
Panchajanya IAS UPSC - IAS in Kannada
June 19, 2025 at 02:21 PM
ಹೋದವಾರ, ಬೆಂಗಳೂರಿನಿಂದ ಇಬ್ಬರು ಆಕಾಂಕ್ಷಿಗಳು ಭೇಟಿಗೆ ಬಂದಿದ್ದರು. ಇಬ್ಬರೂ ತಯಾರಿಯನ್ನು ಆರಂಭಿಸಿದ್ದು, 2020 ರಿಂದ.
ಅವರಲ್ಲಿ ಒಬ್ಬರು Bcom ಓದಿದವರು,
ಇನ್ನೊಬ್ಬರು ಬೇರೆ ಉದ್ಯೋಗ ಒಂದನ್ನ ಬಿಟ್ಟು ಇವರ ಜೊತೆ UPSC ತಯಾರಿಗೆ ಬಂದವರು.
"ಕೋಚಿಂಗ್ ತೆಗೆದುಕೊಳ್ಳುವ ಅಗತ್ಯವಿಲ್ಲ" ಎನ್ನುವ ಗಾಳಿ ಮಾತನ್ನು ನಂಬಿ,
ಮೊದಲ ವರ್ಷ ಕೇವಲ Test Series ಗಳಿಗೆ ಹಾಜರಾಗಿ, 2021 ರ ಪರೀಕ್ಷೆ ಬರೆದಾಗ, ಫಲಿತಾಂಶ ಫೇಲ್!
ತದ ನಂತರ, "ಸರಿ, ಈ ಬಾರಿ ಕೋಚಿಂಗ್ ತೆಗೆದುಕೊಂಡು, ಚೆನ್ನಾಗಿ ಬರೆಯೋಣ" ಅಂತ ನಿರ್ಧರಿಸಿ, ಬೆಂಗಳೂರಿನಲ್ಲಿ ಕೋಚಿಂಗಗೆ ಸೇರಿದರು.
ಅಲ್ಲಿಯ ತರಗತಿಯಲ್ಲಿನ ಜನದಟ್ಟಣೆಗೋ,
ಇವರ ಆಂಗ್ಲ ಭಾಷೆಯ ಮೇಲಿನ ಹಿಡಿತದ ಕೊರತೆಗೋ, ಹಾಗೋ ಹೀಗೋ ತರಬೇತಿ ಮುಗಿದರೂ, Conceptual clarity ಅನ್ನುವುದು ಸಿಕ್ಕಿಲ್ಲ.
ಒಂಬತ್ತು ತಿಂಗಳಲ್ಲಿ ಮುಗಿಸುತ್ತೇವೆಂದ ಸಂಸ್ಥೆಯ ತರಗತಿಗಳು ಮುಗಿಯಲು,
ಹದಿನೆಂಟು ತಿಂಗಳಾಗಿತ್ತು!
ಇದರ ನಡುವೆಯೇ, 2022ರ Prelims ಬರೆದು ಅದರಲ್ಲೂ ಸೋತರು.
ಇನ್ನು, 2023ರ Prelims ಎಂಥೆಂಥಾ ಘಟಾನುಘಟಿಗಳನ್ನೇ ಮಕಾಡೆ ಮಲಗಿಸಿದಾಗ, ಅದರಲ್ಲಿ ಇವರು ಗೆಲ್ಲಲು ಹೇಗೆ ಸಾಧ್ಯ?
ಅಲ್ಲಿಯೂ ಸೋಲಿನ ಸರಣಿ ಮುಂದುವರೆಯಿತು.
ಇದರ ನಡು-ನಡುವೆ ಕನ್ನಡದಲ್ಲಿ Notes ಮಾಡುವುದು, Answer Writing ಮಾಡುವುದನ್ನೆಲ್ಲಾ ತುಂಬಾ ಮಾಡಿದ್ದಾರೆ.
ಬೆಳಗಾವಿಗೆ ಅವರ ಪ್ರಯತ್ನದ ಹೊತ್ತಗೆಗಳನ್ನು ಹೊತ್ತು ತಂದು, ನಮ್ಮ ಮೇಜಿನ ಮೇಲಿಟ್ಟಾಗ,
ಅದೇ ಅವರ ಪ್ರಯತ್ನಕ್ಕೆ ಸಾಕ್ಷಿ ಎನ್ನುವಂತಿತ್ತು.
ಹೀಗೆ ಸತತ 3 ಪ್ರಯತ್ನಗಳಲ್ಲು Prelims ಪಾಸಾಗದಿದ್ದಾಗ, ಯಾರಾದರೂ, ಕನಿಷ್ಠ 1 ವರ್ಷ Break ತೆಗೆದುಕೊಂಡು, ಮುಂದಿನ ವರ್ಷ ಬರೆಯುತ್ತಾರೆ.
