Panchajanya IAS UPSC - IAS in Kannada
Panchajanya IAS UPSC - IAS in Kannada
June 7, 2025 at 09:38 AM
ಸೀನಿಯರ್ ಆಕಾಂಕ್ಷಿಯೊಬ್ಬರು ಇತ್ತೀಚೆಗೆ ಕಾಲ್ ಮಾಡಿದ್ರು. ಅವರ ನನ್ನ ಪರಿಚಯ 2024ರ KAS ಹೋರಾಟದಲ್ಲಿ ಆಗಿದ್ದು. ಇನ್ನೆರಡು ವರ್ಷಗಳಲ್ಲಿ UPSC Attempts ಮುಗಿಯಲಿವೆ. ಉಳಿದಿರೋದು ಕೇವಲ 2 Attempts ಮಾತ್ರ. ಏನ್ ಮಾಡಬಹುದು ಅಂತಾ ಯೋಚನೆ ಮಾಡ್ತಿದ್ರು! ಅವರ ಕನ್ನಡದ ಬರವಣಿಗೆ ನೋಡಿದರೆ ನಿಜಕ್ಕೂ ದಂಗು ಬಡಿಸೋಹಾಗಿದೆ! ನಿರರ್ಗಳವಾಗಿ ಕನ್ನಡವನ್ನು ವಚನ-ಕವನಗಳ ಧಾರೆಯ ಮೂಲಕ ನುಡಿಯಬಲ್ಲರು. ಅವರ ಸ್ನೇಹ ಬಳಗದ ಕೆಲವರು ಅಧಿಕಾರಿಗಳಾಗಿ ಹಲವು ವರ್ಷಗಳಾಗಿವೆ. ಇನ್ನು, Junior ಗಳೂ ಒಂದಲ್ಲೊಂದು ಸರ್ಕಾರಿ ಅಥವಾ ಖಾಸಗಿ ಹುದ್ದೆಗಳಲ್ಲಿ ಸೇರಿಕೊಂಡಿದ್ದಾರೆ. ಆದರೆ, ಎಲ್ಲಾ ಸಾಮರ್ಥ್ಯವಿರುವ ಇವರು... ಬದುಕಿನ ವೈಚಿತ್ರ್ಯಕ್ಕೋ ಏನೋ... ಇನ್ನೂ 'ಉದ್ಯೋಗ' ಎನ್ನುವ ದಡ ತಲುಪಿಲ್ಲ! "ಯಾಕೆ ಸರ್ ಇನ್ನೂ ನೀವು ಒಂದು Permanent ಉದ್ಯೋಗ ಸೇರಿಲ್ಲ?" ಅಂತಾ ಕೇಳಿದಾಗ, "ಸರ್ ನಾವು ಹಳ್ಳಿ ಹುಡುಗರು. ನಮ್ ಕಡೆ ಮನೇಲಿ ಓದಿಸೋದೇ ಹೆಚ್ಚು... ಅಂತದ್ರಲ್ಲಿ... ನಾನು ಹೇಗೋ ಕಷ್ಟಪಟ್ಟು Masters ಮಾಡಿಕೊಂಡೆ. 2015 ರಲ್ಲೇ ಸರ್ಕಾರದ ಪರೀಕ್ಷೆ ಪಾಸಾಗಿ UPSC free ಕೋಚಿಂಗ್ ಗೆ ದೆಹಲಿಗೆ ಹೋಗಿ ತರಬೇತಿ ಪಡೆದಿದ್ದೆ. ಅದಾದ ಮೇಲೆ, 2 ಸಾರಿ KAS ನಲ್ಲಿ Interview ಕೂಡ ಕೊಟ್ಟಿದ್ದೆ! ಆಗಲಿಲ್ಲ ನೋಡಿ. " ಅಂದ್ರು. " ಅದೆನೋ ಸರಿ, ಇನ್ನೂ ಯಾಕೆ ನಿರುದ್ಯೋಗಿಯಾಗೇ ಉಳಿದ್ರಿ?" ಅಂತಾ ನಾ ಕೇಳಿದ್ದಕ್ಕೆ. " ಸರ್ ಆಗ ಯವ್ವನದ ಹುರುಪು. ಮಾಡ್ತೀನಿ ಅನ್ನೋ ಹಠ ಇತ್ತು. SDA, FDA, PDO ಪಾಸ್ ಆಗಿದ್ದರೂ, IAS ಆಗ್ತೀನಿ ಅನ್ನೊ ಹುಮ್ಮಸ್ಸಿನಲ್ಲಿ, ಆ ಹುದ್ದೆಗಳಿಗೆ ಹೋಗಲೇ ಇಲ್ಲ. ಮುಂದೆ 2020 ರಲ್ಲಿ ಚೆನ್ನಾಗಿ ಓದಿಕೊಂಡು ತಯಾರಾಗಿದ್ದಾಗ, ಕೊರೋನಾ ಬಂದು, ದೆಹಲಿಯಿಂದ ವಾಪಸಾಗಬೇಕಾಯಿತು. ಇತ್ತ ಮನೆಯಲ್ಲಿನ ಸಮಸ್ಯೆಗಳು ನನ್ನನ್ನು ಹಿಂಡಿ ಹಿಪ್ಪೆ ಮಾಡಿದವು. College professor ಆಗಬೇಕಂತ ಮತ್ತೆ 3 ವರ್ಷ ಕಳೆದೆ. ಅಲ್ಲೂ ಯಶಸ್ಸು ಸಿಗಲಿಲ್ಲ. ಈಗ KPSC ನಲ್ಲಿ ಈ ಕಥೆ! " ಅಂತಾ ಅವರು ಹೇಳುವಾಗ, ಆರಂಭದಲ್ಲಿದ್ದ ಅವರ ದನಿಯ ಗಟ್ಟಿತನ ಮೆತ್ತಗಾಗಿತ್ತು! " ಪರವಾಗಿಲ್ಲ, ಇನ್ನೂ 2 ಅವಕಾಶಗಳಿವೆ ಅಂತೀರಿ, ಈಗ 5-6 ತಿಂಗಳು ಕೂತು ಚೆನ್ನಾಗಿ ಓದಿಕೊಳ್ಳಿ. ಕನ್ನಡ ಸಾಹಿತ್ಯವಂತೂ ನಿಮ್ಮ ನಾಲಿಗೆ ಮೇಲೆ, ನಲಿಯುವಂತಿದೆ. Prelims ಮೇಲೆ ಹೆಚ್ಚು ಒತ್ತು ಕೊಡಿ. ಶುಭವಾಗಲಿ 💐 " ಎಂದು ಹಾರೈಸಿ ಬೇಸರದಿಂದಲೇ Phone ಇಟ್ಟೆ. ಈಗ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಆರಂಭಿಸಿರುವ ನಿಮಗೂ ಒಂದು ಕಿವಿಮಾತು ಅಂತಾ ಹೇಳುವೆ, ಅದು ಯಾವುದೇ ಸರ್ಕಾರಿ ಪರೀಕ್ಷೆ ಇರಲಿ, ಅದಕ್ಕೆ 2 ವರ್ಷ ಮಾತ್ರ Full time ಓದಿ. ತದ ನಂತರ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಓದಿ. ಬದುಕಿನ ಭರವಸೆಯು ಹಣದ ಕೊರತೆಯಾದಾಗ ಇನ್ನಷ್ಟು ಕುಸಿಯುತ್ತದೆ. ಈ ಸಮಾಜ ನಿಮ್ಮತ್ತ ಬೆರಳು ಮಾಡಿ ತೋರಿಸಿ, ನಗುವ ಮುನ್ನ ನಿಮ್ಮ ಕೈಯಲೊಂದು ಕೆಲಸ, ಜೇಬಲೊಂಚೂರು ನೀವೇ ದುಡಿದು ಗಳಿಸಿದ ಬಿಡಿಗಾಸಾದರೂ ಇರಲಿ! ಹಿಂದೆ ಹಣಗಳಿಸಲು ಕೆಲಸವರಸಿ ಹೋಗಬೇಕಿತ್ತು, ಈಗ ನೀವು ಮಾಡಿದ್ದೆಲ್ಲವೂ ಕೆಲಸ! ಅದು ಧನಾತ್ಮಕವಾಗಿದ್ದರೆ, ಉತ್ತಮ. ಓದುವ ವಿದ್ಯಾರ್ಥಿಗಳಾದ ನೀವು ಯಾವುದರಲ್ಲೂ ಹಿಂದುಳಿಯಬಾರದು. ಒಬ್ಬ ಕ್ರೀಡಾಪಟು, ಒಬ್ಬ ಸಿನಿಮಾ ನಟ, ಒಬ್ಬ ರಾಜಕಾರಣಿ ಹೇಗೇಗೋ ಜೀವನ ಮಾಡುವಾಗ, ಅವರೆಲ್ಲರನ್ನೂ ಮೀರಿ ನಿಂತು, ನೈತಿಕವಾಗಿ, ಸಮಾಜಕ್ಕೆ ಮಾದರಿಯಾಗಿ ಜೀವಿಸಿ ತೋರಿಸಿ. ಹಾಗೆಯೇ "ಮೊದಲು ಮನೆ ಕಟ್ಟಿ, ನಂತರ ಗುಡಿಸಲು ಕೆಡವಿ" IAS ಆಗುವವನಿದ್ದೀನಿ ಅಂತಾ ಆಕಾಶ ನೋಡುತ್ತ ಕುಳಿತರೆ, ಅಲ್ಲಿ ಎಷ್ಟು ಎಣಿಸಿದರೂ ಮುಗಿಯಲಾರದ ಚುಕ್ಕೆಗಳಿವೆಯೇ ಹೊರತು, ಲೆಕ್ಕಕ್ಕೆ ಸಿಗುವ ಅಂಕೆಗಳಿಲ್ಲ. ಮೊದಲು, ಕೈಗೆ ಸಿಗುವ ಹಣ್ಣು ತಿನ್ನಿ, ಹುಳಿದ್ರಾಕ್ಷಿಗಾಗಿ ಜಿಗಿಯುತ್ತ ನಿಲ್ಲಬೇಡಿ. ಸಣ್ಣ ಪುಟ್ಟ ಉದ್ಯೋಗ ಆದರೂ ಸರಿ, ಮೊದಲು ಸೇರಿಕೊಳ್ಳಿ, ಸ್ವಲ್ಪ ಹಣ ಉಳಿತಾಯ ಮಾಡುತ್ತ ಮಾಡುತ್ತ ಬನ್ನಿ, ಅದರಿಂದ ಮುಂದೊಂದು ವರ್ಷ ಸಂಬಳ ರಹಿತ ರಜೆಯಿಂದ, Full time UPSC ಗೆ ಓದಬಹುದು! Be planned. ಆಟ ಆಡುವ ಮುನ್ನ, ಆಟದ ನಿಯಮ ಕಲಿಯಿರಿ. Understand the GAME! ಮರೆಯದಿರಿ 2 ವರ್ಷ ಮಾತ್ರ, ತದ ನಂತರ ಕೆಲಸದೊಂದಿಗೆ ಓದು. All the best 💐 - ಪ್ರವೀಣ ಮ ಮಗದುಮ್ಮ

Comments