ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 4, 2025 at 05:59 AM
4-6-2025 ಬುಧವಾರದ ಹವಾಮಾನ ಮುನ್ಸೂಚನೆ ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಒಂದೆರಡು ಸಾಧಾರಣ ಮಳೆ ಬಂದಿತ್ತು. ಕಾಸರಗೋಡು - ಸುಳ್ಯ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮಲೆನಾಡಿನ ಅಲ್ಲಲ್ಲಿ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಬಿಸಿಲಿನ ವಾತಾವರಣ ಇರಲಿದ್ದು ರಾತ್ರಿಯ ನಂತರ ಮಳೆ ಕಡಿಮೆ ಆಗಲು ಆರಂಭವಾಗಬಹುದು. ಕಾಸರಗೋಡು ದ.ಕ ಜಿಲ್ಲೆಯಲ್ಲಿ ಸಂಜೆ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ ಒಂದು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 5-6 ದಿನ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ತೋಟಗಳಿಗೆ ಔಷಧಿ ಸಿಂಪಡನೆಗೆ ಅವಕಾಶ ಸಿಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದ್ದು ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹಾಗೂ ಆಗುಂಬೆ ಸುತ್ತಮುತ್ತ ಮಳೆ ಮುನ್ಸೂಚನೆ ಇದೆ ಹಾಸನ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದ್ದು ಸಂಜೆ ಕೆಲವೆಡೆ ತುಂತುರು ಮಳೆಯ ಸಾಧ್ಯತೆ ಇದೆ. ಸದ್ಯ ಮಲೆನಾಡಿನಲ್ಲಿ ಮುಂಗಾರು ದುರ್ಬಲ ಆಗಬಹುದು. ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಮುಂದುವರೆಯಬಹುದು.ಮೈಸೂರು ಚಾಮರಾಜನಗರ ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ಬಳ್ಳಾರಿ ಜಿಲ್ಲೆಗಳ ಹಲವೆಡೆ 1-5mm ತುಂತುರು ಮಳೆ ಮುನ್ಸೂಚನೆ ಇದೆ. ಸದ್ಯಕ್ಕೆ ಮುಂಗಾರು ಮಳೆ ಕಡಿಮೆ ಆಗಬಹುದು. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಹಾವೇರಿ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಎಲ್ಲಾ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆ ಮುನ್ಸೂಚನೆ ಇದ್ದರೂ ಸದ್ಯ ದುರ್ಬಲ ಮುಂಗಾರು ಮುಂದುವರೆಯಲಿದೆ. ರಾಜ್ಯದಲ್ಲಿ ಒಂದು ವಾರ ಮುಂಗಾರು ದುರ್ಬಲ ಆಗಲಿದ್ದು ಸಣ್ಣ ಮೋಡಗಳಲ್ಲಿ ಅಲ್ಲಲ್ಲಿ ಒಂದೊಂದು ಗುಡುಗು ಮಳೆ ಮುಂದುವರೆಯಬಹುದು. ಆಣೆಕಟ್ಟುಗಳ ಒಳಹರಿವು ಹೆಚ್ಚಳವಾಗುವ ಮಳೆ ಈ ವಾರ ಇಲ್ಲ. ಜೂನ್ 12 ರಿಂದ ಒಂದು ವಾರ ರಾಜ್ಯದಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ.
👍 🙏 ❤️ 👏 👌 42

Comments