Priyank Kharge 🇮🇳

17.4K subscribers

Verified Channel
Priyank Kharge 🇮🇳
May 22, 2025 at 12:32 PM
ಜನ ಸಾಮಾನ್ಯರ ಬದುಕಿನ ಸುಧಾರಣೆಯೇ ಪ್ರಗತಿಯ ಮೂಲ ಆಶಯ. ಜನರ ಬದುಕಿನ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಪರಿಹಾರ ಒದಗಿಸುವುದೇ ಉತ್ತಮ ಆಡಳಿತದ ಲಕ್ಷಣ. ಗ್ರಾಮೀಣಾಭಿವೃದ್ಧಿ ಇಲಾಖೆಯ “ಕೂಸಿನ ಮನೆ“ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳಾ ಕಾರ್ಮಿಕರಿಗೆ ದುಡಿಮೆಯಲ್ಲಿ ನಿರಾತಂಕವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವಲ್ಲಿ ನೆರವಾಗಿವೆ. ಬಡಜನರ ಮಕ್ಕಳಿಗೆ ಪೌಷ್ಟಿಕಾಂಶ ಯುಕ್ತ ಆಹಾರ ಹಾಗೂ ವ್ಯಕ್ತಿತ್ವ ವಿಕಸನದ ವಾತಾವರಣ ಒದಗಿಸಿರುವ ಕೂಸಿನ ಮನೆ ನಮ್ಮ ಸರ್ಕಾರದ ಯಶಸ್ವಿ ಯೋಜನೆಗಳಲ್ಲೊಂದು. ರಾಜ್ಯದಲ್ಲಿ 3,888 ಕೂಸಿನ ಮನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಾಯಕವಾಗಿ ನಿಂತಿವೆ. #ಪ್ರಗತಿಯತ್ತ_ಕರ್ನಾಟಕ #2yearsofguaranteesarkara
Image from Priyank Kharge 🇮🇳: ಜನ ಸಾಮಾನ್ಯರ ಬದುಕಿನ ಸುಧಾರಣೆಯೇ ಪ್ರಗತಿಯ ಮೂಲ ಆಶಯ. ಜನರ ಬದುಕಿನ ಸಂಕೀರ್ಣತೆಯನ್ನ...
🙏 👍 ❤️ 😢 19

Comments