ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 3, 2025 at 07:13 AM
3-6-2025 ಮಂಗಳವಾರದ ಹವಾಮಾನ ಮುನ್ಸೂಚನೆ.
ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿ ಮಳೆಯಾಗಿದ್ದು ತೀರಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಮತ್ತು ಒಳನಾಡಿನ ಅಲ್ಲಲ್ಲಿ ಸಾಮಾನ್ಯ ಮಳೆಯಾಗಿತ್ತು.
*ಕರಾವಳಿ ಜಿಲ್ಲೆಗಳಲ್ಲಿ ಈ ದಿನ ಉತ್ತಮ ಮಳೆ ಸಾಧ್ಯತೆ*
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಬೆಳಿಗ್ಗೆ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ಹಗಲು ಅಲ್ಲಲ್ಲಿ ಮಳೆಯಾಗಬಹುದು. ಸಂಜೆ - ರಾತ್ರಿ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಕಾಸರಗೋಡು ದ.ಕ. ಜಿಲ್ಲೆಯಲ್ಲಿ ಹಾಗೂ ಉಡುಪಿ ಉ.ಕ. ಕರಾವಳಿ ತೀರಪ್ರದೇಶಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು. ನಾಳೆಯೂ ಸಾಮಾನ್ಯ ಮಳೆ ಮುನ್ಸೂಚನೆ ಇದೆ ಜೂನ್ 5 ರಿಂದ 10 ತನಕ ಮಳೆ ಕಡಿಮೆ ಆಗಲಿದ್ದು 11 ರಿಂದ ಮತ್ತೆ ಮಳೆ ಮುಂದುವರೆಯಬಹುದು.
*ಮಲೆನಾಡು ಸಾಮಾನ್ಯ ಮಳೆ ಮುನ್ಸೂಚನೆ.*
ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಕರಾವಳಿಗೆ ಹೊಂದಿಕೊಂಡಿರುವ ಘಟ್ಟ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ನಾಳೆಯೂ ಮಳೆ ಸಾಧ್ಯತೆ ಇರಲಿದ್ದು ಜೂನ್ 5 ರಿಂದ 9 ತನಕ ಮಳೆ ಕಡಿಮೆ ಆಗಬಹುದು.
*ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ - ಅಲ್ಲಲ್ಲಿ ಸಣ್ಣ ಮಳೆಯ ಮುನ್ಸೂಚನೆ ಇದೆ.*
ದಾವಣಗೆರೆ ಚಿತ್ರದುರ್ಗ ಬಳ್ಳಾರಿ ತುಮಕೂರು ಬೆಂಗಳೂರು - ಗ್ರಾಮಾಂತರ ಮಂಡ್ಯ ಮೈಸೂರು ಜಿಲ್ಲೆಗಳ ಕೆಲವೆಡೆ ಸಣ್ಣ ಮಳೆ ಸಾಧ್ಯತೆ ಇದೆ. ನಾಳೆ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ನಾಡಿದ್ದಿನಿಂದ ಮಳೆ ಕಡಿಮೆ ಆಗಬಹುದು.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಕೊಪ್ಪಳ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಬಹುದು. ಮುಂದಿನ ವಾರ ಮತ್ತೆ ಮಳೆ ಆರಂಭ ಆಗುವ ಮುನ್ಸೂಚನೆ ಇದೆ.
*ರಾಜ್ಯದಲ್ಲಿ ಈ ವಾರ ಸಾಮಾನ್ಯ ಮುಂಗಾರು ಇರಲಿದ್ದು ಜೂನ್ 11 ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಸ್ವಲ್ಪ ಪ್ರಬಲ ಆಗುವ ಸಾಧ್ಯತೆಗಳಿವೆ*
👍
🙏
❤️
28