Dr. Dhananjaya Sarji
Dr. Dhananjaya Sarji
June 16, 2025 at 03:50 PM
ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಅವಮಾನ, ಸಾರ್ಥಕತೆ ಇಲ್ಲದೇ ಜೀವಿಸಿದರೇ ಬದುಕಿಗೆ ಅವಮಾನ. ಬದುಕು ಇರುವುದು ಬಾಳಲು, ಬಳಲಲು ಅಲ್ಲ, ಬದುಕು ಇರುವುದು ಸವಿಯಲು, ಸವೆಯಲು ಅಲ್ಲ. ಬದುಕು ಇರುವುದೇ ಸಂತಸ ಪಡಲು, ಸಂಕಟ ಪಡಲು ಅಲ್ಲ, ಬದುಕು ಸಂಗ್ರಾಮಕ್ಕಿಂತ ಸಂಭ್ರಮವಾದರೆ ಚೆನ್ನ, ಬದುಕು ಚಿನ್ನ. ಎಂಬ ಮಾತಿನಂತೆ ಬದುಕಿನಲ್ಲಿ ಆದರ್ಶವನ್ನಿಟ್ಟುಕೊಂಡು ಸಮಾಜವನ್ನು ಸರಿ ದಾರಿಯಲ್ಲಿ ಕೊಂಡುಯ್ಯುತ್ತಿರುವ ಶ್ರಮ ಜೀವಿಗಳು, ಹಿರಿಯರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಾಮನೂರು ಶಿವಶಂಕರಪ್ಪ ಅವರ 95ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ಅವರೊಂದಿಗೆ ಅವರ ಸ್ವಗೃಹಕ್ಕೆ ಭೇಟಿ ನೀಡಿ ಜನ್ಮದಿನದ ಶುಭಕೋರಿ, ಆಶೀರ್ವಾದ ಪಡೆಯಲಾಯಿತು. ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಶಂಕರ್ ಬಿದರಿ ಅವರು, ವೀರಶೈವ ಸಮಾಜದ ನಿರ್ದೇಶಕರಾದ ಶ್ರೀ ಬಾಳೆಕಾಯಿ ಮೋಹನ್ ಅವರು ಸೇರಿದಂತೆ ಮತ್ತಿತರರು ಜೊತೆಗಿದ್ದರು. https://www.facebook.com/share/p/1FseC4WHER/

Comments