ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
May 22, 2025 at 05:57 AM
22-5-2025 ರ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಮಳೆ ಪ್ರಮಾಣ ಕಡಿಮೆ ಆಗಿತ್ತು. ಎಲ್ಲಾ ಜಿಲ್ಲೆಗಳಲ್ಲಿ ಹಗಲು ಸಾಮಾನ್ಯ ಮಳೆಯಾಗಿದೆ. ಮಲೆನಾಡು ಒಳನಾಡು ಜಿಲ್ಲೆಗಳಲ್ಲಿಯೂ ನಿನ್ನೆಯಿಂದ ಮಳೆ ಸ್ವಲ್ಪ ಕಡಿಮೆ ಆಗಿದೆ. *ಕೇರಳ ಕರ್ನಾಟಕ ಕ್ಕೆ ನಾಳೆ ಮುಂಗಾರು?* ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮುಂಗಾರು ಆರಂಭವಾಗಲಿದ್ದು ಮುಂದಿನ 4-5 ದಿನ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. 2009 ರ ನಂತರ ವಾಯುಭಾರಕುಸಿತಗಳ ಪ್ರಭಾವದಿಂದ ಈ ಸಲ ಮೇ ತಿಂಗಳಿನಲ್ಲಿಯೇ ಮುಂಗಾರು ಆರಂಭವಾಗಲಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳ ಬಹುತೇಕ ಎಲ್ಲೆಡೆ ಗುಡುಗು ಸಹಿತ ಸಾಮಾನ್ಯ ಮಳೆ ಇವತ್ತು ಮುಂದುವರೆಯಲಿದೆ. ಹಗಲು ಮಳೆಯ ಮುನ್ಸೂಚನೆ ಇದೆ. ಉ.ಕ ಜಿಲ್ಲೆಯಲ್ಲಿಯೂ ಅಧಿಕ ಮಳೆಯ ಮುನ್ಸೂಚನೆ ಇದೆ.ಕರಾವಳಿ ತೀರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದ್ದು ಕರಾವಳಿಯಿಂದ ಪೂರ್ವಕ್ಕೆ ಹೋದಂತೆ ಮಳೆ ಪ್ರಮಾಣ ಕಡಿಮೆ ಆಗಬಹುದು.. ನಾಳೆಯಿಂದ ಕರಾವಳಿಯಲ್ಲಿ ನಿರಂತರ ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ನಾಳೆಯಿಂದ ಮಳೆ ಜಾಸ್ತಿಯಾಗಲಿದ್ದು ಮೇ 24 ರಿಂದ ಮಳೆಗಾಲದಂತೆ ನಿರಂತರ ಮಳೆ ಆರಂಭವಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದ್ದು ಭಾಗಷಃ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗಬಹುದು. ಮೇ 24-26 ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಬಾಗಲಕೋಟೆ ಬಿಜಾಪುರ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಮಹಾರಾಷ್ಟ್ರ ಗಡಿಪ್ರದೇಶಗಳಾದ್ಯoತ ಮಳೆಯಾಗಬಹುದು.. ಮಹಾರಾಷ್ಟ್ರದ ರತ್ನಗಿರಿ ಸಮೀಪ ಇರುವ ಲೋ ಪ್ರೆಷರ್ ಇವತ್ತು ವಾಯುಭಾರಕುಸಿತವಾಗುವ ಸಾಧ್ಯತೆಗಳಿದ್ದು ಇದು ಮೇ 30 ತನಕ ಅರಬ್ಬೀಸಮುದ್ರದಲ್ಲಿಯೇ ಮುಂದುವರೆಯಲಿದ್ದು ಇದರಿಂದಾಗಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಮೇ 30 ತನಕ ಭಾರಿ ಮಳೆಯೊಂದಿಗೆ ಮುಂಗಾರು ಆರಂಭವಾಗಲಿದೆ.
👍 🙏 44

Comments