ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
May 21, 2025 at 05:18 AM
21-5-2025 ರ ಹವಾಮಾನ ಮುನ್ಸೂಚನೆ. *ಕೇರಳ ಮತ್ತು ಕರ್ನಾಟಕದಲ್ಲಿ ಮೇ 23 ಅಥವಾ 24 ಕ್ಕೆ ಒಂದು ವಾರ ಬೇಗ ಮುಂಗಾರು ಆರಂಭವಾಗುವ ಸೂಚನೆಯನ್ನು IMD ಕೊಟ್ಟಿದೆ* . ವಾಯುಭಾರಕುಸಿತಗಳ ಪ್ರಭಾವದಿಂದ ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯಾಗಿದೆ. ಕರಾವಳಿ ತೀರಪ್ರದೇಶಗಳಲ್ಲಿ ನಿನ್ನೆ ಭಾರಿ ಮಳೆಯಾಗಿದೆ. ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಿನ್ನೆಯೂ ಮಳೆ ಮುಂದುವರೆದಿತ್ತು. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ದ.ಕ. ದಲ್ಲಿ ಭಾರಿ ಮಳೆಯ ತೀವ್ರತೆ ಕಡಿಮೆ ಆದರೂ ಹಗಲು ನಿರಂತರ ಸಾಮಾನ್ಯ ಮಳೆಗಳು ಮುಂದುವರೆಯಬಹುದು. ಬಿಸಿಲು ಬರುವ ಸಾಧ್ಯತೆ ಕಡಿಮೆ. ಉಡುಪಿ ಜಿಲ್ಲೆಗೆ ರೆಡ್ ಅಲಾರ್ಟ್ ಕೊಡಲಾಗಿದ್ದು ಉಡುಪಿ, ಉ.ಕ. ಜಿಲ್ಲೆಗಳಲ್ಲಿ ಇವತ್ತು ಆಗಾಗ ಉತ್ತಮ ಮಳೆ ಮುಂದುವರೆಯಲಿದೆ.. ಮೇ 23 ರಿಂದ ಮುಂಗಾರು ಆರಂಭ ಆಗುವ ಮುನ್ಸೂಚನೆ ಇರುವ ಕಾರಣ ಮಳೆ ಮುಂದುವರೆಯಲಿದ್ದು ಮೇ 31 ತನಕ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಬಿಸಿಲು ಬರುವ ಸಾಧ್ಯತೆ ಕಡಿಮೆ ಇದೆ. ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದ್ದು ನಿರಂತರ ತುಂತುರು ಅಥವಾ ಸಣ್ಣ ಮಳೆ ಬರಬಹುದು. ಮುಂದಿನ 3 ದಿನ ಮಳೆ ಸ್ವಲ್ಪ ಕಡಿಮೆ ಆಗಲಿದ್ದು ಮೇ 24 ರಿಂದ ಮಳೆ ಅಧಿಕವಾಗಬಹುದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ 4-5 ದಿನಗಳಿಂದ ಉತ್ತಮ ಮಳೆಯಾಗಿದ್ದು ಇವತ್ತಿನಿಂದ ಮಳೆ ಸ್ವಲ್ಪ ಕಡಿಮೆ ಆಗಬಹುದು. ಬಳ್ಳಾರಿ ದಾವಣಗೆರೆ ಚಿತ್ರದುರ್ಗ ತುಮಕೂರು ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು - ಗ್ರಾಮಾಂತರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಮತ್ತು ರಾಮನಗರ ಮಂಡ್ಯ ಮೈಸೂರು ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಅಥವಾ ಸಣ್ಣ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಬಿಜಾಪುರ ಬಾಗಲಕೋಟೆ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇರಲಿದ್ದು ಹಾವೇರಿ ಕೊಪ್ಪಳ ರಾಯಚೂರು ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯ ಏರ್ ಸರ್ಕ್ಯುಲೇಷನ್ ಶಿಥಿಲ ಆಗುತ್ತಿದ್ದು ಅರಬ್ಬೀಸಮುದ್ರದ ಲೋ ಪ್ರೆಷರ್ ನಾಡಿದ್ದು ಮಹಾರಾಷ್ಟ್ರ ಕರಾವಳಿ ತೀರದಲ್ಲಿ ವಾಯುಭಾರಕುಸಿತ ಅಥವಾ ಚಂಡಮಾರುತ ಆಗಿ ಪಶ್ಚಿಮ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮುಂಗಾರು ಕೇರಳ ಕರ್ನಾಟಕದಲ್ಲಿ ಆರಂಭವಾಗಬಹುದು.
👍 🙏 😍 ❤️ 43

Comments