ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 6, 2025 at 07:41 AM
6-6-2925 ಶುಕ್ರವಾರದ ಹವಾಮಾನ ಮುನ್ಸೂಚನೆ. ಕರಾವಳಿ ಸಹಿತ ಕರ್ನಾಟಕ ರಾಜ್ಯದಲ್ಲಿ ನಿನ್ನೆ ಬಹುತೇಕ ಮಳೆ ಕಡಿಮೆ ಆಗಿ ಬಿಸಿಲಿನ ವಾತಾವರಣ ಇತ್ತು. ಉತ್ತರ ಒಳನಾಡಿನ ಕೆಲವೆಡೆ ಸಂಜೆಯ ನಂತರ ಸಾಧಾರಣ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ತುಂತುರು ಮಳೆಯಾಗಬಹುದು. ಜೂನ್ 10 ರ ನಂತರ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಆರಂಭವಾಗಲಿದ್ದು 16 ತನಕ ಮಳೆ ಮುನ್ಸೂಚನೆ ಇದೆ. ಮಲೆನಾಡು ಜಿಲ್ಲೆಗಳಲ್ಲಿಯೂ ಬಿಸಿಲಿನ ವಾತಾವರಣ ಇರಲಿದ್ದು ನಾಳೆಯಿಂದ ಸಂಜೆ ಕೆಲವೆಡೆ ಮಳೆ ಸಾಧ್ಯತೆ ಇದೆ. ಜೂನ್ 11 ರಿಂದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಆರಂಭವಾಗಬಹುದು. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 2 ದಿನ ಒಣಹವೆ ಮುಂದುವರೆಯುವ ಮುನ್ಸೂಚನೆಗಳಿದ್ದು ಜೂನ್ 8 ರಿಂದ ಅಲ್ಲಲ್ಲಿ ಮಳೆ ಆರಂಭವಾಗಬಹುದು. ಜೂನ್ 11 ರಿಂದ 16 ತನಕ ದ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಅಲ್ಲಲ್ಲಿ ಇವತ್ತು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಗದಗ ಬಿಜಾಪುರ ಕಲ್ಬುರ್ಗಿ ಬೀದರ್ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ - ರಾತ್ರಿ ತುಂತುರು ಮಳೆಯಾಗಬಹುದು. ರಾಜ್ಯದಲ್ಲಿ ಮುಂಗಾರು ದುರ್ಬಲ ಆಗಿದ್ದು ಮುಂದಿನ ವಾರ ಇನ್ನೊಂದು ಹಂತದ ಮಳೆಯಾಗಬಹುದು.. ಜೂನ್ 11 ರ ನಂತರ ಸ್ವಲ್ಪ ಪ್ರಬಲ ಆಗಲಿದ್ದು ಜೂನ್ 13-14-15 ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 16 ರ ನಂತರ ಬಂಗಾಳಕೊಲ್ಲಿಯ ಉತ್ತರದಲ್ಲಿ ವಾಯುಭಾರಕುಸಿತ ಆಗುವ ಸಾಧ್ಯತೆಗಳಿದ್ದು ಇದು ಉತ್ತರಕ್ಕೆ ಹೋದಂತೆ ಮತ್ತೆ ಮಳೆ ಕಡಿಮೆ ಆಗಬಹುದು.
👍 🙏 😢 30

Comments