
Panchajanya IAS UPSC - IAS in Kannada
June 9, 2025 at 02:14 PM
💫 🌳
ಬಾನು ಮುಷ್ತಾಕ್ ಅವರ "ಎದೆಯ ಹಣತೆ" ಕಥಾಗುಚ್ಛದ "ಎದೆಯ ಹಣತೆ" ಕಥೆಯನ್ನು, Just ಓದಿದೆ!
ಕಥೆಯ ತುಂಬೆಲ್ಲಾ
ಕನ್ನಡ ಭಾಷೆಯ ಪರಿಮಳ,
ವಿವಾಹಿತ ಮುಸ್ಲಿಂ ಹೆಣ್ಣಿನ ಮನೋತಳಮಳ
ಅಡಿಗಡಿಗೆ ಓದುಗನನ್ನ ಹೊತ್ತುಕೊಂಡು ಹೋಗುತ್ತದೆ.
ಇನ್ನೇನು ಮುಗಿಯಿತು ಕಥೆ,
'ಮೆಹರುನ್' ಸತ್ತಳು
ಅಂದುಕೊಳ್ಳುವಾಗ,
ಸಲ್ಮಾ, ಬಂದು,
ಎದೆಗಪ್ಪಿಕೊಂಡು,
ಕಾಲುಹಿಡಿದುಕೊಂಡು,
"ಅಮ್ಮಾ, ಅಬ್ಬಾಗೋಸ್ಕರ ಸಾಯಲು ತಯಾರಿರುವ ನೀನು,
ನಮಗೋಸ್ಕರ ಬದುಕಲಾರೆಯಾ?"
ಅನ್ನೊ ಸಾಲುಗಳನ್ನು ಓದುವಾಗ,
Climax ಗೆ ಗೌರವ ಸಲ್ಲಿಸಲೋ ಏನೋ ಏನ್ನುವಂತೆ,
ಮೈಯ ರೋಮಗಳು ನರ್ತಿಸುತ್ತವೆ!
ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳು, ಒಂದಂಶ ಗಮನದಲ್ಲಿಡಬೇಕು,
ಒಬ್ಬ RCB ಅಭಿಮಾನಿ ಕ್ರಿಕೆಟ್ ನೋಡಲು 1000 ದಿಂದ 10000 ಖರ್ಚು ಮಾಡುತ್ತಾನೆ.
ಒಬ್ಬ ಸಿನಿಮಾ ಪ್ರೇಮಿ 100-150 ಗಳನ್ನು 3 ಗಂಟೆಗಳ ಚಿತ್ರಕ್ಕೆ ಮೀಸಲಿಡುತ್ತಾನೆ.
ಆದರೆ,
ಓದೇ ದೈವವೆಂದು ನಂಬಿರುವ ನಾವು ಎಷ್ಟು ಪುಸ್ತಕಗಳನ್ನು ಕೊಳ್ಳುತ್ತೇವೆ?
ವರ್ಷಕ್ಕೆ 10?
5?
ಕನಿಷ್ಠ 1?
Think on it.
&
Then act too...
-
ಪ್ರವೀಣ ಮ ಮಗದುಮ್ಮ