Even, 2018 ರ UPSC Topper, ಅನುದೀಪ್ ದುರಿಶೆಟ್ಟಿ ಕೂಡ, 1 Year Skip ಮಾಡಿದ್ದರು.
ಆದರೆ, ಈ ಆಕಾಂಕ್ಷಿಗಳು ಅದರ ಬಗ್ಗೆ ಯೋಚಿಸಿಯೇ ಇಲ್ಲ. ಹಾಗಂತಾ, ಇವರು ಹಳ್ಳಿ ಗುಗ್ಗುಗಳಾ? No, ಪಕ್ಕಾ ಬೆಂಗಳೂರಿನವರೇ!
ಅದೇ ನಗರದವರೇ!
ಅದೇ ವಿಜಯನಗರದ ಚಂದ್ರ ಲೇಔಟಿನಲ್ಲಿನ ಲೈಬ್ರರಿಗಳಲ್ಲಿ, ಗೋಣು ಬಾಗಿಸಿ, ಮನವ ತೆರೆದು ಓದಿದವರೇ!
ಇವರಿಗೆ, ಯಾವ ಕರ್ಮಕ್ಕೋ ಏನೋ,
ಯಾರೂ ಕೂಡ 1 ವರ್ಷ Break ತೆಗೆದುಕೊಳ್ಳಲು ಹೇಳಿಲ್ಲ,
2024 ರಲ್ಲೂ, List ನಲ್ಲಿ ಹೆಸರಿಲ್ಲ,
ಅದಾದ ಮೇಲಾದರೂ ನಿಲ್ಲಿಸಿದರಾ?
No, ಈ ವರ್ಷ 2025 ರ Prelims ಕೂಡ ಬರೆದರು!
General Category ಯ ಇವರಿಗೆ ಈಗ ಉಳಿದಿರುವುದು, 1 Attempt ಮಾತ್ರ!
ಒಂದೆರಡು ಗಂಟೆ ದೀರ್ಘವಾಗಿ, ಅವರ ತಯಾರಿ ಕುರಿತು ತಿಳಿದುಕೊಂಡು, ಒಂದು Plan ಮಾಡಿ ಕೊಟ್ಟೆ.
ಮುಂದಿನ ವರ್ಷ ಕೊನೆಯ Attempt,
ಮನೆಯವರ ಒತ್ತಡ ಒಂದುಕಡೆ, ಇನ್ನೊಂದು ಕಡೆ ಸತತ 5 ಸೋಲಿನ ಪೆಟ್ಟುಗಳ ಗಾಯ ಇನ್ನೂ ಮಾಸಿಲ್ಲ.
Let's wish them good luck 🤞.
ಇದನ್ನೇಕೆ ಹೇಳಿದೆ, ಅಂದರೆ,
UPSC ಕೋಚಿಂಗ್ ಗೆ ಸೇರಿದ ನಂತರ,
ಆರಾಮಾಗಿ,
ದೊಡ್ಡ ಹಡಗಿನ ಡೆಕ್ಕಿನ ಮೇಲೆ ಮಲಗಿದಂತೆ,
ಮೈಮರೆತರೆ, You will definitely fail.
ಯಾವ ಕೋಚಿಂಗ್ ಸಂಸ್ಥೆಯೂ ಕೂಡ Perfect ಅಲ್ಲ.
ಎಲ್ಲಾ ಕಡೆ ಒಂದಿಲ್ಲೊಂದು ನ್ಯೂನತೆಗಳು ಇದ್ದೇ ಇರುತ್ತವೆ.
ನೀವು ಜಾಗೃತರಾಗಿರಬೇಕು.
ಜಗತ್ತನ್ನ ಕಣ್ತೆರೆದು ನೋಡಬೇಕು.
ಅದಕ್ಕೆ ಇನ್ನೊಂದು ಉದಾಹರಣೆ,
ಈ ಮೇಲೆ ಹೇಳಿದ ಕಥೆಯ ನಾಯಕರು ತೆಗೆದುಕೊಂಡ ಸಂಸ್ಥೆಯಲ್ಲೇ ಇನ್ನೊಬ್ಬ ವಿದ್ಯಾರ್ಥಿ ತರಬೇತಿ ತೆಗೆದುಕೊಂಡಿದ್ದರು,
ಅವರೂ ಕೂಡ Pure ಕನ್ನಡ ಮಾಧ್ಯಮದ ಆಕಾಂಕ್ಷಿ, ಆರಂಭದಲ್ಲಿ, The Hindu ದಿನ ಪತ್ರಿಕೆ ಅರ್ಥವಾಗದೆ ಎಷ್ಟೋ ಬಾರಿ ಅತ್ತಿದ್ದರಂತೆ!
