Panchajanya IAS UPSC - IAS in Kannada
Panchajanya IAS UPSC - IAS in Kannada
May 31, 2025 at 03:35 PM
💫 🌳 ಪ್ರತಿ ವರ್ಷ ಕರ್ನಾಟಕದಿಂದ ಕನ್ನಡದಲ್ಲೇ Mains ಬರೆದು ಕನಿಷ್ಠ ಒಬ್ಬರಾದರೂ IAS ಪರೀಕ್ಷೆಯಲ್ಲಿ Rank ಬರುತ್ತಿದ್ದಾರೆ ಅನ್ನೋದು ಸ್ವಲ್ಪ ನೆಮ್ಮದಿದಾಯಕವಾದರೂ, 2014 ರಲ್ಲಿ ಗುರುದತ್ತ ಹೆಗಡೆಯವರು 25 ನೇ Rank ಪಡೆದು IAS ಆದದ್ದು, ಅದೇ ವರ್ಷ, ಅವರ ಸ್ನೇಹಿತರಾದ ಲಕ್ಷ್ಮಣ ನಿಂಬರಗಿಯವರು 104 Rank ನಿಂದ IPS ಆದುದನ್ನ ಬಿಟ್ಟರೆ, ತದ ನಂತರ, ಕನ್ನಡದಲ್ಲಿ ಬರೆದವರು, 100 ಅಲ್ಲ, 200 ಅಲ್ಲ, 300 Rank ಕೂಡಾ ಗಳಿಸಿಲ್ಲ! 450+ 500+ Rank ಗಳಿಗೇ ಸೀಮಿತರಾಗುತ್ತಿದ್ದಾರೆ! "ಎಲ್ಲಿ ತಾಳ ತಪ್ಪುತ್ತಿದೆ?" "ಯಾಕೆ ಕನ್ನಡದಲ್ಲಿ Top Rank ಬರುತ್ತಿಲ್ಲ?" ಅನ್ನೊ "ಎರಡು ಪ್ರಶ್ನೆಗಳನ್ನು" ನಿದ್ರೆಯಲ್ಲಿಯೂ ಬಡಿದೆಚ್ಚರಿಸಿ, ನನ್ನ ಮನಸ್ಸು ಆಗಾಗ ಕೇಳುತ್ತಿತ್ತು. ಯಾಕೆಂದರೆ, Panchajanya IAS ನ ಮುಖ್ಯ ಗುರಿ ಕನ್ನಡದಲ್ಲಿ Mains ಬರೆಯುವವರಿಗೆ ಊರುಗೋಲಾಗೋದು! ಹಾಗಿದ್ದಾಗ, ಕನ್ನಡದಲ್ಲಿ ಬರೆದರೆ ಅಂಕಗಳೇ ಬರಲ್ಲ ಅಂತಂದ್ರೆ, ಯಾವ ಧೈರ್ಯದಿಂದ ನಾವು 100 Rank ನ ಕನಸನ್ನು, IAS ಕನಸನ್ನು ನಮ್ಮ ವಿದ್ಯಾರ್ಥಿಗಳಿಗೆ ತುಂಬೋದು? ಅಂತಾ ಯೋಚಿಸಿದ್ದೂ ಇದೆ. ಆದರೆ, ಕೆಲವು ತಿಂಗಳ ಹಿಂದೆ ಇದಕ್ಕೆ ಸರಿಯಾದ ಉತ್ತರ ಸಿಕ್ಕಿಬಿಟ್ಟಿತು! ನಮ್ಮ Offline ವಿದ್ಯಾರ್ಥಿಗಳಿಗೆ Mains ಉತ್ತರಗಳನ್ನು ಬರೆಯಲು ಹೇಳಿದಾಗ, ಬಹುತೇಕರು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಂತೆ, ಆಡು ಭಾಷೆಯಲ್ಲಿ ಗೀಚಿಬಿಟ್ಟರು! ಮಾರನೇ ವಾರವೂ ಅದೇ ಹಾಡು! ಅವರ ಉತ್ತರಗಳನ್ನು ಓದುತ್ತಿದ್ದರೆ, ತಲೆ ಗಿರ್ರ್ರ್ರ್ರ ಅಂತಿತ್ತು! ಅವರ ಆ ಅಪ್ರಬುದ್ಧವಾದ - ಎಳೆಯ ಬರವಣಿಗೆಯಿಂದ ತಿಳಿದಿದ್ದು, "ಕನ್ನಡದ Mains ಉತ್ತರಗಳಲ್ಲಿ ಸತ್ವವಿಲ್ಲ, ಸಾರವಿಲ್ಲ, ಶಕ್ತಿಯಿಲ್ಲ, ಹಿಡಿತವಿಲ್ಲ, ಬಿಗಿತವಿಲ್ಲ, ಮಿಳಿತವಿಲ್ಲ, ಮಿಡಿತವಿಲ್ಲ, ಮಿಗಿತವಿಲ್ಲ, ತುಡಿತವಿಲ್ಲ, ಸೆಳೆತವಿಲ್ಲ, ಹೆಣೆತವಿಲ್ಲ, ಕೆನೆತವಿಲ್ಲ, ಓಂಕಾರವಿಲ್ಲ, ಝೇಂಕಾರವಿಲ್ಲ, ಆಹ್ಲಾದವಿಲ್ಲ, ಆಸ್ವಾದವಿಲ್ಲ! ಉಫ್! ಅವು