
Dr. Dhananjaya Sarji
June 12, 2025 at 07:51 AM
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದದಿನದಿಂದಲೂ ಹಿಂದೂ ಪರ ಸಂಘಟನೆಗಳು,ಮುಖಂಡರು,
ಚಿಂತಕರು ಹಾಗೂ ಹಿಂದೂ ಕಾರ್ಯಕರ್ತರುಗಳನ್ನು ಟಾರ್ಗೆಟ್ ಮಾಡುತ್ತಿದೆ. ಇದೀಗ ಹಿಂದೂ ಪರ ಚಿಂತಕ ಖ್ಯಾತ ವಾಗ್ಮಿಗಳು ಹಾಗೂ ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ರಾಜ್ಯದ ವಿವಿಧೆಡೆ ದಾಖಲಾಗಿರುವ ಎಲ್ಲಾ FIRಗಳನ್ನು ಕ್ರೂಢೀಕರಿಸಿ ಕಳುಹಿಸಬೇಕೆಂದು ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಿದೆ. ಇದು ದ್ವೇಷ ಪೂರಿತ ಮತ್ತು ಓಲೈಕೆ ರಾಜಕಾರಣವಾಗಿದೆ.
ಚಕ್ರವರ್ತಿ ಸೂಲಿಬೆಲೆ ಅವರು ದೇಶ, ಧರ್ಮ, ಸಮಾಜ ಜಾಗೃತಿಯ ಕುರಿತು ಭಾಷಣ ಮಾಡುತ್ತಾರೆಯೇ ವಿನಃ ಕೊಲ್ಲುವ, ಹಲ್ಲೆ ಮಾಡುವ ಸೇರಿದಂತೆ ಯಾವುದೇ ಸಮಾಜಘಾತುಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿಲ್ಲ. ಸಮಾಜ ಜಾಗೃತಿ ಮೂಡಿಸುವಲ್ಲಿ ಚಕ್ರವರ್ತಿಯವರ ಪಾತ್ರ ಮಹತ್ವದ್ದಾಗಿದೆ. ರಾಜ್ಯದ ಯುವ ಸಮೂಹ ಚಕ್ರವರ್ತಿ ಸೂಲಿಬೆಲೆಯವರ ಬೆಂಬಲಕ್ಕಿದೆ.
ಪೊಲೀಸರನ್ನು ಬಳಸಿಕೊಂಡು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸಕ್ಕೆ ಕೈ ಹಾಕಿದರೆ, ಚಿಂತಕ ಸೂಲಿಬೆಲೆಯವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಯಾವುದೇ ರೀತಿಯ ಕಿರುಕುಳ ನೀಡಲು ಮುಂದಾದರೆ ಕಾರ್ಯಕರ್ತರ ಹಾಗೂ ಮುಖಂಡರ ರಕ್ಷಣೆಗೆ ಭಾರತೀಯ ಜನತಾ ಪಾರ್ಟಿ ಕಟಿಬದ್ಧವಾಗಿ ಹೋರಾಡಲಿದೆ.
