Investment Education by Amar
May 30, 2025 at 09:35 AM
💹ಫೈನಾನ್ಶಿಯಲ್ ಪ್ಲಾನಿಂಗ್, ಜನರ ದುಡಿಮೆ ಮತ್ತು ಶಾಲೆಯ ಶುಲ್ಕಗಳು:
❇️ಒಂದಿಬ್ಬರು ಗೆಳೆಯರು ಏಪ್ರಿಲ್ ಮೇ ನಲ್ಲಿ ಮಕ್ಕಳನ್ನು ಹೊಸ ಶಾಲೆಗೆ ಸೇರಿಸಿದ್ದೀವಿ ಅಂತ ಹೇಳಿದ್ರು. ಶಾಲೆ ಬದಲಿಸಿದ ಕಾರಣ ಕಳೆದ ವರ್ಷಕ್ಕಿಂತ 100% ಹೆಚ್ಚಿಗೆ ಈ ವರ್ಷದ ಫೀಸ್ ಆಗಿದೆಯಂತೆ. (ಒಟ್ಟಾರೆ 1 ಲಕ್ಷ ಇದಿದ್ದು 2 ಲಕ್ಷ ಆಗಿದೆ). ಉತ್ತಮ ಶಾಲೆಗೆ ಹೋಗಿದ್ದೀವಿ ಅನ್ನುವ ನಂಬಿಕೆ ಅವರದು.
❇️ಗಂಡ ಹೆಂಡತಿ ಸೇರಿಸಿ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗಳು ಕೈಗೆ ಬರುತ್ತದೆ. 2 ಲಕ್ಷ ಶಾಲೆಯ ಫೀಸ್ ಅಂತ ಹೇಳಿದರು. ಅಂದರೆ ಇಬ್ಬರ ತಿಂಗಳ ದುಡಿಮೆ ಒಂದು ಮಗುವಿನ ವಾರ್ಷಿಕ ಫೀಸು. ಎರಡು ಮಕ್ಕಳಿರುವ ಕಾರಣ 2 ತಿಂಗಳುಗಳ ಸಂಬಳ ಫೀಸಿಗೆ ಹೋಗುತ್ತದೆ.
🎯ವರ್ಷದ 12 ತಿಂಗಳು ಜೀವನ ನಡೆಸಕ್ಕೆ ಉಳಿದಿರುವುದು 10 ತಿಂಗಳ ಸಂಬಳ ಅಷ್ಟೇ. ಹಣದುಬ್ಬರ ಏರಿಕೆ ಅಂದರೆ ಇದು. ಸರ್ಕಾರ ಕೊಡುವ ಅಂಕಿ ಅಂಶಗಳು ನಮ್ಮ ಜೀವನದಲ್ಲಿ ಯಾವುದೇ ಹೋಲಿಕೆ ಇಲ್ಲದಂತೆ ಇವೆ.
👍
😢
😮
👌
16