ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 2, 2025 at 07:32 AM
2-6-2025 ಸೋಮವಾರದ ಹವಾಮಾನ ಮುನ್ಸೂಚನೆ. ಕರಾವಳಿ ಎಲ್ಲಾ ಜಿಲ್ಲೆಗಳಲ್ಲಿ ನಿನ್ನೆ ಮೋಡ- ಬಿಸಿಲಿನ ವಾತಾವರಣ ಇತ್ತು. ಹೆಚ್ಚಿನ ಪ್ರದೇಶಗಳಲ್ಲಿ ಒಂದೆರಡು ಸಾಮಾನ್ಯ ಮಳೆಯಾಗಿದೆ. ಮಲೆನಾಡಿನಲ್ಲಿಯೂ ಸಾಮಾನ್ಯ ಮಳೆಯಾಗಿದ್ದು ಒಳನಾಡು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ಹಗಲು ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ.ಸಂಜೆಯ ನಂತರ ಮುಂಜಾನೆ ತನಕ ಆಗಾಗ ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರಪ್ರದೇಶದ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ನಾಳೆಯೂ ಮಳೆ ಮುಂದುವರೆಯಲಿದ್ದು ಜೂನ್ 4 ರಾತ್ರಿಯಿಂದ ಮಳೆ ಕಡಿಮೆ ಆಗಬಹುದು. ಜೂನ್ 11 ರಿಂದ ಮತ್ತೆ ಸಾಧಾರಣ ಮಳೆ ಆರಂಭ ಆಗಬಹುದು. ಮಲೆನಾಡಿನಲ್ಲಿ ಮುಂದಿನ 3 ದಿನ ಸಾಮಾನ್ಯ ಮಳೆ ಮುಂದುವರೆಯಲಿದ್ದು ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ.ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಅಧಿಕ ಮಳೆಯಾಗಬಹುದು. ದಕ್ಷಿಣ ಒಳನಾಡಿನಲ್ಲಿ ಇವತ್ತು ಮೋಡದ ವಾತಾವರಣ ಇರಲಿದ್ದು ಸಣ್ಣ ಪ್ರಮಾಣದಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಚಾಮರಾಜನಗರ ಮೈಸೂರು ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಜೂನ್ 4 ರ ನಂತರ ಮಳೆ ಕಡಿಮೆ ಆಗಿ ಒಣಹವೆ ಮುಂದುವರೆಯುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಕೆಲವೆಡೆ 1-5mm ತುಂತುರು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆ ಆಗಬಹುದು. ಜೂನ್ ಮೊದಲ 10 ದಿನ ರಾಜ್ಯದಲ್ಲಿ ಮುಂಗಾರು ದುರ್ಬಲ ಆಗಲಿದ್ದು ಜೂನ್ 11 ರ ನಂತರ ಮತ್ತೆ ಒಂದು ವಾರ ಸಾಧಾರಣ ಮಳೆ ಆರಂಭ ಆಗುವ ಮುನ್ಸೂಚನೆ ಇದೆ.ಮಲೆನಾಡು ಒಳನಾಡು ಜಿಲ್ಲೆಗಳಲ್ಲಿ ಜೂನ್ ತಿಂಗಳು ಮುಂಗಾರು ದುರ್ಬಲ ಆಗುವ ಸಾಧ್ಯತೆಗಳಿವೆ
👍 🙏 😢 ❤️ 41

Comments