Investment Education by Amar
Investment Education by Amar
May 28, 2025 at 11:54 AM
💹ಬೆಂಗಳೂರಿಗೆ ಅಂಟಿಕೊಂಡಂತೆ ಇರುವ ಮೈಸೂರು ಎಲ್ಲ ಆಯಾಮಗಳಲ್ಲಿಯೂ ಅಭಿವೃದ್ಧಿಗೆ ಸರಿಹೊಂದುವಂತಿದೆ. ಹೌದು ನಮಗೆ ಮೈಸೂರಿನ ಸೌಂದರ್ಯ ಹಾಳಾಗಬಾರದು ಅನ್ನುವ ಭಾವನಾತ್ಮಕ ಅಭಿಮಾನವಿದೆ. ಆದರೆ ಅಭಿವೃದ್ಧಿಗೆ ಪೂರಕವಾಗಿರುವ ನಗರಗಳನ್ನು ಸರ್ಕಾರಗಳು ಮತ್ತು ಬ್ಯುಸಿನೆಸ್ ಗಳು ಉಪಯೋಗಿಸಿಕೊಳ್ಳಲೇ ಬೇಕು. ಅದೇ ಜಗದ ನಿಯಮ ಕೂಡ. 🎯ಮೈಸೂರಿನ ಅಭಿವೃದ್ಧಿಯಲ್ಲಿ ಕನ್ನಡಿಗರು ಹೇಗೆ ಭಾಗವಹಿಸಬಹುದು? ಹೀಗೆ ಲಾಭ ಗಳಿಸಬಹುದು? ❇️ಮೊದಲಿಗೆ ಏರುವುದು ರಿಯಲ್ ಎಸ್ಟೇಟ್ ಬೆಲೆಗಳು. ಒಳ್ಳೆಯ ಬೆಲೆಯಲ್ಲಿ ಕನ್ನಡಿಗರು ಜಾಗ ಕೊಳ್ಳಬೇಕು, ಮೋಸ ಆಗದಂತೆ ಗಮನ ಹರಿಸಬೇಕು. ❇️ಒಳ್ಳೆಯ ಕೆಲಸದ ಅವಕಾಶ ಸಿಕ್ಕರೆ, ಬೆಂಗಳೂರಿಂದ ಮೈಸೂರಿನ ಕಡೆ ಹೊರತು ದುಡಿಯಬಹುದು. ❇️ಇದರಿಂದ ಮೈಸೂರು ಅಕ್ಕ ಪಕ್ಕ ಒಂದಷ್ಟು ರೆಸಾರ್ಟುಗಳು, ದೊಡ್ಡ ಹೋಟೆಲ್ ಗಳು, ಆಸ್ಪತ್ರೆಗಳು , ಅಪಾರ್ಟ್ಮೆಂಟ್ ಗಳು, township ಗಳು ಬರುವ ಅವಕಾಶಗಳು ಹೆಚ್ಚು. ಇಲ್ಲಿಯೂ ಕನ್ನಡಿಗರು ಲಾಭ ಮಾಡಲು ಸಾಧ್ಯವೇ ನೋಡಬಹುದು.
Image from Investment Education by Amar: 💹ಬೆಂಗಳೂರಿಗೆ ಅಂಟಿಕೊಂಡಂತೆ ಇರುವ ಮೈಸೂರು ಎಲ್ಲ ಆಯಾಮಗಳಲ್ಲಿಯೂ ಅಭಿವೃದ್ಧಿಗೆ ಸರಿ...
👍 ❤️ 👌 13

Comments