
Vedanta Bharati
June 8, 2025 at 05:17 PM
ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ 8-6-2025ರಂದು ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಸುಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯಕ್ಷೇತ್ರಕ್ಕೆ ಭೇಟಿನೀಡಿದರು. ದೇವಸ್ಥಾನದ ಆಡಳಿತಮಂಡಳಿಯವರು ಪರಮಪೂಜ್ಯ ಶ್ರೀಶ್ರೀಗಳವರನ್ನು ಶ್ರದ್ಧಾಭಕ್ತಿಪುರಸ್ಸರವಾಗಿ ಸ್ವಾಗತಿಸಿದ್ದು, ದೇವರ ದರ್ಶನ ಪಡೆದ ನಂತರ ಅಲ್ಲಿಯ ಸದಸ್ಯರೊಂದಿಗೆ ಸಮಾಲೋಚನೆಯನ್ನು ನಡೆಸಲಾಯಿತು.