ಗದಗ ಜಿಲ್ಲಾ ಪೊಲೀಸ್
ಗದಗ ಜಿಲ್ಲಾ ಪೊಲೀಸ್
May 25, 2025 at 03:27 PM
*ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ* *ಸಾರ್ವಜನಿಕರು ಬಂದ್ ಕರೆಯ ವದಂತಿಗಳ ಬಗ್ಗೆ ಕಿವಿಗೊಡಬಾರದು* *ಗದಗ : ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರಲ್ಲಿ ಈ ಮೂಲಕ ಕೋರುವುದೇನೆಂದರೆ, ಗದಗ ಶಹರದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾದ ಅಂಗಡಿಗಳ ತೆರವುಗೊಳಿಸುವ ವಿಚಾರವಾಗಿ ಕೆಲವು ಸಂಘಟನೆಗಳು ಸೇರಿಕೊಂಡು ದಿನಾಂಕ:26.05.2025 ರಂದು ‘ಗದಗ ಬಂದ್’ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸದರಿ ಬಂದ್ ಕರೆ ನಿಷೇಧಿಸಿ ಗದಗ ತಾಲೂಕ ದಂಡಾಧಿಕಾರಿಗಳು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿ ಆದೇಶಿರುತ್ತಾರೆ.* *ಆದ್ದರಿಂದ ಯಾವುದೇ ಸಾರ್ವಜನಿಕರು ಬಂದ್‌ಗೆ ಕರೆ ನೀಡುವುದು, ಬಂದ್‌ಗೆ ಬೆಂಬಲಿಸುವುದು ಮತ್ತು ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ನಿಷೇಧಾಜ್ಙೆ ಉಲ್ಲಂಘಿಸಿದಂತಾಗಿ ಅಪರಾಧವಾಗುವುದು. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಬಂದ್ ಕರೆಯ ವದಂತಿಗಳ ಬಗ್ಗೆ ಕಿವಿಗೊಡಬಾರದು ಅಂತಹ ಊಹಾಪೋಹಗಳಿಗೆ ಒಳಗಾಗಬಾರದು, ಸಾಮಾನ್ಯವಾಗಿ ದಿನನಿತ್ಯದಂತೆ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಹೋಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ ಎಸ್ ನೇಮಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.*
👍 🙏 ❤️ 10

Comments