ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 8, 2025 at 07:05 AM
8-6-2025 ಆದಿತ್ಯವಾರದ ಹವಾಮಾನ ಮುನ್ಸೂಚನೆ. *ಕರಾವಳಿ- ಅಲ್ಲಲ್ಲಿ ಮಳೆ. ಒಳನಾಡು ಗುಡುಗು ಮಳೆ ಮುನ್ಸೂಚನೆ* ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಸಾಮಾನ್ಯ ಮಳೆಯಾಗಿದೆ. ಉ. ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯಾಗಿತ್ತು. ಇವತ್ತಿನ ಮುನ್ಸೂಚನೆ ಪ್ರಕಾರ ಬೆಳಿಗ್ಗೆ ಬಿಸಿಲಿನ ವಾತಾವರಣ ಇರಲಿದ್ದು ಮಧ್ಯಾಹ್ನ ನಂತರ- ರಾತ್ರಿ ಉ.ಕ ಉಡುಪಿ ದ.ಕ ಕಾಸರಗೋಡು ಜಿಲ್ಲೆಗಳ ಅಲ್ಲಲ್ಲಿ ತುಂತುರು - ಸಾಮಾನ್ಯ ಮಳೆಯಾಗಬಹುದು. ಕರಾವಳಿ ತೀರ ಪ್ರದೇಶದ ತಾಲ್ಲೂಕುಗಳಲ್ಲಿ ಮಳೆ ಯಾಗುವ ಸಾಧ್ಯತೆಗಳಿವೆ. ಜೂನ್ 11 ತನಕ ಇದೇ ಹವೆ ಮುಂದುವರೆಯಲಿದೆ. *ಅರಬ್ಬೀಸಮುದ್ರದಿಂದ ಬೀಸುವ ಗಾಳಿಯು ಮುಂಗಾರಿನ ಗಾಳಿಗಿಂತ ವಿರುದ್ಧ ದಿಕ್ಕಿನಲ್ಲಿ ಅಂದರೆ ವಾಯುವ್ಯದಿಂದ ಅಗ್ನೇಯದ ಕಡೆಗೆ ಬೀಸುತ್ತಿದೆ* .ಗಾಳಿಯ ದಿಕ್ಕು ಸರಿ ಆಗದೇ ಮಳೆ ಆರಂಭ ಆಗುವ ಸಾಧ್ಯತೆ ಕಡಿಮೆ. ಜೂನ್ 12 ರಿಂದ ಕರಾವಳಿಯ ಎಲ್ಲಾ ಪ್ರದೇಶಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇರುವ ಕಾರಣ ಒಂದು ವಾರ ಮಳೆ ಮುಂದುವರೆಯಬಹುದು. ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಮಳೆ ಮುನ್ಸೂಚನೆ ಇದೆ. ಹಾಸನ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಲಿದ್ದು ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ನಾಳೆಯಿಂದ ಸಾಮಾನ್ಯ ಮಳೆ ಮುಂದುವರೆಯಲಿದ್ದು ಜೂನ್ 12 ರಿಂದ ಉತ್ತಮ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು - ಗ್ರಾಮಾಂತರ ತುಮಕೂರು ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ ಚಿತ್ರದುರ್ಗ ರಾಮನಗರ ಮಂಡ್ಯ ಮೈಸೂರು ಚಾಮರಾಜನಗರ ದಾವಣಗೆರೆ ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯ ಸಾಧ್ಯತೆ ಇದೆ. ಜೂನ್ 12 ರಿಂದ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಬಹುದು. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಬಾಗಲಕೋಟೆ ಬಿಜಾಪುರ ಕೊಪ್ಪಳ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮಳೆ ಮುನ್ಸೂಚನೆ ಇದೆ. ನಾಳೆ ಉತ್ತಮ ಮಳೆಯ ಮುನ್ಸೂಚನೆ ಇರಲಿದ್ದು ಜೂನ್ 12-15 ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಅರಬ್ಬೀಸಮುದ್ರದ ಮೇಲ್ಮೈ ಸುಳಿಗಾಳಿ ಕಾರಣದಿಂದ ವಾಯುವ್ಯ ದಿಂದ ಮೋಡ ಬರುತ್ತಿದ್ದು ಮುಂದಿನ 3-4 ದಿನಗಳಲ್ಲಿ ಮುಂಗಾರು ಚುರುಕಾಗಲಿದ್ದು ಜೂನ್ 12 ರಿಂದ 4 ದಿನ ಕರ್ನಾಟಕದಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ.
👍 🙏 28

Comments