೆ ಆರಂಭವಾಗಬಹುದು.. *ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಂಜೆಯ ನಂತರ ಗುಡುಗು ಮಳೆ ಮುನ್ಸೂಚನೆ* ಚಿಕ್ಕಬಳ್ಳಾಪುರ ತುಮಕೂರು ಚಿತ್ರದುರ್ಗ ಬಳ್ಳಾರಿ ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಆಂಧ್ರ ಗಡಿಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಚಾಮರಾಜನಗರ ಮೈಸೂರು ರಾಮನಗರ ಕೋಲಾರ ಮಂಡ್ಯ ಬೆಂಗಳೂರು - ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಸಂಜೆಯ ನಂತರ ಹೆಚ್ಚಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡಿನಲ್ಲಿ ನಿನ್ನೆಯಂತೆ ಮಳೆ ಮುಂದುವರಿಯಲಿದ್ದು ಬೆಳಗಾವಿ ಧಾರವಾಡ ಹಾವೇರಿ ಬಿಜಾಪುರ ಜಿಲ್ಲೆಗಳಲ್ಲಿ ಸಂಜೆ ಮಳೆ ಮುನ್ಸೂಚನೆ ಇದೆ. ಗದಗ ಕೊಪ್ಪಳ ಬಾಗಲಕೋಟೆ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ರಾತ್ರಿ ಗುಡುಗು ಸಹಿತ ಮಳೆ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯ ಏರ್ ಸರ್ಕ್ಯುಲೇಷನ್ ಕಾರಣದಿಂದ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮೇ 22 ರಿಂದ ಮಳೆ ಕಡಿಮೆ ಆಗಬಹುದು. ಅರಬ್ಬೀಸಮುದ್ರದಲ್ಲಿ ಬೆಳಗಾವಿ ಸಮೀಪ ಮೇ 22 ರಿಂದ ವಾಯುಭಾರಕುಸಿತ ಸಂಭವಿಸಲಿದ್ದು ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಜಾಸ್ತಿ ಆಗಬಹುದು.
👍 🙏 🌧️ 👏 31

Comments