
Dr. Dhananjaya Sarji
June 18, 2025 at 01:12 PM
ಆತ್ಮೀಯರು, ಶ್ರೀ ಬಸವೇಶ್ವರ ವೀರಶೈವ ಸಮಾಜದ ನಿರ್ದೇಶಕರು, ಬಸವೇಶ್ವರ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷರು, ಸಿಟಿ ಕ್ಲಬ್, ಶಿವಮೊಗ್ಗ, ಇನ್ನೂ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀ ಕೆ ಸಿ ನಾಗರಾಜ್ ಇವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು,
ನಾಗರಾಜ್ ಅವರ ಧರ್ಮಪತ್ನಿ ಶ್ರೀಮತಿ ರೇಣುಕ ನಾಗರಾಜ್ ರವರು ನಗರಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾ , ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಿದ್ದ ಅವರ ಸ್ವಭಾವ ನಿಜಕ್ಕೂ ಸ್ಮರಣೀಯ ಸದಾ ಕಾಲ ನಗುಮುಖದಿಂದ ಎಲ್ಲರೊಂದಿಗೆ ಸ್ನೇಹಪರವಾಗಿ ಬೆರೆಯುತ್ತಿದ್ದ ನಾಗರಾಜ್ ಅವರು ಇಲ್ಲದಿರುವುದು ಅತ್ಯಂತ ದುಃಖದ ಸಂಗತಿ
ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ

🙏
2