
ಗದಗ ಜಿಲ್ಲಾ ಪೊಲೀಸ್
5.1K subscribers
About ಗದಗ ಜಿಲ್ಲಾ ಪೊಲೀಸ್
*Official WhatsApp channel of GADAG District Police Follow this channel and get Gadag District Police updates* *ಗದಗ ಜಿಲ್ಲಾ ಪೊಲೀಸ್ ವಾಟ್ಸಪ್ ಚಾನಲ್ ಅನ್ನು ಫಾಲೋ ಮಾಡಿ ಜಿಲ್ಲಾ ಪೊಲೀಸ್ ಕಾರ್ಯಗಳ ಬಗ್ಗೆ Updates ಪಡೆಯಿರಿ.* *ಪೊಲೀಸ್ ಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಳಿಗಾಗಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ*
Similar Channels
Swipe to see more
Posts

*ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ! ಮಾದಕ ವಸ್ತುಗಳ ಕಳ್ಳಸಾಗಣೆ, ಸಾಗುವಳಿ ಮತ್ತು ದುರ್ಬಳಕೆಯನ್ನು ಗೌಪ್ಯವಾಗಿ ವರದಿ ಮಾಡಿ. ಕರೆ ಮಾಡಿ MANAS 1933 ಕ್ಕೆ (ಟೋಲ್-ಫ್ರೀ ), ಇಮೇಲ್ ಮಾಡಿ [email protected] ಗೆ ಅಥವಾ ಭೇಟಿ ನೀಡಿ [email protected] ಗೆ*

*ಅಂತರಾಷ್ಟ್ರೀಯ ಕರೆ ಸ್ವೀಕರಿಸುವಾಗ, ನಿಮ್ಮ ಫೋನ್ ನಲ್ಲಿ ಭಾರತೀಯ ನಂಬರ್ ಅಥವಾ ಯಾವುದೇ ನಂಬರ್ ಪ್ರದರ್ಶಿಸದಿದ್ದರೆ, ದಯವಿಟ್ಟು DoT ಟೋಲ್ಫ್ರೀ ನಂಬರ್ 1800110420/1963 ಗೆ ತಿಳಿಸಿ.*

*ಈ ದಿನ ಶ್ರೀ ಡಾ.ಅಲೋಕ್ ಮೋಹನ್ ಐಪಿಎಸ್, @DgpKarnataka ರವರು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀ ಡಾ. ಎಂ.ಎ ಸಲೀಂ ಐಪಿಎಸ್,ರವರು ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್ ಪಡೆಯು ಡಾ. ಅಲೋಕ್ ಮೋಹನ್ ಐಪಿಎಸ್,ರವರ 38 ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸುತ್ತ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತದೆ.*


*ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ* *ಸಾರ್ವಜನಿಕರು ಬಂದ್ ಕರೆಯ ವದಂತಿಗಳ ಬಗ್ಗೆ ಕಿವಿಗೊಡಬಾರದು* *ಗದಗ : ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರಲ್ಲಿ ಈ ಮೂಲಕ ಕೋರುವುದೇನೆಂದರೆ, ಗದಗ ಶಹರದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾದ ಅಂಗಡಿಗಳ ತೆರವುಗೊಳಿಸುವ ವಿಚಾರವಾಗಿ ಕೆಲವು ಸಂಘಟನೆಗಳು ಸೇರಿಕೊಂಡು ದಿನಾಂಕ:26.05.2025 ರಂದು ‘ಗದಗ ಬಂದ್’ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸದರಿ ಬಂದ್ ಕರೆ ನಿಷೇಧಿಸಿ ಗದಗ ತಾಲೂಕ ದಂಡಾಧಿಕಾರಿಗಳು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿ ಆದೇಶಿರುತ್ತಾರೆ.* *ಆದ್ದರಿಂದ ಯಾವುದೇ ಸಾರ್ವಜನಿಕರು ಬಂದ್‌ಗೆ ಕರೆ ನೀಡುವುದು, ಬಂದ್‌ಗೆ ಬೆಂಬಲಿಸುವುದು ಮತ್ತು ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ನಿಷೇಧಾಜ್ಙೆ ಉಲ್ಲಂಘಿಸಿದಂತಾಗಿ ಅಪರಾಧವಾಗುವುದು. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಬಂದ್ ಕರೆಯ ವದಂತಿಗಳ ಬಗ್ಗೆ ಕಿವಿಗೊಡಬಾರದು ಅಂತಹ ಊಹಾಪೋಹಗಳಿಗೆ ಒಳಗಾಗಬಾರದು, ಸಾಮಾನ್ಯವಾಗಿ ದಿನನಿತ್ಯದಂತೆ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಹೋಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ ಎಸ್ ನೇಮಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.*

*"ಸೈಬರ್ ಸೇಫ್ ಆಗಿರಿ! ಬಾಟ್‌ನೆಟ್ ಇನ್ ಫೆಕ್ಷನ್ ಗಳು ಮತ್ತು ಮಾಲ್‌ವೇರ್‌ಗಳಿಂದ ನಿಮ್ಮ ಡಿವೈಸ್ ಅನ್ನು ಸುರಕ್ಷಿತಗೊಳಿಸಲು. CERT-In GoI https://www.csk.gov.in ನಲ್ಲಿ ""ಉಚಿತ ಬಾಟ್ ರಿಮೂವಲ್ ಟೂಲ್""ಡೌನ್‌ಲೋಡ್ ಮಾಡಲು ಸಲಹೆ ನೀಡುತ್ತದೆ"*