*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 15, 2025 at 04:40 AM
..ಜನ್ಮದಾತ.. ನನಗೆ ಜನ್ಮ ನೀಡಿದ ಜೀವದಾತ ತಂದೆ ನೀನೆ ನನ್ನ ಪ್ರತ್ಯಕ್ಷ ದೇವರೆಂದೆ | ಬದುಕಿನುದ್ದಕ್ಕು ನನಗಾಗಿ ಜೀವ ಸವೆಸಿದೆ ಆ ಹಾದಿಯ ಘನತೆ ನನ್ನ ಕಣ್ಣಮುಂದಿದೆ II ಬಾನಲ್ಲಿ ಹಕ್ಕಿಯಂತೆ ಹಾರಾಡಿಸಿದೆ ನೀರಲ್ಲಿ ಮೀನಿನಂತೆ ಈಜು ಕಲಿಸಿದೆ| ಪ್ರಕೃತಿ ಜೊತೆ ಕೋಗಿಲೆ ಗಾನ ಕೇಳಿಸಿದೆ ನಮ್ಮ ಹಳ್ಳಿ ಜಾತ್ರೆಲಿ ಊರ ತೇರನ್ನೆಳೆಸಿದೆ II ಬಂಧು ಬಳಗದವರ ಜೊತೆ ಬೆಳೆಸಿದೆ ಗುರು ಹಿರಿಯರಿಂದ ವಿದ್ಯೆ ವಿನಯ ಕಲಿಸಿದೆ I ಮಠ ಮಂದಿರ ಗುಡಿ ಗೋಪುರ ತೋರಿಸಿದೆ ಸರ್ವ ಸಮಾನತೆಯ ಸಂಸ್ಕಾರ ಕಲಿಸಿದೆ II ಹಳ್ಳ ನದಿ ತೊರೆಗಳ ತೋರಿಸಿದೆ ನಮ್ಮ ಹಳ್ಳಿಗೆ ಕೆರೆಕಟ್ಟೆ ಕಟ್ಟಿಸಿದೆ I ಹೊಲಕ್ಕೆ ನೇಗಿಲ ಹೂಡಿಸಿ ಮೇಟಿಯಾಗಿಸಿದೆ ನಾಲ್ಕು ಕಾಳು ಚೆಲ್ಲಿ ಸಾವಿರ ಕಾಳು ಬೆಳೆವುದ ತಿಳಿಸಿದೆ II ತಂದೆ ಎಲ್ಲಿದೆ ನೀ ಇಲ್ಲಿ ತನಕ ಅಮ್ಮ ನಿನ್ನ ಜೊತೆ ಬರುವ ತನಕ I ನಾನು ಅಕ್ಕ ಜನಿಸುವ ತನಕ ಅಮ್ಮ ಜನನಿ ಪುಣ್ಯಕ್ಕೆ ನೀ ನಮ್ಮ ಜನಕ II ✍️
❤️ 👍 💯 5

Comments