ಶುದ್ಧ, ಕಾಗುಣಿತ ದೋಷದ ಗೀಟುಗಳು! ಭಾವವಿಲ್ಲದ ಕನ್ನಡದ ರೇಖೆಗಳು! ಈ ಸಾಧನೆಗೆ 100 ರ ಒಳಗಿನ Rank ಸಿಕ್ಕೀತೆ? ಕನಸಿನ ಮಾತು! Then what? ಅಲ್ಲಿಗೆ ಬಿಟ್ ಬಿಡ್ತೀವಾ? ಕನ್ನಡಿಗರು ರೀ! So, ಇವತ್ತು ನೇರವಾಗಿ ರಾಮಕೃಷ್ಣ ಆಶ್ರಮಕ್ಕೆ ಹೋಗಿ ಒಂದ ಹತ್ತು ಪುಸ್ತಕ ಹೊತ್ತು ತಂದೆ, ವಾರದ Test Topper ಗಳಿಗೆ ಹಿಂದೆ ಕೊಡುತ್ತಿದ್ದ Cash Prize Cancel ಮಾಡಿ, ಇನ್ಮುಂದೆ, ಹೊತ್ತಗೆಗಳನ್ನೇ ಕೊಡಲು ನಿರ್ಧರಿಸಿದ್ದೇವೆ. Panchajanya IAS ನಲ್ಲೂ ಒಂದು ಅತ್ಯುತ್ತಮ ಪುಸ್ತಕಗಳ ಸಣ್ಣ ಭಂಡಾರವನ್ನ ಆರಂಭಿಸೋ ಯೋಜನೆಯಿದೆ. ಆಣೆ ಮಾಡಿ ಹೇಳುತ್ತೇನೆ, ಬರೆದಿಟ್ಕೊಳ್ಳಿ, If you follow up with me, You can be AIR 1! 🔥 ಇಂದಿನ ನೆಮ್ಮದಿಯ ಜೊತೆಗೆ, ನಾಳೆಯ ಸವಾಲಿಗೆ ಉತ್ತರ ಹುಡುಕೋ Panchajanya ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ಕಿತ್ತೆಸೆಯಲಿದೆ! If you are ready, You will become KING/QUEEN! 👑 ಅಂದಹಾಗೆ, ಪುಸ್ತಕ ಖರೀದಿಯ ನಂತರ, ಬೆಳಗಾವಿಯ ರಾಮಕೃಷ್ಣ ಆಶ್ರಮಕ್ಕೆ 25 ವರ್ಷವಾಯಿತು, June 8 ರಂದು ರಜತೋತ್ಸವವಿದೆ ಬನ್ನಿ ಎಂದು ಆಹ್ವಾನ ನೀಡಿದರು, ಖುಷಿಯಿಂದ ಸ್ವಿಕರಿಸಿದೆ. 2007 ರಲ್ಲಿ ಶಾಲಾ ಪ್ರವಾಸದ ನಿಮಿತ್ತ ಮೊದಲ ಬಾರಿಗೆ ಬಂದಾಗಿನ ಕ್ಷಣಗಳು ನೆನಪಾದವು! 18 ವರ್ಷಗತಿಸಿದ್ದೇ ಗೊತ್ತಾಗಲಿಲ್ಲ! So Next Target 🎯, ಕನ್ನಡದ ಆಕಾಂಕ್ಷಿಗಳ Mains ಉತ್ತರಗಳನ್ನು, ಸಮೃದ್ಧವಾಗಿಸೋದು, ಶೀಘ್ರದಲ್ಲೇ, Daily Mains Answer Writing Program ಆರಂಭವಾಗಲಿದೆ, Be ready! Let's be ಬುಡದಿಂದಲೇ ಸದೃಢ! ಪೆನ್ನು ಜೀಕಳಿಯಾಗಿ, ಶಾಯಿಯ 🌈 ಕಾಮನಬಿಲ್ಲು ಮೂಡಬೇಕು! ಬರೀತಾ ಇದ್ರೇ, ನವರಸಗಳೂ ಸ್ಫುರಿಸಬೇಕು, ಚೇಕ್ ಮಾಡುವವರ ಹಾರ್ಮೋನುಗಳು ಸ್ರವಿಸಬೇಕು! ನಿಮ್ಮನ್ನು ತುಂಬಾ ನಂಬಿದ್ದೇನೆ, ಉಳಿಸಿಕೊಳ್ಳೋದು ನಿಮ್ಮ ಜವಾಬ್ದಾರಿ. ಏನಂತೀರಿ? ಕನ್ನಡದಲ್ಲಿ Strong ಆಗ್ತೀರಲ್ವಾ? (English Medium Students, You also be ready to sculpt your answers!) - ಪ್ರವೀಣ ಮ ಮಗದುಮ್ಮ Feedback @ [email protected] Hit 🔥 👇

Comments