
Vedanta Bharati
June 9, 2025 at 05:15 PM
ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು 9-6-2025ರಂದು ಬೆಳಿಗ್ಗೆ ಕಡಬ ಪಟ್ಟಣದ ಸಮೀಪದಲ್ಲಿರುವ ಶ್ರೀ ಶಂಕರಾಚಾರ್ಯರ ಭೇಟಿಯ ಕುರಿತಾದ ಪ್ರತೀತಿಯನ್ನು ಹೊಂದಿದ ಶ್ರೀಕಂಠ ಮಹಾಗಣಪತಿ ದೇವಸ್ಥಾನ ಹಾಗೂ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿನೀಡಿ ಅಲ್ಲಿಯ ಸದಸ್ಯರೊಂದಿಗೆ ಅಲ್ಲಿನ ಐತಿಹ್ಯದ ಕುರಿತಾಗಿ ಸಮಾಲೋಚನೆಯನ್ನು ನಡೆಸಿದರು. ಪ್ರಸಿದ್ಧ ತಂತ್ರಿಗಳೂ ವಿದ್ವಾಂಸರೂ ಆದ ಪ್ರತಾಪ ಶರ್ಮಾರವರು ಈ ಸ್ಥಳಗಳ ಕುರಿತು ಅನೇಕ ಐತಿಹಾಸಿಕ ವಿಷಯಗಳನ್ನು ತಿಳಿಸಿಕೊಟ್ಟರು.
🙏
5