Panchajanya IAS UPSC - IAS in Kannada
Panchajanya IAS UPSC - IAS in Kannada
June 13, 2025 at 01:36 PM
🚨⚠️HIGH ALERT ನೀವು, ಪ್ರವಾಸಕ್ಕಂತಾ, ಹೆಂಡ್ತಿ ಮಕ್ಕಳನ್ನ ಕರೆದುಕೊಂಡು, ಕಾಶ್ಮೀರದ ಕಣಿವೆಗೆ ಹೋದರೆ, ಅಲ್ಲಿ ಉಗ್ರರ ಹಿಂಡೊಂದು ಬಂದು, ನಿಮ್ಮ ಗುಂಡಿಗೆಗೆ ಗುಂಡಿಕ್ಕಿ ಹೋಗುತ್ತದೆ! ನೀವು, ಕಪ್ಪು ಗೆದ್ದ RCB ಯ ವಿಜಯ ಜಾತ್ರೆಗೆ ಹೋದರೆ, ಅಲ್ಲಿನ ಜನದಟ್ಟಣೆಯ ಕಾಲ್ತುಳಿತ, ನಿಮ್ಮನ್ನು ಹೆಣವಾಗಿಸಿ, ಅದೇ ನಿಮ್ಮ ಕೊನೆಯ ಯಾತ್ರೆಯಾಗುತ್ತದೆ! ನೀವು, ಹೆಂಡತಿಯೊಂದಿಗೆ ಮಧುಚಂದ್ರಕೆ ಹೋದರೆ, ಅವಳೇ ಖುದ್ದಾಗಿ, ಯೋಜಿಸಿ, ಕರೆಸಿದ, ಗೆಳೆಯರು ಬಂದು ಇರಿದಿರಿದು ಕೊಂದು ಹೋಗುತ್ತಾರೆ! ನೀವು, ಹೊಟ್ಟೆ ಪಾಡಿಗೆ ದುಡಿದು ತಿನ್ನಲು ಮುಂಬೈಗೆ ಹೋದರೆ, ಅಲ್ಲಿನ ಲೋಕಲ್ ಟ್ರೈನಿನ ಜನಸಂಖ್ಯೆ ನಿಮ್ಮನ್ನು ನೆಲಕ್ಕೆ ಹಾಕಿ ಇಲ್ಲವೇನಿಸಿ ಬಿಡುತ್ತದೆ! ಇನ್ನು, ಈ ಎಲ್ಲಾ ಜಂಜಡಗಳೇ ಬೇಡವೆಂದು, ವಿದೇಶಕ್ಕೆ ಹೊರಟರೆ, ವಿಮಾನ ಪತನವಾಗಿ, ಸುಟ್ಟುಕರಕಲಾಗಿ, ನಿಮ್ಮ ಮನೆಯವರಿಗೂ ನೀವು ಗುರುತು ಸಿಗಲಾರಿರಿ. ನೀವಿನ್ನೂ ಇನ್ನೂ ಚಿಕ್ಕವರಾಗಿದ್ದು, ಹಾಸ್ಟೆಲಿನ ಮೆಸ್ಸಿನಲ್ಲಿ ಊಟಮಾಡುತ್ತಿದ್ದರೆ, ಅದೇ ಬಿಲ್ಡಿಂಗಿನ ಮೇಲೆ ಆ ವಿಮಾನ ಬಂದು ಬೀಳುತ್ತದೆ. ಅಲ್ಲಿಗೆ "ಖತಂ. ಬೈ ಬೈ ಟಾಟಾ ಗುಡ್ ಬೈ ಗಯಾ" ಅಳಿದವರಳಿಯುವರು, ಉಳಿದವರುಳಿಯುವರು. ಉಸಿರಳಿದರೂ, ಹೆಸರುಳಿಯುವ ಕೆಲಸ ಮಾಡೋಣ.... Life "Hopeless' ಆಗಿ ಬಹಳ ದಿನವಾಗಿದೆ, ಆದರೂ "ಹೋರಾಡೋಣ" ಯಾಕೆಂದರೆ, ಮುಂದಿನ ನಿಲ್ದಾಣದಲ್ಲಿ, ವಿಜಯಲಕ್ಷ್ಮಿ ಕಾದಿರಬಹುದು! ಏನಂತೀರಿ? - ಪ್ರವೀಣ ಮ ಮಗದುಮ್ಮ Feedback : [email protected]

Comments