Vedanta Bharati
Vedanta Bharati
June 10, 2025 at 04:12 PM
ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು 9-6-2025ರಂದು ಸಂಜೆ ವಿಟ್ಲದ ಸುಪ್ರಸಿದ್ಧ ಪಂಚಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದ ನಂತರ ಅಲ್ಲಿಯ ಸದಸ್ಯರೊಂದಿಗೆ ಶ್ರೀ ಶಂಕರಾಚಾರ್ಯರ ಭೇಟಿಯ ಕುರಿತಾದ ಪ್ರತೀತಿಯ ವಿಷಯವಾಗಿ ಹಾಗೂ ಅಲ್ಲಿನ ಐತಿಹ್ಯದ ಕುರಿತಾಗಿ ಸಮಾಲೋಚನೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಸೌಂದರ್ಯಲಹರೀ ಸ್ತೋತ್ರ ಹಾಗೂ ದಕ್ಷಿಣಾಮೂರ್ತಿ ಅಷ್ಟಕವನ್ನು ಹೇಳಿಕೊಡಲಾಯಿತು. ಪೂಜ್ಯ ಶ್ರೀಶ್ರೀಗಳವರು ಅನುಗ್ರಹವಚನ ನೀಡಿದರು.
🙏 5

Comments