
Panchajanya IAS UPSC - IAS in Kannada
June 11, 2025 at 01:46 PM
"ಪುರುಷರ ರಕ್ಷಣಾ ಪಡೆಯ" ಜರೂರತ್ತಿದೆ!
ಗಂಡುಗಲಿಗಳು ಪುರಾತನ ಕಾನೂನುಗಳ
ಕಾವಲಿಯಲ್ಲಿ ಕಾಯ್ದು, ಬೇಯ್ದು, ಸುಟ್ಟು
ಕರಕಲಾಗುತ್ತಿದ್ದಾರೆ!
ಇತ್ತ ಉದ್ಯೋಗವಿಲ್ಲ,
ಇರುವ ಉದ್ಯೋಗದಲ್ಲಿ ನೆಮ್ಮದಿಯಿಲ್ಲ,
ಮದುವೆಯಿಲ್ಲ,
ಆದ ಮದುವೆಯಿಂದ ಜೀವನವಿಲ್ಲ,
ಜೀವವೂ ಉಳಿಯುತ್ತಿಲ್ಲ!
ಯಾರನ್ನು ನಂಬೋದು!
ಬಾರುಗಳ ಗಲ್ಲಾಪೆಟ್ಟಿಗೆ ಕಪ್ಪು ಕನ್ನಡಕ ಹಾಕಿ,
ಬಂದೆಯಾ, ಬಾ ಮಗನೆ ಅನ್ನುತ್ತಿದೆ!
ಶಾಲಾ ಕಾಲೇಜು, ಆಸ್ಪತ್ರೆಗಳ ಮೂಲೆಗಳ
ವಿಮಲ್ ನ ಕೆಂಗುರುತು,
ನಿನಗೆ ನಾನೇ ಗತಿ ಎನ್ನುವಂತಿದೆ!
ಬಿಡಾ ಅಂಗಡಿ ಪಕ್ಕದ ತಗಡಿನ
ಶೆಡ್ಡಿನ ಕೆಳಗಿರುವ, ಅರ್ಧ ಮುರಿದ ಪ್ಲಾಸ್ಟಿಕ್ ಕುರ್ಚಿ, ಬಾ ಒಂದೆರಡು ಧಮ್ ಎಳೆದು ಬಿಟ್ಟು ನಿರುಮ್ಮಳನಾಗೆನ್ನುತ್ತಿದೆ.
ನಿಜ,
ಭಾರತದಲ್ಲಿ ಮುದುಕರ ರಾಜ್ಯಭಾರ
ಯುವಕರನ್ನು ದಿಕ್ಕು-ದಾರಿ ತಪ್ಪಿಸಿ
ನರಕಕ್ಕಿಳಿಸಿದೆ!
ಕ್ರಾಂತಿ ಮಾಡುವ, ಉತ್ಸಾಹ,
ಉತ್ಸಾಹ ದೂರವುಳಿಯಿತು ಬಿಡಿ,
ನಮ್ಮ ಯುವಕರಲ್ಲಿ,
ದೀರ್ಘ ಉಸಿರೂ ಕೂಡ ಬರುತ್ತಿಲ್ಲ!
ನಿಸ್ತಂತು,
ನಿಸ್ತೇಜ,
ನಿರ್ಲಕ್ಷ್ಯ,
ನಿರ್ವಿಕಾರ,
ನಿರಾಧಾರ,
ನಿರ್ಲಕ್ಷ್ಯಿತ ಬದುಕು...
ಯಾರಿಗಾಗಿ
ಯಾಕಾಗಿ...
-
ಪ್ರವೀಣ ಮ ಮಗದುಮ್ಮ