Panchajanya IAS UPSC - IAS in Kannada
Panchajanya IAS UPSC - IAS in Kannada
June 18, 2025 at 02:12 PM
🚨Alert ⚠️ UPSC CSE Prelims 2025 ರ ಫಲಿತಾಂಶ ಬಂದಾಗಿನಿಂದ, UPSC ಯ ಪಾರದರ್ಶಕತೆ, ಸಮಗ್ರತೆ ಮತ್ತು ವಸ್ತುನಿಷ್ಠತೆಯ ಬಗ್ಗೆ ಆಕಾಂಕ್ಷಿಗಳು ಮತ್ತು ಬೋಧಕರು ವ್ಯಾಪಕ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ, ಈ ಕುರಿತು UPSC ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಈಗೀಗ Prelims ಪರೀಕ್ಷೆ Knowledge Base ನಿಂದ್ Luck ಆಧಾರದ ಪರೀಕ್ಷೆಯಾಗಿ ಬದಲಾಗುತ್ತಿರುವುದು ವಿಪರ್ಯಾಸ. ಹಾಗೆಯೇ, Interview ಅಂಕಗಳಲ್ಲೂ ಹಲವಾರು ರೀತಿಯ ಸಮಸ್ಯೆಗಳು ಕಂಡು ಬರುತ್ತಿವೆ ಅನ್ನೊ ಚರ್ಚೆ X ನಲ್ಲಿ ಪ್ರತಿದಿನ ನಡೆಯುತ್ತಿದೆ. Yes, ಇದನ್ನೆಲ್ಲ ನೋಡಿದರೆ, UPSC ಯಲ್ಲಿ ಮೊದಲಿನ ಸಮಗ್ರತೆ ಉಳಿದಿಲ್ಲವೆ ಅನ್ನೊ ಪ್ರಶ್ನೆ ಕಾಡುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಆದರೆ, ಬಡ ಮಧ್ಯಮ ವರ್ಗದ ಆಕಾಂಕ್ಷಿಗಳನ್ನು ಈ ಹೊರಾಟಕ್ಕೆ ಅವರ ಪರಿಸ್ಥಿತಿ ಇಳಿಯಗೊಟ್ಟೀತೆ? ಆ ಕಡೆ, ಖಾಸಗಿ ಉದ್ಯೋಗಗಳಲ್ಲಿ ಸಾಲು ಸಾಲು Lay off ಗಳಾಗುತ್ತಿವೆ. ಇಂದು 50,000 ಸಂಬಳ ಪಡೆಯುವ ಗೂಗಲ್ ಉದ್ಯೋಗಿ ನಾಳೆ ನಿರುದ್ಯೋಗಿಯಾಗಿಬಿಡಬಹುದು! ರೈತರಿಗೊಂದುವರ್ಷ ಬರಗಾಲ ಕಾಡಿದರೆ, ಮರುವರ್ಷ ಪ್ರವಾಹದಲ್ಲಿ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ, ಬೆಳೆ ಚೆಂದ ಬಂದ ವರ್ಷ, ಬೆಲೆ ಸಿಗಲಾರದು! ಇನ್ನು, ಕಿರಾಣಿ ಅಂಗಡಿಗಳನ್ನು Zepto, Instamart ಗಳು ನುಂಗುತ್ತಿವೆ! ಶಿಕ್ಷಣ ಮುಗಿಸಿ ಉದ್ಯೋಗ ಅರಸುವ ಯುವಕ ಯುವತಿಯರು 10 - 12 ವರ್ಷ ನಿರಂತರವಾಗಿ ಪರಿತಪಿಸುತ್ತಿದ್ದಾರೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲವೆ? ಇದೆ ಭಾರತದಲ್ಲಿ ಬಡವರನ್ನು ಮೇಲೆತ್ತ ಬಹುದೆ, Yes. But ಎಲ್ಲಿದೆ Mistake? ನನಗೆ ಗೊತ್ತು, ನಿಮಗೆ? ಅಂದಹಾಗೆ, ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿದ್ದ ಹಿಂದಿನ ಗೂಂಡಾಗಿರಿ, ದಾದಾಗಿರಿ ಎಲ್ಲಿ ಹೋದವು? ಆ ಪುಂಡರು ಎಲ್ಲಿ ಹೋದರು? ಇಂದು ರೌಡಿಸಂ ಕಾಣೆಯಾಗಿದೆ, ಯಾಕೆಂದರೆ, ರೌಡಿಗಳು, ರೌಡಿಸಂ ಬಿಟ್ಟು, ಬೇರೆಡೆಗೆ ವಲಸೆ ಬಂದಿದ್ದಾರೆ... ಎಲ್ಲಿ? ನೀವೇ ಹುಡುಕಿ. ಹಾಂ ಇನ್ನೊಂದು, ಮೊದಲು ದೇಶಕ್ಕೆ ಒಬ್ಬ ರಾಜನಿರುತ್ತಿದ್ದ, ಜನ ಹಿತಕ್ಕೆ ದುಡಿಯುತ್ತಿದ್ದ, ಇಂದು, ತಾಲೂಕಿಗೊಬ್ಬ.......... ತನ್ನ ಕುಲದ ಕುಡಿಗೆ ಹಾದಿ ಮಾಡಲು ಪರಿತಪಿಸುವವ. ಇದು ಅರ್ಥವಾಗಿದ್ದರೆ, ಸುಮ್ಮನೆ, ಮೌನವಾಗಿ, ಒಂದ್ ಹತ್ತು ನಿಮಿಷ ಕುಳಿತು ಯೋಜಿಸಿ, ನಿಮ್ಮ Skill ಮೇಲೆ Work ಮಾಡಿ. UPSC ಗೆ 2 ವರ್ಷ ಓದಿದ ನಂತರ Plan B ಕಡೆಗೆ ನಡೆಯಿರಿ. ನನಗೆ UPSC ಮೇಲೆ ತುಂಬಾ ನಂಬಿಕೆ... ಇ... ತ್ತು.... it's ok. ಇದರ ನಡುವೆ ರಷ್ಯಾ - ಉಕ್ರೇನ್ ಇಸ್ರೇಲ್ - ಪ್ಯಾಲಿಸ್ತೀನ್ & ಇರಾನ್ ಗಳ ಕಚ್ಚಾಟ ಬೇರೆ. ಸ್ವಲ್ಪ ಸ್ವಾರ್ಥಿಗಳಾಗಿ, ಸಮಯ ಉಳಿಸಿಕೊಳ್ಳಿ. Skill Improve ಮಾಡಿಕೊಳ್ಳಿ. 🌳UPSC ಸುಧಾರಣೆಯಾಗಲಿ. ಶುಭವಾಗಲಿ. 💐 - ಪ್ರವೀಣ ಮ ಮಗದುಮ್ಮ

Comments