ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 7, 2025 at 07:31 AM
7-6-2025 ಶನಿವಾರದ ಹವಾಮಾನ ಮುನ್ಸೂಚನೆ.
ಕರಾವಳಿ ಜಿಲ್ಲೆಗಳ ಸಹಿತ ರಾಜ್ಯದಲ್ಲಿ ನಿನ್ನೆ ಒಣಹವೆ ಮುಂದುವರೆದಿತ್ತು. ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಹಗಲು ಸಣ್ಣ ಪ್ರಮಾಣದಲ್ಲಿ ಮಳೆ ಮೋಡ ಬರಲು ಆರಂಭವಾಗಿದೆ. ಉ.ಕ. ಉಡುಪಿ ಜಿಲ್ಲೆಗಳ ಕೆಲವೆಡೆ ಬೆಳಿಗ್ಗೆ ತುಂತುರು ಮಳೆಯಾಗಿದೆ. *ಉ.ಕ. ಉಡುಪಿ ದ.ಕ ಕಾಸರಗೋಡು ಜಿಲ್ಲೆಗಳ ಕೆಲವೆಡೆ ಹಗಲು ತುಂತುರು ಮಳೆಯಾಗುವ ಸಾಧ್ಯತೆ ಇದೆ* . ಇದೇ ವಾತಾವರಣ ಮುಂದಿನ 3 ದಿನ ಮುಂದುವರೆಯಬಹುದು. ಜೂನ್ 10ರಿಂದ ಮಳೆ ಜಾಸ್ತಿ ಆಗಲಿದ್ದು ಕರಾವಳಿಯಾದ್ಯoತ 11ರಿಂದ 15 ತನಕ ಉತ್ತಮ ಮಳೆಯ ಮುನ್ಸೂಚನೆ ಇದೆ.
ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಇವತ್ತಿನಿಂದ ಮೋಡ ಬರಲು ಆರಂಭವಾಗಬಹುದು. ನಾಳೆಯಿಂದ ಅಲ್ಲಲ್ಲಿ ಸಾಮಾನ್ಯ ಮಳೆ ಆರಂಭವಾಗಲಿದ್ದು ಜೂನ್ 11 ರಿಂದ ಉತ್ತಮ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನಲ್ಲಿ ಇವತ್ತು ಒಣಹವೆ ಮುಂದುವರೆಯುವ ಸಾಧ್ಯತೆಗಳಿವೆ ಮೈಸೂರು ಚಾಮರಾಜನಗರ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ಕೆಲವೆಡೆ ತುಂತುರು ಮಳೆಯ ಸಾಧ್ಯತೆ ಇದೆ. ಜೂನ್ 9 ರಿಂದ ಮಳೆ ಆರಂಭವಾಗಬಹುದು.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆ ಮುಂದುವರೆಯಲಿದೆ. ನಾಳೆಯಿಂದ ಆಂಧ್ರ ಗಡಿಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗುವ ಮುನ್ಸೂಚನೆ ಇದೆ.
*ಅರಬ್ಬೀಸಮುದ್ರದಲ್ಲಿರುವ ದುರ್ಬಲ ಮೆಲ್ಮೈ ಸುಳಿಗಾಳಿ ಕಾರಣದಿಂದ ಮೋಡ ಬರಲು ಪ್ರಾರಂಭವಾಗಿದ್ದು ಮುಂದಿನ 2-3 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿಯೂ ಗಾಳಿಯ ತಿರುಗುವಿಕೆ ಆರಂಭವಾಗುವ ಸಾಧ್ಯತೆ ಇರುವ ಕಾರಣ ಮುಂಗಾರು ಒಂದು ವಾರ ಚುರುಕಾಗಬಹುದು. ಜೂನ್ 10-17 ಕರ್ನಾಟಕದಾದ್ಯಂತ ಮಳೆ ಮುನ್ಸೂಚನೆ ಇದೆ.*
👍
🙏
😮
❤️
29