
ಉದ್ಯೋಗ ಮಾಹಿತಿ
June 6, 2025 at 03:39 PM
ರೈತವಾರಿ ಪದ್ಧತಿ..
✍ ಕ್ರಿಸ್ತಶಕ 1792 ರಲ್ಲಿ ಅಲೆಗ್ಸಾಂಡರ್ ರೀಡ್ ಅವರು " ಬಾರಮಹಲ್ " ಎಂಬ ಪ್ರಾಂತ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೈತವಾರಿ ಪದ್ಧತಿಯನ್ನು ಒಂದು ಪ್ರಯೋಗವಾಗಿ ಜಾರಿಗೊಳಿಸಿದರು.
✍ ಈ ಪದ್ಧತಿಯನ್ನು 1801 ರ ನಂತರ ಥಾಮಸ್ ಮನ್ರೋ ಅವರು ಮದ್ರಾಸ್ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದರು.
✍ ಈ ಕಾಲಘಟ್ಟದಲ್ಲಿಯೇ ಈ ಪ್ರಾಂತ್ಯಗಳ ಬಹುತೇಕ ಭಾಗಗಳು ಬ್ರಿಟಿಷ್ ಕಂಪನಿಯ ಆಡಳಿತಕ್ಕೆ ಒಳಪಟ್ಟಿದ್ದು ಮುಖ್ಯ ಕಾರಣವಾಯಿತು.
✍ ಈ ಪದ್ಧತಿಯ ಪ್ರಕಾರ ಸರ್ಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು.
✍ ಭೂಮಿ ಉಳುಮೆ ಮಾಡುತ್ತಿದ್ದವರನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯ ಮಾಡಿತು.
✍ ಆ ರೈತನೆ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ 50% ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.
✍ ಹಾಗೂ ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು.
ಮಾಹಿತಿ ಸಂಗ್ರಹ - ಹತ್ತನೇ ತರಗತಿ ಸಮಾಜ ವಿಜ್ಞಾನ ( ಕರ್ನಾಟಕ ಸರ್ಕಾರ ) ಪುಸ್ತಕ ..

❤️
2