ಸತತ 3 ಪ್ರಯತ್ನಗಳಲ್ಲಿ Prelims Fail!
2024 ರಲ್ಲಿ Prelims Pass,
Mains ನಲ್ಲಿ ಇಂಗ್ಲಿಷಿನಲ್ಲೇ ಬರೆದು, ಕೇವಲ 15 ಅಂಕಗಳಿಂದ Interview call miss ಆಗಿದೆ.
So,
ಈ ವರ್ಷ Break ತೆಗೆದುಕೊಂಡಿದ್ದಾರೆ,
2026 ರ ಪ್ರಯತ್ನದಲ್ಲಿ, ಅತ್ಯುತ್ತಮ Rank ಪಡೆಯಲಿದ್ದಾರೆ.
ಇನ್ನೊಬ್ಬರು, ಇದೆ ಬೆಳಗಾವಿಯವರು,
2021 ರಿಂದ ಓದುತ್ತಿದ್ದಾರೆ, ತಂದೆ - ತಾಯಿಯೊಂದಿಗೆ ಬಂದಿದ್ದರು.
ಸಿಕ್ಕಾಪಟ್ಟೆ Hardworking student,
ತುಂಬಾ ಅಚ್ಚುಕಟ್ಟಾಗಿ Notes ಮಾಡಿಕೊಂಡಿದ್ದಾರೆ.
4 Attempt ಬರೆದಿದ್ದಾರೆ,
4 ರಲ್ಲೂ Prelims fail.
ಸರಿಯಾದ ಮಾರ್ಗದರ್ಶನದ ಕೊರತೆ ಇವರೆಲ್ಲರನ್ನು ಹಿಂಡಿ ಹಿಪ್ಪೆ ಮಾಡಿದೆ.
ನನಗಾದದ್ದು ಇದೇ ಸಮಸ್ಯೆ. ಹಾಗಾಗಿಯೇ, ನಾವು ಈ ಕಾಯಕಕ್ಕೆ ಇಳಿಯಲೇ ಬೇಕಾಯಿತು.
ಸದ್ಯ, ಇವರೆಲ್ಲರೂ ಪಾಂಚಜನ್ಯದ ಒಂದಿಲ್ಲೊಂದು ಕೋರ್ಸಗಳಿಗೆ ಸೇರಿಕೊಂಡಿದ್ದಾರೆ, ಇವರ ಮೇಲೆ ವಿಶೇಷ ನಿಗಾ ಇಟ್ಟು ತಯಾರಿ ಮಾಡಿಸುತ್ತಿದ್ದೇವೆ.
Let's see...
ಆದರೆ,
ಒಂದಂಶ ನೆನಪಿಡಿ,
ಮೈಮರೆಯದಿರಿ.
Be alert ⚠️
Protect yourself! 🔥
ಹುಲಿ ಬೇಟೆಗೆ ಹೋದವರು,
ಕಾಡಿನಲ್ಲಿ ನಿದ್ದೆ ಮಾಡಿದರೆ,
ಅವರನ್ನು, ಹುಲಿಗಳೇ ತಿಂದು ತೇಗುತ್ತವೆ.
ಮೈಯೆಲ್ಲಾ ಕಣ್ಣಾಗಿರಲಿ,
Don't trust anyone blindly.
ನಿಮ್ಮ ಭವಿಷ್ಯ, ನಿಮ್ಮ ಕೈಯಲಿದೆ.
IAS ನಲ್ಲಿ ಕೋಚಿಂಗ್ ಮೊದಲ ಹಂತ,
Planned Guidance 2ನೇ ಹಂತ.
Never miss 2nd one.
Planned guidance ಕುರಿತು
ಆಗಾಗ, free ಯಾಗಿ ಇದೇ Telegram ನಲ್ಲಿ,
YouTube ನಲ್ಲಿ ಬರಹ/ವಿಡಿಯೋಗಳನ್ನು ಹಾಕುತ್ತಿರುತ್ತೇವೆ...
ತಪ್ಪದೇ ನೋಡಿ, ತಿದ್ದಿಕೊಳ್ಳಿ.
ಈ ವಿಷವರ್ತುಲದಿಂದ ಹೊರಬನ್ನಿ,
ಬಿಲ್ಲಿನಿಂದ ಬಾಣ ಚಿಮ್ಮುವಂತೆ,
ಚಿಮ್ಮಿ, ಗೆದ್ದು ರಾರಾಜಿಸಿ.
ಶುಭವಾಗಲಿ 💐
-
ಪ್ರವೀಣ ಮ ಮಗದುಮ್ಮ